ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mark Movie: ʻಸ್ಟಾರ್ʼ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವುದರ ಬಗ್ಗೆ 'ಕಿಚ್ಚ' ಸುದೀಪ್ ಏನಂದ್ರು ನೋಡಿ!

Sudeep'S Mark Movie: ʻಮಾರ್ಕ್‌ʼ ಸಿನಿಮಾ ಟ್ರೇಲರ್ ಬಿಡುಗಡೆ ವೇಳೆ ಸ್ಟಾರ್ ಚಿತ್ರಗಳ ಬಿಡುಗಡೆಯ ಕ್ಲಾಶ್ ಕುರಿತು ಕಿಚ್ಚ ಸುದೀಪ್‌ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ, "ದೀಪಾವಳಿಯಲ್ಲಿ ತರಕಾರಿ ಕಮ್ಮಿಯಾಗಲ್ಲ, ಹಾಗೆಯೇ ಸೀಟ್‌ಗಳು ಕಡಿಮೆಯಾಗುವುದಿಲ್ಲ" ಎಂದು ಸುದೀಪ್‌ ಉತ್ತರ ನೀಡಿದ್ದಾರೆ.

ಬಾಕ್ಸ್‌ಆಫೀಸ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳು ಮುಖಾಮುಖಿ; ಕಿಚ್ಚ ಏನಂದ್ರು?

-

Avinash GR
Avinash GR Dec 7, 2025 7:47 PM

ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ʻಮಾರ್ಕ್ʼ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈ ವೇಳೆ ಸುದೀಪ್‌ ಅವರಿಗೆ ಪತ್ರಕರ್ತರು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದೇನೆಂದರೆ, ಡಿಸೆಂಬರ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರುತ್ತಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, "ಡಿಸೆಂಬರ್ 25ರಂದು ತೆರೆಗೆ ಬರುತ್ತಿರುವ ಸಿನಿಮಾಗಳ ಬಗ್ಗೆ ಮಾತ್ರ ಮಾತಾಡಿ" ಎಂದಿದ್ದಾರೆ. ಅಂದಹಾಗೆ, ಡಿಸೆಂಬರ್ 25ರಂದು ಮಾರ್ಕ್‌ ಜೊತಗೆ ಶಿವರಾಜ್‌ಕುಮಾರ್‌, ಉಪೇಂದ್ರ ಅವರ 45 ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ.

ಬಾಕ್ಸಾಫೀಸ್‌ ಕ್ಲಾಶ್‌ ಬಗ್ಗೆ ಕಿಚ್ಚ ಏನಂದ್ರು?

"ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಹಾಗಂತ ಅಂದು ಮಾರ್ಕೆಟ್‌ನಲ್ಲಿ ತರಕಾರಿ‌ ಕಮ್ಮಿ ಆಗಲ್ಲ, ಮನೆಯಲ್ಲಿ ಅಡುಗೆ‌ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ? ಜನ ಬರದೇ ಇರ್ತಾರಾ..." ಎಂದು ಪ್ರಶ್ನೆ ಮಾಡುವ ಕಿಚ್ಚ ಸುದೀಪ್‌, "ನಾಲ್ಕು ತಿಂಗಳು ಐದು ದಿನ ಶೂಟಿಂಗ್ ನಡೆಸಲಾಗಿದೆ. 80 ಲೊಕೇಷನ್, 15-20 ಸೆಟ್ ಹಾಕಿದ್ದೇವೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ‌, ಟೆಕ್ನಿಕಲ್ ಟೀಮ್ ಹಾಗೂ ಇಡೀ‌ ಕಲಾವಿದರು" ಎಂದು ಹೇಳಿದರು.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಸತ್ಯ ಜ್ಯೋತಿ ಫಿಲ್ಮ್ಸ್‌ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್

"ಇಡೀ ಚಿತ್ರರಂಗ ಇವತ್ತು ಇಲ್ಲಿದೆ. ಈ ರೀತಿ ಕಾರ್ಯಕ್ರಮ ತಿಂಗಳಲ್ಲಿ 3-4 ನಡೆಯುತ್ತಿವೆ. ಮಾರ್ಕ್ ಟ್ರೇಲರ್, ಸಾಂಗ್ ನೋಡಿದಮೇಲೆ ಎದುಸಿರು ತೆಗೆದುಕೊಂಡೆ. ಸುದೀಪ್ ಅವರು ಸೆಟ್ ನಲ್ಲಿ ಎಲ್ಲರ ಗಮನಸೆಳೆದು, ಖುಷಿಯಾಗಿ ಇಡುತ್ತಾರೆ. ನಿರ್ದೇಶಕರದ್ದು ಎರಡನೇ ಚಿತ್ರ ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅವರು ಸುದೀಪ್ ಅವರ ಜೊತೆ ಚಿತ್ರ ಮಾಡಿರುವುದು ಖುಷಿ. ಚಿತ್ರದಲ್ಲಿ ಮಾಡಿದ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ" ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

ವಿತರಣೆ ಮಾಡಲಿದ್ದಾರೆ ಪ್ರಿಯಾ ಸುದೀಪ್

ʻಮಾರ್ಕ್ʼ ಸಿನಿಮಾ ಡಿಸೆಂಬರ್ 25ಕ್ಕೆ ಬರುತ್ತಿದ್ದು, ಈ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ವಿತರಣೆ ಮಾಡಲಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆ ವಿತರಣೆಗೂ ಪ್ರಿಯಾ ಕಾಲಿಟ್ಟದ್ದಾರೆ. ಕೆಆರ್‌ಜೆ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಮಾರ್ಕ್ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.

ಕಿಚ್ಚ ಸುದೀಪ್‌ ರಿಯಾಕ್ಷನ್



ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಕಥೆ ಚಿತ್ರದಲ್ಲಿರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೊಲಿಟಿಕಲ್ ಅಂಶಗಳೂ ಇವೆ. ಪೊಲೀಸ್ ಅಧಿಕಾರಿ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಕಿಚ್ಚ ಸುದೀಪ್‌ ನಟಿಸಿದ್ದು, ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.