ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bank Janardhan: ಬರೋಬ್ಬರಿ 800 ಚಿತ್ರಗಳ ಸರದಾರ... ಬ್ಯಾಂಕ್‌ ಬ್ಯಾಲೆನ್ಸೇ ಇಲ್ಲದ ಜನಾರ್ದನ್‌!

Bank Janardhan passed away: 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ಧನ್ ನಾಟಕಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು. ಅಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರ ಬಳಿ ಕೊನೆಗಾಲದಲ್ಲಿ ಬ್ಯಾಂಕ್‌ ಬ್ಯಾಲೆನ್ಸೇ ಇರಲಿಲ್ಲವಂತೆ. ಈ ಬಗ್ಗೆ ಒಮ್ಮೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು

ಒಂದಲ್ಲ... ಎರಡಲ್ಲ ಬರೋಬ್ಬರಿ 800 ಚಿತ್ರಗಳ ಸರದಾರ ಬ್ಯಾಂಕ್‌ ಜನಾರ್ದನ್‌

ಬ್ಯಾಂಕ್ ಜನಾರ್ದನ್

Profile Sushmitha Jain Apr 14, 2025 4:19 PM

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ, ಹಾಸ್ಯ ನಟ ಬ್ಯಾಂಕ್‌ ಜನಾರ್ದನ್‌(Bank Janardhan) ಅವರು ಇಂದು ನಿಧನರಾಗಿದ್ದಾರೆ (Passes Way). ನಟನ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್‌ ಜನಾರ್ಧನ್‌ ಕೊನೆಯುಸಿರೆಳೆದಿದ್ದಾರೆ. 1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಬ್ಯಾಂಕ್‌ ಜನಾರ್ಧನ್‌ ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲಿಯೇ ಪೂರೈಸಿದ್ದರು. ರಂಗಭೂಮಿ ಕಲಾವಿದರಾಗಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದ ಅವರು, ಕನ್ನಡದ 60ಕ್ಕೂ ಅಧಿಕ ಚಿತ್ರಗಳು ಹಾಗೂ ಟಿವಿ ಸೀರಿಯಲ್‌ಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು, ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ ಅವರ ಸಮಕಾಲೀನರು ಅವರೊಂದಿಗೆ ಮಾತ್ರವಲ್ಲದೆ, ತಮ್ಮ ನಂತರ ಬಂದ ಹಾಸ್ಯನಟರಾದ ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌ ಸೇರಿದಂತೆ ಇನ್ನೂ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು. 2005ರ ನ್ಯೂಸ್‌, 1993ರ ಶ್‌ ಹಾಗೂ 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದಲ್ಲಿನ ಇವರ ಪಾತ್ರಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.

800ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ದನ್‌ ನಾಟಕಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು. ಅಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರ ಬಳಿ ಕೊನೆಗಾಲದಲ್ಲಿ ಬ್ಯಾಂಕ್‌ ಬ್ಯಾಲೆನ್ಸೇ ಇರಲಿಲ್ಲವಂತೆ. ಈ ಬಗ್ಗೆ ಒಮ್ಮೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದರು. ಇವತ್ತಿನ ಪೋಷಕ ಕಲಾವಿದರು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ. ನಮ್ಮ ಕಾಲದಲ್ಲಿ ಅಷ್ಟೆಲ್ಲಾ ಕೊಡುತ್ತಿರಲಿಲ್ಲ. ನನ್ನ ಹೆಸರಿನಲ್ಲಿ ಬ್ಯಾಂಕ್ ಇದೆ. ಆದರೆ ನನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಏನಿಲ್ಲ ಅಂದಿದ್ದರು.

ಆರಂಭದ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬ್ಯಾಂಕ್ ಜನಾರ್ದನ್ ಅವರು, ಕಾಶಿನಾಥ್ ಅವರ 'ಅಜಗಜಾಂತರ' ಸಿನಿಮಾದಲ್ಲಿ ಕಾಮಿಡಿ ವಿಲನ್ ಪಾತ್ರ ಮಾಡಿದ್ದರು. ಅದು ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ನಂತರ 'ರಿಯಲ್ ಸ್ಟಾರ್' ಉಪೇಂದ್ರ ನಿರ್ದೇಶನ ಮಾಡಿದ್ದ 'ತರ್ಲೆ ನನ್ಮಗ' ಸಿನಿಮಾದಲ್ಲಿ ಹೀರೋ ತಂದೆಯ ಪಾತ್ರ ಮತ್ತೊಂದು ಆಯಾಮ ನೀಡಿದ್ದರೆ, 'ಶ್‌(Shhh!)' ಸಿನಿಮಾದಲ್ಲಿನ ಇವರ ಪೊಲೀಸ್ ಅಧಿಕಾರಿ ಕಾಳಪ್ಪ ಪಾತ್ರ ಅಣ್ಣವರಿಗೂ ಅಚ್ಚುಮೆಚ್ಚಾಗಿತ್ತಾಂತೆ.

ಹೌದು ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸ್ವತ: ಬ್ಯಾಂಕ್ ಜನಾರ್ದನ್‌ ಅವರೇ ಈ ಕುರಿತು ಹೇಳಿ ಕೊಂಡಿದ್ದು, ಅಣ್ಣಾವು ಡಾ ರಾಜ್‌ ಕುಮಾರ್(Dr Rajkumar) ಮೂರು ಸಲ ನೋಡಿದ್ರು. ಆ ಟೈಮ್‌ನಲ್ಲಿ ಅಣ್ಣಾವಿಗೆ ಎಲ್ಲಾದರೂ ನಾನು ಸಿಕ್ಕರೆ, "ಏನಿ ಜನಾರ್ದನ್ ಅವರೇ, 'ಶ್!!' ಸಿನಿಮಾದಲ್ಲಿ ಅದೇನ್ ಬೈದಿದ್ದೀರಾ.. ಬೈದಿದ್ದೀರಾ.. ಅದಲ್ಲಿ ಕಲಿತ್ರಿ ನೀವು ಆ ಬೈಗುಳಾನ. ಎಲ್ಲರೂ ನನ್ನ ಅಭಿಮಾನಿ ಅಂತಾರ, ಆ ಪಿಚ್ಚರ್‌ನಲ್ಲಿನ ನಿಮ್ಮ ಪಾತ್ರಕ್ಕೆ ನಾನು ಅಭಿಮಾನಿ" ಅಂದ್ರು. ನಟನೆ ಬಿಟ್ಟು ಬೇರೆ ಏನ್ ಮಾಡ್ತಿದ್ದೀರಾ ಅಂತ ಕೇಳಿದ್ರು. ಬ್ಯಾಂಕ್‌ನಲ್ಲಿ ಅಂದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಬಿಡಬೇಡಿ. ನಟನೆ ಹೇಳಕ್ಕೆ ಆಗಲ್ಲ.. ಅದೂ ಇರಲಿ ಎಂದಿದ್ದರು. ಹೇಳಬೇಕೆಂದರೆ ಪರಕಾಶ ಪ್ರವೇಶ ಮಾಡಿ ಆ ಪಾತ್ರಕ್ಕೆ ಬ್ಯಾಂಕ್ ಜನಾರ್ದನ್‌ ಜೀವ ತುಂಬಿದ್ದರು. ಅವರ ಆ ನಟನೆಯ ಮೂಲಕ ಪ್ರೇಕ್ಷಕರಿಗೆ ಸಾಕಷ್ಟು ಹತ್ತಿರವಾದರು.

ಈ ಸುದ್ದಿಯನ್ನು ಓದಿ: Actor Bank Janardhan: ಕನ್ನಡ ಜತೆಗೆ ತುಳು, ತಮಿಳು, ತೆಲುಗು ಚಿತ್ರಗಳಲ್ಲೂ ನಟನೆ; ಬ್ಯಾಂಕ್‌ ಜನಾರ್ದನ್‌ ಸಿನಿ ಜರ್ನಿ ಹೇಗಿತ್ತು?

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ದನ್

ಇನ್ನು 'ನವರಸ ನಾಯಕ' ಜಗ್ಗೇಶ್ ಅವರ ಅನೇಕ ಸಿನಿಮಾಗಳಲ್ಲಿ ಬ್ಯಾಂಕ್‌ ಜನಾರ್ದನ್ ಅವರು ಬಣ್ಣ ಹಚ್ಚಿದ್ದು, ರಂಗಭೂಮಿ ಹಿನ್ನೆಲೆಯಿಂದ ಬಂದ ಬ್ಯಾಂಕ್ ಜನಾರ್ದನ್‌ ಅವರು ಪೋಷಕ ನಟರಾಗಿದ್ದು, 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಮ್ಯಾನರಿಸಂನಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 'ಅಜಗಜಾಂತರ', 'ತರ್ಲೆ ನನ್ಮಗ', 'ಶ್‌', 'ರೂಪಾಯಿ ರಾಜ', 'ಚೆಲುವ', 'ಮೇಕ್‌ಅಪ್‌', 'ರಂಗ ಎಸ್‌ಎಸ್‌ಎಲ್‌ಸಿ', 'ಲಿಫ್ಟ್‌ ಕೊಡ್ಲಾ' ಸೇರಿದಂತೆ ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬ್ಯಾಂಕ್ ಜನಾರ್ದನ್ ನಟಿಸಿರುವ ಪ್ರಮುಖ ಸಿನಿಮಾಗಳು

'ರೂಪಾಯಿ ರಾಜ, 'ಚೆಲುವ', 'ಮೇಕ್‌ಅಪ್‌', 'ರಂಗ ಎಸ್‌ಎಸ್‌ಎಲ್‌ಸಿ', 'ಲಿಫ್ಟ್‌ ಕೊಡ್ಲಾ' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅವಕಾಶಗಳು ಕಮ್ಮಿ ಆಗಿವೆ. ಈ ವರ್ಷ ತೆರೆಕಮಡ 'ಉಂಡೇನಾಮ' ಅನ್ನೋ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಅನೇಕ ಧಾರಾವಾಹಿಗಳಲ್ಲಿ ಬ್ಯಾಂಕ್ ಜನಾರ್ದನ್ ನಟಿಸಿದ್ದಾರೆ. ಕಂಪನಿ ನಾಟಕಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ಅಂದಹಾಗೆ, ಬ್ಯಾಂಕ್ ಜನಾರ್ದನ್ ಅವರು ಮೂಲತಃ ಬ್ಯಾಂಕ್ ನೌಕರ. ಹಾಗಾಗಿಯೇ ಅವರ ಹೆಸರಿನ ಮುಂದೆ ಬ್ಯಾಂಕ್ ಸೇರ್ಪಡೆ ಆಗಿದೆ.