ವಿಮಾನ ಅಪಹರಣ ಬೆದರಿಕೆ: ಜೈಪುರದಲ್ಲಿ ಇಳಿದ ಫ್ರಾಂಕ್ಫರ್ಟ್-ದೆಹಲಿ ಏರ್ ಇಂಡಿಯಾ
ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅಪಹರಣದ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ರಾಜಸ್ತಾನದ ಜೈಪುರದಲ್ಲಿ ಇಳಿಸಲಾಯಿತು. ಎಐ-2030 ವಿಮಾನವನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನವನ್ನು ಅಲ್ಲಿನ ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸಿದವು.
ಸಂಗ್ರಹ ಚಿತ್ರ -
ಜೈಪುರ: ಅಪಹರಣದ ಬೆದರಿಕೆ (Flight Hijack Threat) ಹಿನ್ನೆಲೆಯಲ್ಲಿ ಜರ್ಮನಿಯ (Germany) ಫ್ರಾಂಕ್ಫರ್ಟ್ನಿಂದ (Frankfurt) ದೆಹಲಿಗೆ (Delhi flight) ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು (Air India Flight) ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Jaipur International Airport) ತುರ್ತು ಭೂಸ್ಪರ್ಶ ಮಾಡಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಎಐ-2030 ಬೋಯಿಂಗ್ 787 ಡ್ರೀಮ್ಲೈನರ್ ಏರ್ ಇಂಡಿಯಾ ವಿಮಾನ ಜೈಪುರದಲ್ಲಿ ಸುರಕ್ಷಿತವಾಗಿ ಇಳಿದ ಮೇಲೆ ಅಲ್ಲಿನ ಭದ್ರತಾ ಸಂಸ್ಥೆಗಳು ಸಂಪೂರ್ಣ ಪರಿಶೀಲನೆ ನಡೆಸಿ ಇದೊಂದು ಸುಳ್ಳು ಬೆದರಿಕೆ ಎಂದು ತಿಳಿಸಿದೆ.
ಜರ್ಮನಿಯ ಫ್ರಾಂಕ್ಫರ್ಟ್ನಿಂದ ಬುಧವಾರ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅಪಹರಣದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜೈಪುರಕ್ಕೆ ತಿರುಗಿಸಲಾಗಿದೆ. ಎಐ-2030 ವಿಮಾನ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಮೇಲೆ ಅಲ್ಲಿನ ವಿವಿಧ ಭದ್ರತಾ ಸಂಸ್ಥೆಗಳ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು.
ಚಹಾ ಕೂಟದ ಸಭೆ ನಡೆಸಿ ಶಕ್ತಿ ಪ್ರದರ್ಶಿಸಿದ ನೇತೃತ್ವದ ಇಂಡಿಯಾ ಮೈತ್ರಿಕೂಟ? ವರ್ಕೌಟ್ ಆಯ್ತಾ ರಾಹುಲ್ ಗಾಂಧಿ ಪ್ಲ್ಯಾನ್?
ವಿಮಾನ ಅಪಹರಣದಂತಹ ಘಟನೆಗಳು ನಡೆಯುವ ಸಂದರ್ಭದಲ್ಲಿ ನಿರ್ವಹಿಸಲಾಗುವ ಅತ್ಯುನ್ನತ ಮಟ್ಟದ ಕ್ರಮಗಳನ್ನು ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಸರಿಸಿದರು ಎನ್ನಲಾಗಿದೆ.
#WATCH | Rajasthan: An Air India flight AI2030 operating from Frankfurt to Delhi was diverted to Jaipur following a security alert over a suspected hijack threat. The aircraft landed safely at Jaipur International Airport and was moved for security checks. The alert remains under investigation. Visuals of the aircraft at the airport.
— ANI (@ANI) October 14, 2026
ಎಐ-2030 ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ತನ್ನ ಮೂಲ ಗಮ್ಯಸ್ಥಾನದಿಂದ 280 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಈ ನಗರದಲ್ಲಿ ಬೆಳಗ್ಗೆ 9.45 ಕ್ಕೆ ಸುರಕ್ಷಿತವಾಗಿ ಇಳಿಯಿತು. ಈ ವಿಮಾನವು ನೆಲಕ್ಕಿಳಿದ ಬಳಿಕ ಪ್ರಯಾಣಿಕರು ಇದರಿಂದ ಹೊರಬರಲು ಏಣಿಗಳನ್ನು ಜೋಡಿಸುವ ಮೊದಲು ಅಧಿಕಾರಿಗಳು ಎಚ್ಚರಿಕೆಯಿಂದ ವಿಮಾನದತ್ತ ತೆರಳಿ ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಂಡರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಿಮಾನದಿಂದ ಕೆಳಗಿಳಿಯಲು ಅವಕಾಶ ನೀಡಲಾಯಿತು.
"ಲಡಾಖ್ ಭಾರತದ ಅವಿಭಾಜ್ಯ ಅಂಗ": ಚೀನಾದ ತಗಾದೆಗೆ ಖಡಕ್ ತಿರುಗೇಟು ನೀಡಿದ ವಿದೇಶಾಂಗ ಸಚಿವಾಲಯ!
ಇದರ ಬಳಿಕ ಪ್ರಯಾಣಿಕರಿಗೆ ಮುಂದಿನ ಪ್ರಯಾಣದ ದಿನಾಂಕವನ್ನು ಉಚಿತವಾಗಿ ಬದಲಾಯಿಸಿಕೊಳ್ಳುವ ಆಯ್ಕೆ ಅಥವಾ ವಿಮಾನ ರದ್ದಾದಲ್ಲಿ ಸಂಪೂರ್ಣ ಹಣ ಮರುಪಾವತಿಯ ಸೌಲಭ್ಯವನ್ನು ನೀಡಲಾಗಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.