ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uorfi Javed: ಲಿಪ್ ಫಿಲ್ಲರ್ ಚಿಕಿತ್ಸೆ ಬಳಿಕ ಈಗ ಉರ್ಫಿ ಜಾವೇದ್ ಹೇಗಿದ್ದಾರೆ ಗೊತ್ತಾ?

ಟೆಲಿವಿಶನ್ ಶೋ ಹಾಗೂ ಸಿನಿಮಾ ಮೂಲಕ ಖ್ಯಾತಿ ಪಡೆದ ಉರ್ಫಿ ಇತ್ತೀಚೆಗಷ್ಟೆ ಲಿಪ್ ಫಿಲ್ಲರ್ ಸರ್ಜರಿ ಕುರಿತು ವಿಡಿಯೊ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಅಭಿಮಾನಿಗಳು ಆಘಾತಗೊಂಡಿದ್ದರು. ವಿಡಿಯೋ ಕಂಡ ಅಭಿಮಾನಿಗಳು ಇದು ನಿಜಕ್ಕೂ ಉರ್ಫಿನಾ ಎಂದು ಅಚ್ಚರಿಗೊಂಡಿದ್ದರು. ಇದೀಗ ಅದರ ಬೆನ್ನಲ್ಲೆ ಉರ್ಫಿ ಅವರು ಲಿಪ್ ಫಿಲ್ಲರ್ ಹೊಸ ವಿಡಿಯೊ ಒಂದು ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಲಿಪ್ ಫಿಲ್ಲರ್ ಚಿಕಿತ್ಸೆ ಬಳಿಕ ವಿಡಿಯೊ ಹಂಚಿಕೊಂಡ ಉರ್ಫಿ ಜಾವೇದ್!

Uorfi Javed

Profile Pushpa Kumari Aug 3, 2025 1:50 PM

ನವದೆಹಲಿ: ಸೋಶಿಯಲ್ ಮಿಡಿಯಾ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮಾಡೆಲ್ ಉರ್ಫಿ ಜಾವೇದ್ (Uorfi Javed) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಫ್ಯಾಷನ್‌ಗಾಗಿ ವಿಚಿತ್ರ ರೀತಿಯ ಪ್ರಯೋಗ ಮಾಡುತ್ತಲೇ ಸೋಶಿಯಲ್ ಮಿಡಿಯಾದಲ್ಲಿ ಅಪಾರ ಅಭಿಮಾನಿ ಬಳಗವನ್ನು ಕೂಡ ಇವರು ಹೊಂದಿದ್ದಾರೆ. ಟೆಲಿವಿಶನ್ ಶೋ ಹಾಗೂ ಸಿನಿಮಾ ಮೂಲಕ ಖ್ಯಾತಿ ಪಡೆದ ಉರ್ಫಿ ಇತ್ತೀಚೆಗಷ್ಟೆ ಲಿಪ್ ಫಿಲ್ಲರ್ ಸರ್ಜರಿ ಕುರಿತು ವಿಡಿಯೊ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಅಭಿಮಾನಿಗಳು ಆಘಾತಗೊಂಡಿದ್ದರು. ವಿಡಿಯೊ ಕಂಡ ಅಭಿಮಾನಿಗಳು ಇದು ನಿಜಕ್ಕೂ ಉರ್ಫಿನಾ ಎಂದು ಅಚ್ಚರಿಗೊಂಡಿದ್ದರು. ಇದೀಗ ಅದರ ಬೆನ್ನಲ್ಲೆ ಉರ್ಫಿ ಅವರು ಲಿಪ್ ಫಿಲ್ಲರ್ ಹೊಸ ವಿಡಿಯೊ ಒಂದು ಹಂಚಿಕೊಂಡಿದ್ದು ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನಪ್ರಿಯವಾದ ನಟಿ ಉರ್ಫಿ ತನ್ನ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ತಮ್ಮ ತುಟಿಗಳು ದಪ್ಪವಾಗಿರುವ ಕಾರಣ ಅವುಗಳನ್ನು ತೆಳ್ಳಗೆ ಮಾಡಲು ಈಗಾಗಲೇ ಅನೇಕ ಚಿಕಿತ್ಸೆ ಪಡೆದಿದ್ದು ಲಿಪ್ ಫಿಲ್ಲರ್ ಚಿಕಿತ್ಸೆ ಮಾಡಿಕೊಳ್ಳುವ ಬಗ್ಗೆ ವಿಡಿಯೊವೊಂದನ್ನು ಉರ್ಫಿ ಶೇರ್ ಮಾಡಿದ್ದರು. ಆ ವಿಡಿಯೊದಲ್ಲಿ ಅವರ ಮುಖ ಬಹಳ ವಿಕಾರವಾಗಿ, ದಪ್ಪವಾಗಿ ಕಂಡಿದ್ದು ಅವರ ಸಹಜ ಸೌಂದರ್ಯ ಕಳೆಗುಂದಿದಂತೆ ಇತ್ತು. ಇದೀಗ ಅವರು ಮತ್ತೆ ತಾನು ನ್ಯಾಚುರಲ್ ಆಗಿ ಸುಂದರವಾಗಿ ಕಾಣುತ್ತಿದ್ದೇನೆ ಎಂದು ತಿಳಿಸಿದ್ದ ವಿಡಿಯೋ ಒಂದು ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ನಟಿ ಉರ್ಫಿ ಅವರು ಲಿಪ್ ಫಿಲ್ಲರ್ ಮೊದಲು ಮತ್ತು ನಂತರ ಎಂಬರ್ಥದಲ್ಲಿ ಕಾಣಿಸಿಕೊಂಡಿದ್ದಾರೆ. ಜನರು ನನ್ನ ಲುಕ್ ಬಗ್ಗೆ ಹೀಗೆ ಯೋಚಿಸ್ತಾರೆ ಆದರೆ ನಿಜವಾಗಿ ನಾನು ಹೀಗೆ ಕಾಣುತ್ತಿದ್ದೇನೆ ಎಂದು ವಿಡಿಯೋ ಮೇಲೆ ಕ್ಯಾಪ್ಶನ್ ನೀಡಿದ್ದಾರೆ. ವೈಟ್ ಕಲರ್ ಸ್ಕರ್ಟ್ ಮತ್ತು ಸ್ಕಾರ್ಫ್ ಧರಿಸಿ ಫಿಲ್ಟರ್ ಮಾಡದೆ, ಬಹಳ ನ್ಯಾಚುರಲ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ:Kandeelu Movie: ʼಕಂದೀಲುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ನಿರ್ದೇಶಕಿ ಯಶೋದ ಪ್ರಕಾಶ್‌

ನನ್ನ ಲಿಪ್ಸ್ ಈಗ ಈ ರೀತಿಯಾಗಿ ಕಾಣಿಸುತ್ತಿದೆ. ಆದರೆ ಇದನ್ನು ಎಲ್ಲರೂ ಟ್ರೈ ಮಾಡಬೇಡಿ. ಸರಿಯಾದ ವೈದ್ಯರನ್ನು ಭೇಟಿಯಾದ ಬಳಿಕವೇ ನೀವು ಇದನ್ನು ಮಾಡಿಸಿ ಕೊಳ್ಳಬಹುದು. ಇಂತಹ ಚಿಕಿತ್ಸಾಲಯಗಳನ್ನು ಎಲ್ಲ ವೈದ್ಯರಿಗೆ ಮಾಡಿಸಲು ಸಾಧ್ಯವಿಲ್ಲ. ಹಾಗಾಗಿ ಸರಿಯಾಗಿ ತಿಳಿದು ಅಗತ್ಯವಿದ್ದರೆ ಮಾತ್ರ ಈ ಚಿಕಿತ್ಸೆ ಮಾಡಿಸಿ ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರಿಗೆ ದೊಡ್ಡ ಮಟ್ಟಿಗೆ ಅಭಿಮಾನಿ ಬಳಗವಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 53 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದು ಅವರ ಹೊಸ ವಿಡಿಯೋ ಕೂಡ ಭರ್ಜರಿಯಾಗಿ ವೀವ್ಸ್ ಪಡೆಯುತ್ತಿದೆ. ಉರ್ಫಿ ಇಸ್ ಕಂಬ್ಯಾಕ್, ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ.