Dhurandhar: ರೆಹಮಾನ್ ದಕೈತ್ ಪಾತ್ರದಲ್ಲಿ ಗಮನಸೆಳೆದ ಅಕ್ಷಯ್ ಖನ್ನಾ; 15ನೇ ವಯಸ್ಸಿನಲ್ಲಿ ತಾಯಿಯನ್ನೇ ಕೊಂದ ಈತ ಯಾರು?
ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯದ 'ಧುರಂಧರ್' ಬಾಲಿವುಡ್ ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಪಾಕಿಸ್ತಾನದ ಗ್ಯಾಂಗ್‌ಬೆಲ್ಲಿಯಲ್ಲಿ ನಡೆಯುವ ಅರೆ-ಕಾಲ್ಪನಿಕ ಸ್ಪೈ ಥ್ರಿಲ್ಲರ್ ಚಿತ್ರ ಇದಾಗಿದ್ದು, ನೈಜ ಘಟನೆಗಳಿಂದ ಪ್ರಭಾವಿತವಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಿಭಾಯಿಸಿರುವ ರೆಹಮಾನ್ ದಕೈತ್ ಗಮನ ಸೆಳೆಯುತ್ತಿದ್ದು, ಆತನ ಕ್ರೌರ್ಯ ಬೆಚ್ಚಿ ಬೀಳಿಸುವಂತಿದೆ.
ಅಕ್ಷಯ್ ಖನ್ನಾ ಮತ್ತು ರೆಹಮಾನ್ ದಕೈತ್ -
ನವದೆಹಲಿ, ಡಿ. 10: ಬಾಲಿವುಡ್‌ನ ಬ್ಲಾಕ್ ಬ್ಲಸ್ಟರ್ ಹಿಟ್ ʼಛಾವಾʼ ಚಿತ್ರದಲ್ಲಿ ನಟ ಅಕ್ಷಯ್ ಖನ್ನಾ ಅದ್ಭುತವಾಗಿ ನಟಿಸುವ ಮೂಲಕ ಗಮನ ಸೆಳದಿದ್ದರು. ಈ ಸಿನಿಮಾದಲ್ಲಿ ಅವರು ಔರಂಗಜೇಬ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೆ ಅವರು 'ಧುರಂಧರ್’ (Dhurandhar) ಚಿತ್ರದ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಾಯಕನಾದರೂ ಅವರನ್ನು ಮೀರಿಸುವ ಹಾಗೆ ನಟ ಅಕ್ಷಯ್ ಖನ್ನಾ ಅವರ ಅಭಿನಯವು ಈ ಸಿನಿಮಾದಲ್ಲಿದೆ ಎಂದು ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಕ್ಷಯ್ ಅವರ ರೆಹಮಾನ್ ಬಲೋಚ್ (ರೆಹಮಾನ್ ದಕೈತ್) ಪಾತ್ರದ ಬಗ್ಗೆ, ಆ ಪಾತ್ರದ ಕ್ರೌರ್ಯದ ಬಗ್ಗೆ ಅನೇಕ ವಿಚಾರಗಳು ಮತ್ತೆ ಮುನ್ನಲೆಗೆ ಬಂದಿದೆ. ಹಾಗಾದರೆ ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದ ನೈಜ ಘಟನೆಗಳು ಇನ್ನು ಭೀಕರವಾಗಿತ್ತಾ?
ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯದ 'ಧುರಂಧರ್' ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಪಾಕಿಸ್ತಾನದ ಗ್ಯಾಂಗ್‌ಬೆಲ್ಲಿಯಲ್ಲಿ ನಡೆಯುವ ಅರೆ-ಕಾಲ್ಪನಿಕ ಸ್ಪೈ ಥ್ರಿಲ್ಲರ್ ಚಿತ್ರ ಇದಾಗಿದ್ದು, ನೈಜ ಘಟನೆಗಳಿಂದ ಹೆಚ್ಚು ಪ್ರಭಾವಿತವಾಗಿದೆ. ಹಾಗಾದರೆ ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದ ಆ ಪಾತ್ರ ನಿಜ ಜೀವನದಲ್ಲಿ ಅಷ್ಟೇ ವೈಲೆಂಟ್ ಆಗಿತ್ತ? ಎಂಬ ಚರ್ಚೆ ಸೋಶಿಯಲ್ ಮಿಡಿಯಾದಲ್ಲಿ ನಡೆಯುತ್ತಿದೆ.
ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಸಂಚು ನಡೆಸುವ ಅರೆ-ಕಾಲ್ಪನಿಕ ಕಥೆ ಈ ಸಿನಿಮಾದಲ್ಲಿದೆ. 2000ರ ದಶಕದಲ್ಲಿ ಪಾಕಿಸ್ತಾನದ ಕರಾಚಿಯ ಲಿಯಾರಿಯಲ್ಲಿ ನಡೆದ ಒಂದು ಗ್ಯಾಂಗ್ ಚಟುವಟಿಕೆಯ ಕೆಲವು ಕಾರ್ಯಾಚರಣೆಯ ಕಥೆಯೇ ʼಧುರಂಧರ್ʼ ಸಿನಿಮಾದ ಕೇಂದ್ರ ಬಿಂದು. ಪಾಕಿಸ್ತಾನದ ಮೊಹಮ್ಮದ್ ದಾದಲ್ ಕುಟುಂಬದಲ್ಲಿ 1979ರಲ್ಲಿ ಸರ್ದಾರ್ ಅಬ್ದುಲ್ ರೆಹಮಾನ್ ಬಲೋಚ್ ಜನಿಸಿದನು. ಆತನನ್ನು ರೆಹಮಾನ್ ದಕೈತ್ ಎಂದು ಆಪ್ತರು ಕರೆಯುತ್ತಿದ್ದರು.
ವಿಡಿಯೊ ನೋಡಿ:
Rehman Dakait – Original vs Movie
— ITS VIVEK (@Itsviveksay) December 8, 2025
AK Completely overshadowed even the original.🗿😂 #Dhurandhar pic.twitter.com/V1TBedvRx1
ಸ್ಥಳೀಯ ವರದಿಯೊಂದರ ಪ್ರಕಾರ ರೆಹಮಾನ್ ದಕೈತ್ ತನ್ನ 13ನೇ ವಯಸ್ಸಿನಲ್ಲಿ ಹಿಂಸಾತ್ಮಕ ಪ್ರವೃತ್ತಿ ಬೆಳೆಸಿಕೊಂಡಿದ್ದನು. ತಾಯಿ ಖದೀಜಾ ಬೀವಿ ತನ್ನ ತಂದೆಯನ್ನು ಕೊಂದಿದ್ದ ದರೋಡೆಕೋರ ಇಕ್ಬಾಲ್ ಜತೆ ಸಂಬಂಧ ಹೊಂದಿದ್ದಾಳೆಂದು ತಿಳಿದುಕೊಂಡ ರೆಹಮಾನ್ ಆಕರಯ ಬಗ್ಗೆ ಅಸಮಾಧಾನ ಉಂಟಾಗಿತ್ತು. ತಾಯಿಯ ವಿರುದ್ಧವೇ ವೈರತ್ವ ಹುಟ್ಟಿಕೊಂಡಿತ್ತು. ಕೋಪಗೊಂಡ ರೆಹಮಾನ್ ತನ್ನ ತಾಯಿಗೆ ಮೂರು ಬಾರಿ ಗುಂಡು ಹಾರಿಸಿ, ಆಕೆಯ ಗಂಟಲು ಕತ್ತರಿಸಿ ಕೊಂದು ರಹಸ್ಯವಾಗಿ ಹೂತುಹಾಕಿದನೆಂದು ವರದಿಯಾಗಿದೆ. ಈ ಘಟನೆ ನಡೆದಾಗ ಆತನಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.
3 ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಿದ ಸುಚೇಂದ್ರ ಪ್ರಸಾದ್; ಈ ಚಿತ್ರಕ್ಕೆ ಮಾಜಿ MLC ಎಸ್ ಆರ್ ಲೀಲಾ ನಿರ್ಮಾಪಕಿ
ತಂದೆಯ ಮರಣದ ನಂತರ ಗ್ಯಾಂಗ್‌ನ ಸಂಪೂರ್ಣ ನಿಯಂತ್ರಣ ರೆಹಮಾನ್‌ಗೆ ಹಸ್ತಾಂತರ ಮಾಡಲಾಯಿತು. 1990ರ ದಶಕದಲ್ಲಿ ಲಿಯಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಕ್ರಿಮಿನಲ್ ಸಿಂಡಿಕೇಟ್ ಹಾಜಿ ಲಾಲು ಕೂಡ ಆತನ ಗ್ಯಾಂಗ್‌ಗೆ ಸೇರಿದ. 2001ರಲ್ಲಿ ಹಜಿ ಲಾಲು ಬಂಧನಕ್ಕೊಳಗಾದಾಗ ರೆಹಮಾನ್ ಸಂಪೂರ್ಣ ಕಾರ್ಯಾಚರಣೆಯನ್ನು ದಿಟ್ಟತನದಿಂದ ಮುಂದುವರಿಸಿದ. 2001 ಮತ್ತು 2009ರವರೆಗೂ ರೆಹಮಾನ್ ದಕೈತ್ ಪಾಕಿಸ್ತಾನದ ಅತ್ಯಂತ ಭಯಂಕರ ಅಪರಾಧಿಗಳಲ್ಲಿ ಒಬ್ಬನಾಗಿದ್ದನು.
ವರದಿಯ ಪ್ರಕಾರ ರೆಹಮಾನ್ ಲಾಡ್ಲಾ ಮತ್ತು ಉಜೈರ್‌ನಲ್ಲಿರುವ ಶತ್ರುಗಳ ಕೊಲೆ ಮಾಡಿದ ಬಳಿಕ ಅವರ ತಲೆಗಳನ್ನು ತುಂಡರಿಸಿ ಅದನ್ನು ಫುಟ್‌ಬಾಲ್ ಆಡಲು ಬಳಸುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ಕರಾಚಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಪಹರಣ, ಸುಲಿಗೆ, ಕೊಲೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ರೆಹಮಾನ್ ಭಾಗಿಯಾಗಿದ್ದ ಎಂದು ವರದಿಯಲ್ಲಿ ವಿವರಿಸಲಾಗಿದೆ.
2009ರ ಆಗಸ್ಟ್‌ನಲ್ಲಿ ಕರಾಚಿ ಪೊಲೀಸರೊಂದಿಗಿನ ಗುಂಡಿನ ದಾಳಿಯಲ್ಲಿ ರೆಹಮಾನ್ ಸತ್ತಿದ್ದ. ಆತನ ಮರಣದ ನಂತರ ಸೋದರ ಸಂಬಂಧಿ ಉಜೈರ್ ಬಲೂಚ್ ಗ್ಯಾಂಗ್‌ನ ಮುಂದಾಳತ್ವ ವಹಿಸಿದ. ಸದ್ಯ ಇದೇ ಕಥೆ ಎರಡು ಭಾಗದಲ್ಲಿ ಸಿನಿಮಾವಾಗಲಿದ್ದು ಮೊದಲನೇ ಭಾಗ ಈಗಾಗಲೇ ರಿಲೀಸ್ ಆಗಿದೆ.