ನಾಯಿಂಧ್ರಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಕೆಎಸ್ಆರ್'ಟಿಸಿ ಬಸ್ ಓವರ್‌ಟೇಕ್ ಮಾಡಲು ಹೋಗಿ ಆಟೋ ಪಲ್ಟಿ
ಮಹಿಳೆಯರಿಗೆ ಕೂಲಿ ಕೆಲಸಕ್ಕೆ ಕರೆದೊಯುತ್ತಿದ್ದ ಆಟೋ ಒಂದು ಬಸ್ಸಿಗೆ ಓವರ್ ಅಟ್ಯಾಕ್ ಮಾಡಲು ಹೋಗಿ ಪಲ್ಟಿ ಹೊಡೆದು ಮೂವರು ಮಹಿಳಾ ಕೂಲಿ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಿಂಧ್ರಹಳ್ಳಿ ಗೇಟ್ ಸಮೀಪ ಬೆಳಗ್ಗೆ ಸಂಭವಿಸಿದೆ.
-
Ashok Nayak
Sep 28, 2026 11:13 PM
ಚಿಂತಾಮಣಿ: ಮಹಿಳೆಯರಿಗೆ ಕೂಲಿ ಕೆಲಸಕ್ಕೆ ಕರೆದೊಯುತ್ತಿದ್ದ ಆಟೋ ಒಂದು ಬಸ್ಸಿಗೆ ಓವರ್ ಅಟ್ಯಾಕ್ ಮಾಡಲು ಹೋಗಿ ಪಲ್ಟಿ ಹೊಡೆದು ಮೂವರು ಮಹಿಳಾ ಕೂಲಿ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಿಂಧ್ರಹಳ್ಳಿ ಗೇಟ್ ಸಮೀಪ ಬೆಳಗ್ಗೆ ಸಂಭವಿಸಿದೆ.
ಚಿಂತಾಮಣಿ ನಗರದ ಶಾಂತಿನಗರದ ವಾಸಿಗಳಾದ ಲಕ್ಷ್ಮಿ(55 ವರ್ಷ), ಮಂಜುಳಾ(28 ವರ್ಷ), ಸಿಂಧು(20 ವರ್ಷ). ಇವರು ಕೂಲಿ ಕೆಲಸ ಮಾಡಲು ಹೊಸಕೋಟೆ ಹೋಗುತ್ತಿದ್ದ ವೇಳೆ ಆಟೋ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಓವರ್ ಅಟ್ಯಾಕ್ ಮಾಡಲು ಹೋಗಿ ಆಟೋ ಪಲ್ಟಿ ಹೊಡೆದಿದೆ.
ಆಟೋನಲ್ಲಿದ್ದ ಮೂವರು ಕೂಲಿ ಕಾರ್ಮಿಕರು ಗಂಭೀರ ಗಾಯಗೊಂಡಿದ್ದು,ಸ್ಥಳೀಯರು ಕೂಡಲೇ ಮೂವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ.ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.