ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today: ಆಭರಣಪ್ರಿಯರಿಗೆ ಮತ್ತೆ ಶಾಕ್‌; ಚಿನ್ನದ ದರ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 35 ರೂ. ಅಧಿಕವಾಗಿ 7,980 ರೂ.ಗೆ ತಲುಪಿದರೆ 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 39 ರೂ. ದುಬಾರಿಯಾಗಿ 8,706 ರೂ.ಗೆ ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 63,840 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 79,800 ರೂ. ಮತ್ತು 100 ಗ್ರಾಂಗೆ 7,98,000 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ದರ ಮತ್ತೆ ಏರಿಕೆ

ನಯನತಾರಾ (ಇನ್‌ಸ್ಟಾಗ್ರಾಂ ಚಿತ್ರ). -

Ramesh Ballamoole
Ramesh Ballamoole Feb 10, 2025 1:57 PM

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು (ಫೆ. 10) ಕೂಡ ಗಗನಮುಖಿಯಾಗಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 35 ರೂ. ಅಧಿಕವಾಗಿ 7,980 ರೂ.ಗೆ ತಲುಪಿದರೆ 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 39 ರೂ. ದುಬಾರಿಯಾಗಿ 8,706 ರೂ.ಗೆ ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 63,840 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 79,800 ರೂ. ಮತ್ತು 100 ಗ್ರಾಂಗೆ 7,98,000 ರೂ. ಪಾವತಿಸಬೇಕಾಗುತ್ತದೆ.

ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 69,648 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,060 ರೂ. ಮತ್ತು 100 ಗ್ರಾಂಗೆ 8,70,600 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 7,980 ರೂ. 8,706 ರೂ.
ಮುಂಬೈ 7,980 ರೂ. 8,706 ರೂ.
ದಿಲ್ಲಿ 7,995 ರೂ. 8,721 ರೂ.
ಕೋಲ್ಕತಾ 7,980 ರೂ. 8,706 ರೂ.
ಹೈದರಾಬಾದ್ 7,980 ರೂ. 8,706 ರೂ.

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆ ಇಂದು ಕೂಡ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳ್ಳಿ 1 ಗ್ರಾಂನ ಬೆಲೆ 99.50 ರೂ., 8 ಗ್ರಾಂಗೆ 796 ರೂ., 10 ಗ್ರಾಂ.ಗೆ 995 ರೂ. ಮತ್ತು 1 ಕೆಜಿಗೆ 99,500 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಏರಿಕೆಗೆ ಕಾರಣ

ಭಾರತದಲ್ಲಿ ಚಿನ್ನದ ದರ ಪ್ರತಿ ದಿನ ಏರಳಿತವಾಗುತ್ತಲೇ ಇರುತ್ತದೆ. ಅದರಲ್ಲಿಯೂ ಚಿನ್ನದ ಬೆಲೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಯಾವುವು ಎನ್ನುವುದನ್ನು ನೋಡೋಣ.

ಬೇಡಿಕೆ ಮತ್ತು ಪೂರೈಕೆ: ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರ ವೃದ್ಧಿಯಾಗುತ್ತದೆ. ಅದೇ ರೀತಿ ಪೂರೈಕೆಯಲ್ಲಿನ ಅಡೆತಡೆಗಳು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸರ್ಕಾರದ ನೀತಿ: ಸರ್ಕಾರ ಆಮದು ಸುಂಕ, ತೆರಿಗೆ ಹೆಚ್ಚಿಸಿದರೆ ಚಿನ್ನದ ಬೆಲೆಯಲ್ಲಿಯೂ ಏರಿಕೆಯಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರಗಳ ದೊಡ್ಡ ಪ್ರಮಾಣದ ಖರೀದಿ ಅಥವಾ ಮಾರಾಟವು ಚಿನ್ನದ ಮಾರುಕಟ್ಟೆಯಲ್ಲಿ ಅಲೆಗಳನ್ನು ಸೃಷ್ಟಿಸುತ್ತದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ (RBI) ತೆಗೆದಿರಿಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ.

ಈ ಸುದ್ದಿಯನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಸರಣಿಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ವೃದ್ಧಿಗೆ ದಾರಿ ಮಾಡಿಕೊಡುತ್ತದೆ.