Gold Price Today On 27th April 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಂಗಳೂರಿನಲ್ಲಿ ದರ ಎಷ್ಟಿದೆ?
ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂ. ಏರಿಕೆಯಾಗಿ 14,155 ರೂ. ಇದ್ದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಏರಿಕೆಯಾಗಿ 15,442 ರೂ. ಇದೆ.
ಚಿನ್ನದ ದರದಲ್ಲಿಂದು ಕೊಂಚ ಏರಿಕೆ -
Vishakha Bhat Heggar
Apr 27, 2026 12:39 PM
ಬೆಂಗಳೂರು: ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಂದು 22 ಕ್ಯಾರಟ್ 1 ಗ್ರಾಂ (Gold Price Today On 27th April 2026) ಚಿನ್ನದ ಬೆಲೆಯಲ್ಲಿ 35 ರೂ. ಏರಿಕೆಯಾಗಿ 14,155 ರೂ. ಇದ್ದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಏರಿಕೆಯಾಗಿ 15,442 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,13,240 ರೂ. ಇದ್ದರೆ, 10 ಗ್ರಾಂಗೆ 1,41,550 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 14,15,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,23,536 ರೂ. ಮತ್ತು 10 ಚಿನ್ನಕ್ಕೆ ನೀವು 1,54,420 ರೂ. 100 ಗ್ರಾಂ 15,44,200 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,155 ರೂ. | 15,442 ರೂ. |
| ಮುಂಬೈ | 14,155 ರೂ. | 15,442 ರೂ. |
| ದೆಹಲಿ | 14,155 ರೂ. | 15,442 ರೂ. |
| ಕೋಲ್ಕತ್ತಾ | 14,155 ರೂ. | 15,442 ರೂ. |
| ಹೈದರಾಬಾದ್ | 14,155 ರೂ. | 15,442 ರೂ. |
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. 1 ಗ್ರಾಂಗೆ 260 ರೂ. ಇದ್ದರೆ, 10 ಗ್ರಾಂಗೆ 2,600 ರೂ. ಮತ್ತು 1 ಕೆಜಿಗೆ 2,60,000 ರೂ. ಪಾವತಿ ಮಾಡಬೇಕಾಗುತ್ತದೆ.