ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಳಿತಾಯ ಮೀರಿದ ಹಣಕಾಸಿನ ಭದ್ರತೆ: ಮಹಿಳೆಯರಿಗೆ ಏತಕ್ಕಾಗಿ ಬೇಕು ನಿಶ್ಚಿತ ಅವಧಿ ವಿಮೆ

ಮರಣಾವಧಿ ಪ್ರೀಮಿಯಂ ಒಂದು ನಿಶ್ಚಿತ ಅವಧಿಯ ಜೀವ ವಿಮಾ ಯೋಜನೆಯ ಪ್ರಮುಖ ಅಂಶವಾಗಿದೆ. ಈ ಪ್ರೀಮಿಯಂ ಶುಲ್ಕದಂತಿದ್ದು, ಈ ಅವಧಿಯಲ್ಲಿ ಪಾಲಿಸಿದಾರರು ನಿಧನ ರಾಗಬಹುದಾದ ಅಪಾಯವನ್ನು ನೇರವಾಗಿ ಒಳಗೊಂಡಿರುತ್ತದೆ. ವಯಸ್ಸು, ಲಿಂಗ, ಆರೋಗ್ಯ ಮತ್ತು ಜೀವನಶೈಲಿಯಂತಹ ಅಂಶಗಳನ್ನು ಅನುಸರಿಸಿ ಶುಲ್ಕವನ್ನು ನಿರ್ಧರಿಸಲಾಗುತ್ತದೆ.

ಮಹಿಳೆಯರಿಗೆ ಏತಕ್ಕಾಗಿ ಬೇಕು ನಿಶ್ಚಿತ ಅವಧಿ ವಿಮೆ

-

Profile
Ashok Nayak Apr 27, 2026 6:29 PM

ಭಾರತದಲ್ಲಿ ಜೀವ ವಿಮೆಗೆ ಪ್ರವೇಶ - GDPಗೆ ಹೋಲಿಸಿದಲ್ಲಿ ಜನರು ಪ್ರೀಮಿಯಂಗಳಿಗಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಾರೆ ಎನ್ನುವುದನ್ನು ತೋರಿಸುವ ಅಳತೆಯಾಗಿದ್ದು - ಅದು 2.8%ರಷ್ಟಿದೆ. ಇದಲ್ಲದೆ, IRDI ಪ್ರಕಾರ, ದೇಶದಲ್ಲಿ ಮಾರಾಟವಾದ ಒಟ್ಟು ವಿಮಾ ಪಾಲಿಸಿಗಳಲ್ಲಿ, 35% ಕ್ಕಿಂತ ಕಡಿಮೆ ಪಾಲಿಸಿಗಳು ಮಹಿಳೆಯರಿಗೆ ಮಾರಾಟವಾಗುತ್ತದೆ. ಇದರರ್ಥ 650 ದಶಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿರುವ ದೇಶದಲ್ಲಿ 2% ಕ್ಕಿಂತ ಕಡಿಮೆ ಮಹಿಳೆಯರು ಜೀವ ವಿಮೆಯನ್ನು ಸಕ್ರಿಯವಾಗಿ ಖರೀದಿ ಮಾಡಿರುತ್ತಾರೆ.

ಜೀವ ವಿಮೆದಾರರಿಗೆ ಇದು ಒಂದು ಮಹತ್ವವಾದ ಅವಕಾಶವನ್ನು ಒದಗಿಸುತ್ತದೆ, ದೇಶದ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿರುವುದೇನೆಂದರೆ ಅದು ಎಲ್ಲಾ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವುದಾಗಿದೆ.

ಇದಲ್ಲದೆ, ಭಾರತದಲ್ಲಿ ಪ್ರಸ್ತುತ ಇರುವ ವಿಮಾ ಅಂತರವು ಮಹಿಳೆಯರಿಗೆ ದೊಡ್ಡ ಕಾಳಜಿ ಯಾಗಿದೆ. ಏಕೆಂದರೆ. ಇದು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕಡಿಮೆ-ಆದಾಯದ ವಿಭಾಗಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಸಿಗುತ್ತದೆ

ಇಂತಹ ಸನ್ನಿವೇಶದಲ್ಲಿ, ಒಂದು ನಿರ್ದಿಷ್ಟ ಅವಧಿಯ ವಿಮೆಯು ಮಹಿಳೆಯರಿಗೆ ವಿವಿಧ ಆದಾಯದ ಮಟ್ಟಗಳಲ್ಲಿ, ಅವರು ಕೆಲಸ ಮಾಡುತ್ತಿರಲಿ ಅಥವಾ ಕೆಲಸ ಮಾಡದಿರಲಿ, ಒಂದು ಪ್ರಾಯೋಗಿಕ ಆಯ್ಕೆ ಆಗುತ್ತದೆ. ಇದು ಕಡಿಮೆ-ವೆಚ್ಚದ ಉತ್ಪನ್ನವಾಗಿದ್ದು, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ.

ಇದನ್ನೂ ಓದಿ: Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ಮರಣಾವಧಿ ಪ್ರೀಮಿಯಂಗಳು ಮಹಿಳೆಯರಿಗೆ ಕಡಿಮೆ ಇದೆ

ಪುರುಷರಿಗೆ ಹೋಲಿಸಿದಲ್ಲಿ, ಮಹಿಳೆಯರ ಜೀವಿತಾವಧಿಯು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳು ಹೆಚ್ಚಾಗಿದೆ. ಮಹಿಳೆಯರ ಈ ಹೆಚ್ಚಿನ ಜೀವಿತಾವಧಿಯು ಮಹಿಳಾ ಪಾಲಿಸಿದಾರರಿಗೆ ಕಡಿಮೆ ಮರಣಾವಧಿ ಪ್ರೀಮಿಯಂಗಳಿಗೆ ಕಾರಣವಾಗುತ್ತದೆ.

ಮರಣಾವಧಿ ಪ್ರೀಮಿಯಂ ಒಂದು ನಿಶ್ಚಿತ ಅವಧಿಯ ಜೀವ ವಿಮಾ ಯೋಜನೆಯ ಪ್ರಮುಖ ಅಂಶವಾಗಿದೆ. ಈ ಪ್ರೀಮಿಯಂ ಶುಲ್ಕದಂತಿದ್ದು, ಈ ಅವಧಿಯಲ್ಲಿ ಪಾಲಿಸಿ ದಾರರು ನಿಧನರಾಗಬಹುದಾದ ಅಪಾಯವನ್ನು ನೇರವಾಗಿ ಒಳಗೊಂಡಿರುತ್ತದೆ. ವಯಸ್ಸು, ಲಿಂಗ, ಆರೋಗ್ಯ ಮತ್ತು ಜೀವನಶೈಲಿಯಂತಹ ಅಂಶಗಳನ್ನು ಅನುಸರಿಸಿ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಇದು ವಯಸ್ಶಾದಂತೆ ಗಣನೀಯವಾಗಿ ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಮೊತ್ತದ ಪ್ರೀಮಿಯಂಗಲಿಗೆ ಕಾರಣವಾಗುತ್ತದೆ.

ಮುಂದುವರೆದು, ಮಹಿಳೆಯರಿಗೆ ಮಾರಾಟವಾಗುವ ಪಾಲಿಸಿಗಳು ಹೆಚ್ಚಿನ ನಿರಂತರತೆಯ ಮಟ್ಟವನ್ನು ಹೊಂದಿರುತ್ತವೆ ಎಂದು ಪ್ರಸ್ತುತ ಪರಿಸ್ಥಿತಿ ಪ್ರತಿಬಿಂಬಿಸುತ್ತವೆ, ಏಕೆಂದರೆ ಅವರು ತಮ್ಮ ಪಾಲಿಸಿಗಳ ಪ್ರೀಮಿಯಂ ಪಾವತಿಗಳೊಂದಿಗೆ ಹೆಚ್ಚು ಶಿಸ್ತುಬದ್ಧತೆಯನ್ನು ಹೊಂದಿರುತ್ತಾರೆ.

Insu

ಮಹಿಳೆಯರಿಗೆ ವಿಶೇಷ ವಿಮಾ ದರಗಳು ಮತ್ತು ವಿಭಿನ್ನ ಸೇವೆಗಳನ್ನು ಒದಗಿಸುವ ಮೂಲಕ ವಿಮಾದಾರರು ಇದರಿಂದಾಗಿ ಲಾಭ ಮಾಡಿಕೊಳ್ಳುತ್ತಿರುವುದನ್ನು ನಾವು ವೀಕ್ಷಿಸುತ್ತಿದ್ದೇವೆ.

ನಿಶ್ಚಿತ ಅವಧಿಯ ವಿಮೆಯ ಪ್ರಾಮುಖ್ಯತೆ

ಹೂಡಿಕೆ ಮತ್ತು ಉಳಿತಾಯಕ್ಕೆ ಸಹಾಯ ಮಾಡುವ ಹಲವಾರು ಉತ್ಪನ್ನಗಳು ಇದ್ದರೂ ಕೂಡ, ತೆರಿಗೆ ಪ್ರಯೋಜನಗಳನ್ನು ನೀಡುವ ನಿಶ್ಚಿತ ಅವಧಿ ವಿಮೆಯು, ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನಿರ್ಮಿಸುತ್ತದೆ. ಹೆಚ್ಚು ಸೂಕ್ತವಾದ ಉತ್ಪನ್ನಗಳನ್ನು ಒದಗಿಸುವ ಸಲುವಾಗಿ, ವಿಮಾದಾರರು ವಿವಿಧ ವಿಭಾಗಗಳಲ್ಲಿ ಮಹಿಳೆಯರ ಅಗತ್ಯತೆಗಳನ್ನು ಹಾಗೂ ಅವರ ಹಣಕಾಸಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಬೇಕು. ಸ್ಥಳ, ಆರ್ಥಿಕ ಸ್ಥಿತಿ ಮತ್ತು ಕುಟುಂಬ ಸಂಸ್ಕೃತಿಯನ್ನು ಅವಲಂಬಿಸಿ ಈ ಅಗತ್ಯತೆಗಳು ಬದಲಾಗುತ್ತಿರುತ್ತವೆ. ಆದ್ದರಿಂದ, ಒಂದು-ಉತ್ಪನ್ನ-ಅಥವಾ-ಸೇವೆಗೆ ಸರಿಹೊಂದುವ-ಎಲ್ಲ ವಿಧಾನವು ಹೆಚ್ಚಿನ ಮಹಿಳೆಯರನ್ನು ಒಳಗೊಳ್ಳಲು ಸಾಧ್ಯವಾಗುವುದಿಲ್ಲ.

ಸಮಾಜದ ಎಲ್ಲಾ ವಿಭಾಗಗಳನ್ನು ಒಳಗೊಂಡ ಮಹಿಳೆಯರ ಜೀವನವನ್ನು ಭದ್ರಪಡಿಸು ವುದು, ಅವರ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ, ದೇಶದಲ್ಲಿ ಹೆಚ್ಚಿನ ಸಾಮಾಜಿಕ ಭದ್ರತೆ ಒದಗಿಸಲು ಕಾರಣವಾಗಬಹುದು ಹಾಗೂ ಹೆಚ್ಚು ಆತ್ಮವಿಶ್ವಾಸ ಹೊಂದಿರುವ ಮಹಿಳಾ ಬಲವನ್ನು ಭಾರತದಲ್ಲಿ ನಿರ್ಮಿಸಬಹುದು.

ಕ್ಯಾಸ್ಪಾರಸ್ ಜೆ.ಎಚ್. ಕ್ರೋಮ್‌ಹೌಟ್ ಅವರು ಶ್ರೀರಾಮ್ ಜೀವ ವಿಮೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ.