3 ವರ್ಷಗಳಲ್ಲಿ 500 NEO Homes ಮಳಿಗೆ: ನಿಪ್ಪಾನ್ ಪೇಂಟ್‌ನಿಂದ ಮಹತ್ವದ ಘೋಷಣೆ
Nippon Paint India: ದೇಶಾದ್ಯಂತ NEO Homes ಮಳಿಗೆಗಳ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಮೂರು ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆಯನ್ನು 27ರಿಂದ 500ಕ್ಕೆ ಹೆಚ್ಚಿಸುವ ಗುರಿಯನ್ನು ನಿಪ್ಪಾನ್ ಪೇಂಟ್ ಇಂಡಿಯಾ ಹೊಂದಿದೆ ಎಂದು ಸಂಸ್ಥೆಯ ಡೆಕೊರೇಟಿವ್ ಕೋಟಿಂಗ್ಸ್ ವ್ಯವಹಾರದ ಅಧ್ಯಕ್ಷ ಮಾರ್ಕ್ ಟೈಟಸ್ ತಿಳಿಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಿಪ್ಪಾನ್ ಪೇಂಟ್ ಇಂಡಿಯಾದ ಆರನೇ NEO Homes ಮಳಿಗೆ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
-
ಬೆಂಗಳೂರು, ಸೆ. 30: ದೇಶಾದ್ಯಂತ NEO Homes ಮಳಿಗೆಗಳ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಮೂರು ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆಯನ್ನು 27ರಿಂದ 500ಕ್ಕೆ ಹೆಚ್ಚಿಸುವ ಗುರಿಯನ್ನು ನಿಪ್ಪಾನ್ ಪೇಂಟ್ ಇಂಡಿಯಾ (Nippon Paint India) ಹೊಂದಿದೆ ಎಂದು ಸಂಸ್ಥೆಯ ಡೆಕೊರೇಟಿವ್ ಕೋಟಿಂಗ್ಸ್ ವ್ಯವಹಾರದ ಅಧ್ಯಕ್ಷ ಮಾರ್ಕ್ ಟೈಟಸ್ ತಿಳಿಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಿಪ್ಪಾನ್ ಪೇಂಟ್ ಇಂಡಿಯಾದ ಆರನೇ NEO Homes ಮಳಿಗೆ ಆರಂಭಿಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕಂಪನಿಯ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೆಚ್ಚು ಜನಸಂಚಾರವಿರುವ, ಸುಲಭವಾಗಿ ತಲುಪಬಹುದಾದ ಹಾಗೂ ಮನೆಮಾಲೀಕರಿಗೆ ಅನುಕೂಲವಾಗುವ ಪ್ರದೇಶಗಳನ್ನು ಸ್ಥಳೀಯ ಪಾಲುದಾರರ ಸಹಯೋಗದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಹೊಸ ಮನೆಗಳಿಗೆ ಬಣ್ಣ ಬಳಿಯುವ ಜತೆಗೆ ಹಳೆಯ ಮನೆಗಳ ನವೀಕರಣಕ್ಕೂ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರು ಕೇವಲ ಬಣ್ಣದ ಆಯ್ಕೆಯಷ್ಟೇ ಅಲ್ಲದೆ, ತಮ್ಮ ಅಭಿರುಚಿಗೆ ತಕ್ಕ ವಿನ್ಯಾಸ, ವೃತ್ತಿಪರ ಸೇವೆ ಹಾಗೂ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವ ವ್ಯವಸ್ಥೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ಪನ್ನ ಮತ್ತು ಸೇವೆ ಎರಡನ್ನೂ ಒದಗಿಸುವ ಸಮಗ್ರ ಮಾದರಿಯನ್ನು NEO Homes ಮೂಲಕ ರೂಪಿಸಲಾಗಿದೆ ಎಂದು ಹೇಳಿದರು.
NEO Homesನಲ್ಲಿ ಬಣ್ಣ, ಫಿನಿಶ್, ಪ್ರೀಮಿಯಂ ವಾಲ್‌ಪೇಪರ್, ನೀರು ಸೋರಿಕೆ ತಡೆ ಸೇರಿ ವಿವಿಧ ಪರಿಹಾರಗಳ ಜತೆಗೆ ವೃತ್ತಿಪರ ಬಣ್ಣ ಬಳಿಯುವ ಸೇವೆಯನ್ನೂ ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಸಮಯದ ಅಭಾವವಿರುವ ಗ್ರಾಹಕರಿಗಾಗಿ 24 ಗಂಟೆಗಳಲ್ಲಿ ಬಣ್ಣ ಬಳಿಯುವ ಸೇವೆ ಹಾಗೂ ಶೇ. 0 ಬಡ್ಡಿಯ ಇಎಂಐ ಸೌಲಭ್ಯವನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ಮೂರು ವರ್ಷಗಳಲ್ಲಿ ವಿಶೇಷ ಮಳಿಗೆಗಳ ಮೂಲಕದ ವ್ಯವಹಾರವನ್ನು ಪ್ರತಿವರ್ಷ ದ್ವಿಗುಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ. ಹೊಸ ಮಳಿಗೆಗಳ ವಿಸ್ತರಣೆಯೊಂದಿಗೆ ಪ್ರತಿಯೊಂದು ಕೇಂದ್ರದಲ್ಲೂ ಗ್ರಾಹಕರಿಗೆ ಸಮಾಲೋಚನೆ, ಉತ್ಪನ್ನ ಆಯ್ಕೆ ಮತ್ತು ಸೇವಾ ನೆರವು ದೊರೆಯುವಂತೆ ಮಾಡಲಾಗುವುದು ಎಂದರು.
ಮನೆ ಬಣ್ಣ ಬಳಿಯುವ ಸೇವೆಗಳಲ್ಲಿ ಗ್ರಾಹಕರ ಸಮಯದ ಅಗತ್ಯವೂ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿರುವ ಸ್ವಿಫ್ಟ್ ಯುನಿಕೋಟ್ 3-ಇನ್-1 ಒಳಾಂಗಣ ಗೋಡೆಯ ಬಣ್ಣವು ಪ್ರೈಮರ್ ಹಾಗೂ ಎರಡು ಮೇಲ್ಮೈ ಬಣ್ಣಗಳ ಕಾರ್ಯವನ್ನು ಒಂದೇ ಲೇಪನದಲ್ಲಿ ಒದಗಿಸುತ್ತದೆ. ಇದರಿಂದ ಬಣ್ಣ ಬಳಿಯುವ ವೇಗ ಮೂರು ಪಟ್ಟು ಹೆಚ್ಚಾಗಲಿದ್ದು, ಒಟ್ಟಾರೆ ಯೋಜನೆಯ ಸಮಯ ಮತ್ತು ವೆಚ್ಚದಲ್ಲಿ ಶೇ. 40ರವರೆಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ ಎಂದು ಮಾರ್ಕ್ ಟೈಟಸ್ ವಿವರಿಸಿದರು.
NEO Home Stylist ಕಾರ್ಯಕ್ರಮದ ಮೂಲಕ ಈಗಾಗಲೇ ಬಣ್ಣದ ಕೆಲಸದಲ್ಲಿ ಪರಿಣತಿ ಹೊಂದಿರುವ ಕಾರ್ಮಿಕರಿಗೆ ತಾಂತ್ರಿಕ ಜ್ಞಾನ, ಉತ್ಪನ್ನ ಮಾಹಿತಿ, ಗ್ರಾಹಕರೊಂದಿಗೆ ಸಂವಹನ, ಸುರಕ್ಷತೆ, ವೃತ್ತಿಪರ ನಡವಳಿಕೆ ಹಾಗೂ ಸೇವಾ ಗುಣಮಟ್ಟದ ಕುರಿತು ತರಬೇತಿ ನೀಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ವ್ಯವಸ್ಥಿತ ಮತ್ತು ಪಾರದರ್ಶಕ ಸೇವೆ ದೊರೆಯುವುದರ ಜತೆಗೆ, ಬಣ್ಣದ ಕೆಲಸಗಾರರಿಗೆ ವೃತ್ತಿ ಬೆಳವಣಿಗೆಗೂ ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.