ಡಿಜಿಟ್ ಇನ್ಶೂರೆನ್ಸ್ನ ಎಂಡಿ ಮತ್ತು ಸಿಇಒ ಜಾಸ್ಲೀನ್ ಕೊಹ್ಲಿ 'ಗ್ಲೋಬಲ್ ಫಿನ್ಟೆಕ್ ಪರ್ಸನ್ ಆಫ್ ದಿ ಇಯರ್ – ಫೀಮೇಲ್' ಪ್ರಶಸ್ತಿಗೆ ಭಾಜನ
ಜಾಸ್ಲೀನ್ ಕೊಹ್ಲಿ ಅವರ ನಾಯಕತ್ವದಲ್ಲಿ Digit Insurance ಭಾರತದಲ್ಲಿನ ಪ್ರಮುಖ ಡಿಜಿಟಲ್ ಫುಲ್-ಸ್ಟಾಕ್ ವಿಮಾ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ತಂತ್ರಜ್ಞಾನ ಮತ್ತು AI/ML ಬಳಕೆಯ ಮೂಲಕ ವಿಮಾ ಸೇವೆಗಳನ್ನು ಸರಳಗೊಳಿಸುವುದು, ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಗ್ರಾಹಕ-ಕೇಂದ್ರಿತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
-
ಮುಂಬೈ: ಗೋ ಡಿಜಿಟ್ ಜನಪರ್ ಇನ್ಶೂರನ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (MD & CEO) ಜಾಸ್ಲೀನ್ ಕೊಹ್ಲಿಗೆ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ʼಟೆಕ್ ಫೆಸ್ಟ್ (GFF) 2026ರ ಸಂದರ್ಭದಲ್ಲಿ ಜಾಗತಿಕ ಫಿನ್ಟೆಕ್ ಪ್ರಶಸ್ತಿ 2026 ರಲ್ಲಿ ‘Global Fintech Person of the Year (Female)’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತದ ಫಿನ್ಟೆಕ್ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಪರಿವರ್ತನೆ ಮತ್ತು ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ ನಾಯಕತ್ವವನ್ನು ಗುರುತಿಸುವ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಜಾಗತಿಕ ಫಿನ್ಟೆಕ್ ಪ್ರಶಸ್ತಿಯ ಐದನೇ ಆವೃತ್ತಿಯಲ್ಲಿ Special FinTech Achievements ವಿಭಾಗದ ಅಡಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಹಣಕಾಸು ಸೇವೆಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಾಧನೆಗಳನ್ನು ಈ ಪ್ರಶಸ್ತಿಗಳು ಗುರುತಿಸುತ್ತವೆ.
ಜಾಸ್ಲೀನ್ ಕೊಹ್ಲಿ ಅವರ ನಾಯಕತ್ವದಲ್ಲಿ Digit Insurance ಭಾರತದಲ್ಲಿನ ಪ್ರಮುಖ ಡಿಜಿಟಲ್ ಫುಲ್-ಸ್ಟಾಕ್ ವಿಮಾ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ತಂತ್ರಜ್ಞಾನ ಮತ್ತು AI/ML ಬಳಕೆಯ ಮೂಲಕ ವಿಮಾ ಸೇವೆಗಳನ್ನು ಸರಳಗೊಳಿಸುವುದು, ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಗ್ರಾಹಕ-ಕೇಂದ್ರಿತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: Stock Market: ಇರಾನ್ ಯುದ್ಧ ಸಮಾಪ್ತಿ ಎಫೆಕ್ಟ್; ಸೆನ್ಸೆಕ್ಸ್ 736 ಅಂಕ ಜಿಗಿತ
ಸಂಸ್ಥೆಯು ತನ್ನ ಕಾರ್ಯಾಚರಣೆ ಆರಂಭಿಸಿದಂದಿನಿಂದ 8.4 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ₹10,000 ಕೋಟಿಗೂ ಅಧಿಕ ಒಟ್ಟು ಲಿಖಿತ ಪ್ರೀಮಿಯಂ ದಾಖಲಿಸಿದೆ. ಜಾಸ್ಲೀನ್ ಕೊಹ್ಲಿ ಅವರ ನಾಯಕತ್ವದ ಅವಧಿಯಲ್ಲಿ ಕೇವಲ ಎಂಟು ವರ್ಷಗಳ ಕಾರ್ಯಾಚರಣೆಯಲ್ಲೇ Digit ಒಂದು ಯೂನಿಕಾರ್ನ್ ಸಂಸ್ಥೆಯಿಂದ ಯಶಸ್ವಿಯಾಗಿ ಷೇರುಪೇಟೆಯಲ್ಲಿ ಪಟ್ಟಿಗೊಂಡ ಕಂಪನಿಯಾಗಿ ಬೆಳೆದಿದೆ. ಈ ಅವಧಿಯಲ್ಲಿ ಕ್ಲೇಮ್ಸ್, ಅಂಡರ್ ರೈಟಿಂಗ್ ಮತ್ತು ಗ್ರಾಹಕರ ಅನುಭವ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ನಿರಂತರ ನಾವೀನ್ಯತೆಗೆ ಸಂಸ್ಥೆ ಒತ್ತು ನೀಡಿದೆ.
ಪ್ರಸ್ತುತ Digitನ ಟೆಕ್ನಾಲಜಿ-ಫಸ್ಟ್ ಕಾರ್ಯವಿಧಾನವು ವಿಮಾ ಕ್ಷೇತ್ರ ಮತ್ತು ಫಿನ್ಟೆಕ್ ನಾವೀನ್ಯತೆ ಯ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತಿದೆ.
ಈ ಗೌರವದ ಕುರಿತು ಪ್ರತಿಕ್ರಿಯಿಸಿದ ಜಾಸ್ಲೀನ್ ಕೊಹ್ಲಿ, “ಜಾಗತಿಕ ಫಿನ್ಟೆಕ್ ನಿಂದ ಈ ಪ್ರಶಸ್ತಿ ಯನ್ನು ಸ್ವೀಕರಿಸಿರುವುದು ನನಗೆ ಅತ್ಯಂತ ವಿನಮ್ರತೆಯ ಹಾಗೂ ಹೆಮ್ಮೆಯ ಕ್ಷಣವಾಗಿದೆ. ನಾವೀನ್ಯತೆ ಎನ್ನುವುದು ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಸಾಧ್ಯವಾದಾಗ ಮಾತ್ರ ನಿಜವಾದ ಅರ್ಥವನ್ನು ಪಡೆಯುತ್ತದೆ ಎಂಬುದು ಹಲವು ವರ್ಷಗಳಿಂದ ನನಗೆ ಸ್ಪಷ್ಟವಾಗಿದೆ. Digitನಲ್ಲಿ ತಂತ್ರಜ್ಞಾನದ ಮೂಲಕ ವಿಮೆಯನ್ನು ಸರಳಗೊಳಿಸುವುದು ಹಾಗೂ ಗ್ರಾಹಕರಿಗೆ ಅದನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ, ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸುವುದು ನಮ್ಮ ನಿರಂತರ ಧ್ಯೇಯವಾಗಿದೆ.
ಈ ಗೌರವವು ನಮ್ಮ ಉದ್ಯೋಗಿಗಳ ನಿರಂತರ ಪರಿಶ್ರಮ, ಪಾಲುದಾರರ ಸಹಕಾರ ಹಾಗೂ ಲಕ್ಷಾಂತರ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಪ್ರತಿಬಿಂಬವಾಗಿದೆ. ಸಾಂಪ್ರದಾಯಿಕ ವಿಧಾನಗಳಿಗೆ ಸವಾಲು ಹಾಕುತ್ತಾ, ಭಾರತೀಯರಿಗೆ ಇನ್ನಷ್ಟು ಉತ್ತಮ ವಿಮಾ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಮುಂದುವರಿಯಲು ಈ ಗೌರವ ನಮಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ,”** ಎಂದು ಹೇಳಿದರು.
Digit Insurance ಅನ್ನು ಭಾರತದ ಪ್ರಮುಖ ಡಿಜಿಟಲ್-ಫಸ್ಟ್ ವಿಮಾ ಸಂಸ್ಥೆಗಳಲ್ಲಿ ಒಂದಾಗಿ ರೂಪಿಸುವಲ್ಲಿ Jasleen Kohli ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ. ಸಂಸ್ಥೆಯಲ್ಲಿ ನಾವೀನ್ಯ ತೆಯ ಸಂಸ್ಕೃತಿಯನ್ನು ಬೆಳೆಸುವುದು, ಗ್ರಾಹಕ-ಕೇಂದ್ರಿತ ಕಾರ್ಯವಿಧಾನವನ್ನು ಬಲಪಡಿಸುವುದು ಮತ್ತು ಭಾರತದಲ್ಲಿ ಡಿಜಿಟಲ್ ಹಣಕಾಸು ಸೇವೆಗಳು ಹಾಗೂ ವಿಮಾ ನಾವೀನ್ಯತೆಯ ವ್ಯಾಪ್ತಿ ಯನ್ನು ವಿಸ್ತರಿಸುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ.
ಈ ಪ್ರಶಸ್ತಿಯನ್ನು ಕಠಿಣ ಮತ್ತು ಸ್ವತಂತ್ರ ಮೌಲ್ಯಮಾಪನ ಪ್ರಕ್ರಿಯೆಯ ಬಳಿಕ ನೀಡಲಾಗಿದೆ. ಪ್ರತಿಷ್ಠಿತ ಏಳು ಸದಸ್ಯರ ವಿಶೇಷ ಜ್ಯೂರಿ ಮತ್ತು 34 ಮಂದಿ ಗೌರವಾನ್ವಿತ ಜ್ಯೂರಿ ಸದಸ್ಯರು ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಹಣಕಾಸು ಸೇವೆಗಳು ಮತ್ತು ಫಿನ್ಟೆಕ್ ಕ್ಷೇತ್ರದ ಪ್ರಮುಖ ನಾಯಕರೂ ಇದರಲ್ಲಿ ಸೇರಿದ್ದರು. ಅವರಲ್ಲಿ ವಿ. ವೈದ್ಯನಾಥನ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಐಡಿಎಫ್ಸಿ ಫಸ್ಟ್ ಬ್ಯಾಂಕ್; ಸಮೀರ್ ನಿಗಮ್, ಸ್ಥಾಪಕ ಮತ್ತು ಸಿಇಒ, ಫೋನ್-ಪೇ (PhonePe); ಮತ್ತು ಸುರೇಶ್ ಸೇಥಿ, ಗ್ರೂಪ್ ಕಂಟ್ರಿ ಮ್ಯಾನೇಜರ್ (ಭಾರತ ಮತ್ತು ದಕ್ಷಿಣ ಏಷ್ಯಾ), ವೀಸಾ (Visa).ಪ್ರಮುಖರಾಗಿದ್ದಾರೆ.
400ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಭಾಗವಹಿಸುವಿಕೆ ಮತ್ತು 500ಕ್ಕೂ ಹೆಚ್ಚು ನಾಮನಿರ್ದೇಶನ ಗಳೊಂದಿಗೆ, Global Fintech Awardsನ ಐದನೇ ಆವೃತ್ತಿಯು ಹಣಕಾಸು ಸೇವೆಗಳ ಸಂಪೂರ್ಣ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ನಾಯಕತ್ವ ಮತ್ತು ಗ್ರಾಹಕರ ಮೇಲೆ ಬೀರಿದ ಪರಿಣಾಮದ ಆಧಾರದ ಮೇಲೆ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿದೆ. ಐದು ಪ್ರಮುಖ ವಿಭಾಗಗಳಲ್ಲಿ ನಡೆದ ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ 26 ವಿಭಾಗಗಳ ವಿಜೇತರನ್ನು ಗೌರವಿಸಲಾಯಿತು.
ಗ್ಲೋಬಲ್ ಫಿನ್ʼಟೆಕ್ ಫೆಸ್ಟ್ ವಿಶ್ವದ ಪ್ರಮುಖ ಮತ್ತು ಅತಿದೊಡ್ಡ ಫಿನ್ಟೆಕ್ ಸಮಾವೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಜಾಗತಿಕ ಮಟ್ಟದ ನಿಯಂತ್ರಣ ಸಂಸ್ಥೆಗಳು, ನೀತಿ ನಿರೂಪಕರು, ಹಣಕಾಸು ಸಂಸ್ಥೆಗಳು, ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮದ ಪ್ರಮುಖ ರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ, ಫಿನ್ಟೆಕ್ ಕ್ಷೇತ್ರದಲ್ಲಿನ ಹೊಸ ಆಲೋಚನೆ ಗಳು, ನಾವೀನ್ಯತೆಗಳು ಮತ್ತು ಸಹಯೋಗಗಳಿಗೆ ಈ ವೇದಿಕೆ ಅವಕಾಶ ಕಲ್ಪಿಸುತ್ತದೆ.