#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Budget 2025: 10,000 ಹೆಚ್ಚುವರಿ ವೈದ್ಯಕೀಯ ಕಾಲೇಜು ಸೀಟು; ಸಚಿವೆ ನಿರ್ಮಲಾ ಘೋಷಣೆ

ಮೋದಿ 3.0 ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 10,000 ವೈದ್ಯಕೀಯ ಸೀಟುಗಳನ್ನು ಸೇರಿಸಲಾಗುತ್ತದೆ. ಆ ಮೂಲಕ ವೈದ್ಯಕೀಯ ಸೀಟುಗಳ ಸಂಖ್ಯೆ 75,000ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದರು.

10,000 ಹೆಚ್ಚುವರಿ ವೈದ್ಯಕೀಯ ಕಾಲೇಜು ಸೀಟು; ಸಚಿವೆ ನಿರ್ಮಲಾ ಘೋಷಣೆ

ಬಜೆಟ್‌ ಮಂಡನೆ.

Profile Ramesh B Feb 1, 2025 12:25 PM

ಹೊಸದಿಲ್ಲಿ: ಮೋದಿ 3.0 ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 10,000 ವೈದ್ಯಕೀಯ ಸೀಟುಗಳನ್ನು ಸೇರಿಸಲಾಗುತ್ತದೆ (Budget 2025). ಆ ಮೂಲಕ ವೈದ್ಯಕೀಯ ಸೀಟುಗಳ ಸಂಖ್ಯೆ 75,000ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದರು.

ಕೌಶಲ್ಯ ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಭಾಗವಾಗಿ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್'ಗೆ ಅಗತ್ಯವಾದ ಕೌಶಲ್ಯ ಹೊಂದಿದ ಯುವ ಜನತೆಯನ್ನು ಸಜ್ಜುಗೊಳಿಸಲು ಜಾಗತಿಕ ಪರಿಣತಿ ಮತ್ತು ಸಹಭಾಗಿತ್ವದೊಂದಿಗೆ 5 ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಜತೆಗೆ 500 ಕೋಟಿ ರೂ, ವೆಚ್ಚದಲ್ಲಿ ಕೃತಕ ಬುದ್ದಿಮತ್ತೆ ಕೇಂದ್ರವನ್ನು ಸ್ಥಾಪಿಸುವುದಾಗಿಯೂ ಘೋಷಿಸಿದರು.



ಬಜೆಟ್‌ ನಂತರ ಈ ಎಲ್ಲ ವಸ್ತುಗಳ ಬೆಲೆ ಇಳಿಕೆ

  • ಇನ್ನೂ 37 ಔಷಧಿಗಳ ಮೇಲೆ ಮೂಲ ಕಸ್ಟಮ್ ಸುಂಕಕ್ಕೆ ವಿನಾಯಿತಿ ನೀಡಲು ಪ್ರಸ್ತಾವ.
  • ಕ್ಯಾನ್ಸರ್, ಅಪರೂಪದ ಕಾಯಿಲೆ ಸೇರಿ 36 ಔಷಧಿಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ.
  • ಕೋಬಾಲ್ಟ್ ಉತ್ಪನ್ನ, ಎಲ್ಇಡಿ, ಸತು, ಲಿಥಿಯಂ-ಐಯಾನ್ ಬ್ಯಾಟರಿ ಸ್ಕ್ರ್ಯಾಪ್ ಮತ್ತು 12 ನಿರ್ಣಾಯಕ ಖನಿಜಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ.
  • ಹಡಗುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಇನ್ನೂ 10 ವರ್ಷಗಳವರೆಗೆ ವಿನಾಯಿತಿ.
  • ಮೀನಿನ ಪಾಶ್ಚರಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 30ರಿಂದ ಶೇ. 5ಕ್ಕೆ ಇಳಿಕೆ.
  • ಕರಕುಶಲ ರಫ್ತನ್ನು ಮತ್ತಷ್ಟು ಉತ್ತೇಜಿಸುವ ಯೋಜನೆಯ ಘೋಷಣೆ.