ಹೀರೋ ಮೋಟೋಕಾರ್ಪ್ ನಿಂದ ಹೀರೋ ಸಂಗ್ ತ್ಯೋಹಾರ್ ಹೈ ಹರ್ ಕಹೀನ್ ಅಭಿಯಾನ; ನಾಲ್ಕು ದಿನಗಳ ವಿಶೇಷ ಹೀರೋತ್ಸವ ಸಂಭ್ರಮಾಚರಣೆ ಆಯೋಜನೆ
ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಮೋಟಾರ್ಸೈಕಲ್ ಮತ್ತು ಸ್ಕೂಟರ್ ವಿಭಾಗಗಳಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹಾಗೂ ನವೀಕರಿಸಿರುವ 12 ಮಾದರಿಗಳಿಗೆ ಗ್ರಾಹಕರಿಂದ ಅಭೂತಪೂರ್ವ ಮತ್ತು ಅಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆಯನ್ನು ಆರಂಭಿಸಲಾಗಿದೆ.
-
ಬೆಂಗಳೂರು: ವಿಶ್ವದ ಅತಿ ದೊಡ್ಡ ಮೋಟಾರ್ಸೈಕಲ್ ಹಾಗೂ ಸ್ಕೂಟರ್ ತಯಾರಿಕಾ ಸಂಸ್ಥೆ ಯಾಗಿರುವ ಹೀರೋ ಮೋಟೋಕಾರ್ಪ್ ಹಬ್ಬದ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ದಾದ್ಯಂತ ಇರುವ ತನ್ನ ಗ್ರಾಹಕರಿಗಾಗಿ ಹಬ್ಬದ ಭರ್ಜರಿ ಕೊಡುಗೆಗಳು ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು ಒದಗಿಸುವ ನಾಲ್ಕು ದಿನಗಳ ವಿಶೇಷ ಸಂಭ್ರಮಾಚರಣೆ ಹೀರೋತ್ಸವವನ್ನು ಅಧಿಕೃತವಾಗಿ ಘೋಷಿಸಿದೆ.
ನ.4 ರವರೆಗೆ ನಡೆಯಲಿರುವ ಈ ನೂತನ ಯೋಜನೆಯು, ಕಂಪನಿಯು ದೇಶವ್ಯಾಪಿ ಯಶಸ್ವಿಯಾಗಿ ನಡೆಸುತ್ತಿರುವ ಹೀರೋ ಸಂಗ್ ತ್ಯೋಹಾರ್ ಹೈ ಹರ್ ಕಹೀನ್ ಹಬ್ಬದ ಅಭಿಯಾನಕ್ಕೆ ಮತ್ತಷ್ಟು ಪುಷ್ಟಿ ನೀಡಲಿದ್ದು, ತಮ್ಮ ಹಬ್ಬದ ದಿನಗಳನ್ನು ಚಿರಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿರುವ ಗ್ರಾಹಕರಲ್ಲಿ ದುಪ್ಪಟ್ಟು ಹರ್ಷವನ್ನು ತರಲಿದೆ.
ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಮೋಟಾರ್ಸೈಕಲ್ ಮತ್ತು ಸ್ಕೂಟರ್ ವಿಭಾಗಗಳಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹಾಗೂ ನವೀಕರಿಸಿರುವ 12 ಮಾದರಿಗಳಿಗೆ ಗ್ರಾಹಕರಿಂದ ಅಭೂತಪೂರ್ವ ಮತ್ತು ಅಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆಯನ್ನು ಆರಂಭಿಸಲಾಗಿದೆ.
ಇದನ್ನೂ ಓದಿ: My Hero Movie: ಮೇ 30 ರಿಂದ ಅಮೇಜಾನ್ ಪ್ರೈಮ್ನಲ್ಲಿ ʼಮೈ ಹೀರೋʼ ಪ್ರದರ್ಶನ
ಮಾರುಕಟ್ಟೆಯಲ್ಲಿನ ಈ ಅತ್ಯಧಿಕ ಬೇಡಿಕೆ ಹಾಗೂ ಡೀಲರ್ಶಿಪ್ಗಳಿಗೆ ದಾಖಲೆಯ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಿರುವುದು ಪ್ರಸ್ತುತ ಹಬ್ಬದ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಿದೆ.
ಈ ವಿಶೇಷ ಹೀರೋತ್ಸವದ ಮೂಲಕ, ನವ ಆರಂಭಗಳ ಈ ಪವಿತ್ರ ಋತುವನ್ನು ಗ್ರಾಹಕರಿಗೆ ಇನ್ನಷ್ಟು ಹೆಚ್ಚು ಲಾಭದಾಯಕವಾಗಿಸಲು ಕಂಪನಿಯು ಸಂಕಲ್ಪ ಮಾಡಿದ್ದು, ಪ್ರತಿಯೊಬ್ಬ ಗ್ರಾಹಕನೂ ತನ್ನ ನೆಚ್ಚಿನ ಹೀರೋ ದ್ವಿಚಕ್ರ ವಾಹನವನ್ನು ಮನೆಗೆ ಕೊಂಡೊಯ್ಯಲು ಮತ್ತೊಂದು ಅತ್ಯುತ್ತಮ ಮತ್ತು ಬಲವಾದ ಕಾರಣವನ್ನು ಕಲ್ಪಿಸಿಕೊಟ್ಟಿದೆ.
ನಾಲ್ಕು ದಿನಗಳ ಕಾಲ ನಡೆಯುವ ಈ ವೈಭವದ ಹೀರೋತ್ಸವ ಆಚರಣೆಯು ಗ್ರಾಹಕರಿಗೆ ಆಕರ್ಷಕ ಆಫರ್ಗಳ ಸಮಗ್ರ ಸರಣಿಯನ್ನೇ ಒದಗಿಸುತ್ತಿದ್ದು, ಅದರ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
- ಪ್ರತಿದಿನ ಆಕರ್ಷಕ ಬಹುಮಾನಗಳು: ಅದೃಷ್ಟಶಾಲಿಗಳಿಗೆ ಹೀರೋ ದ್ವಿಚಕ್ರ ವಾಹನಗಳು, ಚಿನ್ನದ ನಾಣ್ಯಗಳು ಹಾಗೂ ಇತರ ಖಚಿತ ಬಹುಮಾನಗಳನ್ನು ಗೆಲ್ಲುವ ಅಪೂರ್ವ ಅವಕಾಶ.
- ವಿಶೇಷ ರಿಟೇಲ್ ಹಣಕಾಸು ಸೌಲಭ್ಯಗಳು: ಶೇಕಡಾ 100 ರವರೆಗೆ ವಾಹನ ಸಾಲದ ನೆರವು, ಕೇವಲ ₹2,222 ರಿಂದ ಆರಂಭವಾಗುವ ಮಾಸಿಕ ಕಂತು (ಇಎಂಐ) ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ ಇಎಂಐ ಸೌಲಭ್ಯಗಳು ಲಭ್ಯವಿದ್ದು, ಗ್ರಾಹಕರು ತಮ್ಮ ಇಷ್ಟದ ದ್ವಿಚಕ್ರ ವಾಹನವನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೆ ಅತಿ ಸುಲಭವಾಗಿ ಮನೆಗೆ ತರಲು ಇದು ದಾರಿ ಮಾಡಿಕೊಡುತ್ತದೆ.
- ಕ್ರೆಡಿಟ್ ಕಾರ್ಡ್ ಕ್ಯಾಶ್ಬ್ಯಾಕ್ ಸೌಲಭ್ಯ: ಆಯ್ದ ಪ್ರಮುಖ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳ ಮೂಲಕ ವಹಿವಾಟು ನಡೆಸುವ ಗ್ರಾಹಕರಿಗೆ ₹10,000 ವರೆಗೆ ತಕ್ಷಣದ ನಗದು ರಿಯಾಯಿತಿ (ಇನ್ಸ್ಟಂಟ್ ಕ್ಯಾಶ್ಬ್ಯಾಕ್) ದೊರೆಯಲಿದೆ.
- ಕಾರ್ಪೊರೇಟ್ ಪ್ರಯೋಜನಗಳು: ಆಯ್ದ ನಿರ್ದಿಷ್ಟ ದ್ವಿಚಕ್ರ ವಾಹನ ಮಾದರಿಗಳ ಖರೀದಿಯ ಮೇಲೆ ₹6,000 ವರೆಗೆ ನೇರ ಉಳಿತಾಯದ ಸೌಲಭ್ಯ.
ಈ ನೂತನ ಹಬ್ಬದ ಆಫರ್ ಕುರಿತು ಮಾತನಾಡಿದ ಹೀರೋ ಮೋಟೋಕಾರ್ಪ್ ಸಂಸ್ಥೆಯ ಭಾರತೀಯ ವ್ಯವಹಾರ ಘಟಕದ ಮುಖ್ಯ ವಾಣಿಜ್ಯ ಅಧಿಕಾರಿ (ಸಿಬಿಒ) ಅಶುತೋಷ್ ವರ್ಮಾ ಅವರು , "ಪ್ರಸ್ತುತ ಹಬ್ಬದ ಋತುವಿನಲ್ಲಿ ದೇಶದ ಗ್ರಾಹಕರು ನಮ್ಮ ಹೀರೋ ಮೋಟೋಕಾರ್ಪ್ ಸಂಸ್ಥೆಯ ಮೇಲೆ ಇಟ್ಟಿರುವ ಅಗಾಧ ನಂಬಿಕೆ ಮತ್ತು ತೋರುತ್ತಿರುವ ಉತ್ಸಾಹವನ್ನು ಕಂಡು ನಾವು ನಿಜಕ್ಕೂ ವಿನಮ್ರರಾಗಿದ್ದೇವೆ ಹಾಗೂ ಕೃತಜ್ಞರಾಗಿದ್ದೇವೆ.
ನಾವು ಮಾರುಕಟ್ಟೆಗೆ ಪರಿಚಯಿಸಿದ 12 ಹೊಸ ಮತ್ತು ನವೀಕೃತ ಮಾದರಿಗಳಿಗೆ ಸಂದಿರುವ ಅಭೂತಪೂರ್ವ ಜನಮೆಚ್ಚುಗೆಯು ನಮ್ಮ ಉತ್ಪನ್ನಗಳ ದೃಢ ಸಾಮರ್ಥ್ಯವನ್ನು ಮತ್ತು ದೇಶಾ ದ್ಯಂತ ಇರುವ ಲಕ್ಷಾಂತರ ಗ್ರಾಹಕರೊಂದಿಗೆ ನಾವು ಹೊಂದಿರುವ ನಿರಂತರ ಬಾಂಧವ್ಯದ ಆಳವನ್ನು ಸಾಬೀತುಪಡಿಸಿದೆ.
ತಮ್ಮ ಮನೆಗೆ ನೂತನ ಹೀರೋ ದ್ವಿಚಕ್ರ ವಾಹನವನ್ನು ತರಲು ಬಯಸುತ್ತಿರುವ ಪ್ರತಿಯೊಬ್ಬರಿಗೂ ವಿಶೇಷ ಆಫರ್ಗಳು ಹಾಗೂ ಆಕರ್ಷಕ ಪ್ರಯೋಜನಗಳನ್ನು ಕಲ್ಪಿಸುವ ಮೂಲಕ, ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಲಾಭದಾಯಕ ಹಾಗೂ ಸ್ಮರಣೀಯ ಅನುಭವವನ್ನಾಗಿ ಪರಿವರ್ತಿಸು ವುದು ನಮ್ಮ ಹೀರೋತ್ಸವದ ಪ್ರಮುಖ ಉದ್ದೇಶವಾಗಿದೆ.
ಹಬ್ಬದ ವಾತಾವರಣವು ಎಲ್ಲೆಡೆ ಅತ್ಯಂತ ಗರಿಗೆದರಿದ್ದು, ನಮ್ಮ ಎಲ್ಲಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ವಾಹನಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿರುವ ಈ ಶುಭ ಸಂದರ್ಭದಲ್ಲಿ, ಗ್ರಾಹಕ ರೆಲ್ಲರೂ ಈ ಸೀಮಿತ ನಾಲ್ಕು ದಿನಗಳ ವಿಶೇಷ ಆಚರಣೆಯ ಸಂಪೂರ್ಣ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಾವು ಅತ್ಯಂತ ಪ್ರೀತಿಯಿಂದ ಆಹ್ವಾನಿಸುತ್ತೇವೆ" ಎಂದು ತಿಳಿಸಿದರು.
ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ಹೀರೋ ಮೋಟೋಕಾರ್ಪ್ ಡೀಲರ್ಶಿಪ್ಗೆ ನೇರವಾಗಿ ಭೇಟಿ ನೀಡುವ ಮೂಲಕ ಅಥವಾ ಕಂಪನಿಯ ಅಧಿಕೃತ ಡಿಜಿಟಲ್ ರಿಟೇಲ್ ಆನ್ಲೈನ್ ವೇದಿಕೆಯ ಮುಖಾಂತರ ಮುಂಗಡವಾಗಿ ಬುಕಿಂಗ್ ಮಾಡಿಕೊಂಡು ಈ ಎಲ್ಲಾ ಹೀರೋತ್ಸವ ಹಬ್ಬದ ಆಫರ್ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ವಿಶೇಷ ಕೊಡುಗೆಗಳು ಮತ್ತು ಆಕರ್ಷಕ ಸೌಲಭ್ಯಗಳು ಕೇವಲ ಸೀಮಿತ ಅವಧಿಗೆ, ಅಂದರೆ ನವೆಂಬರ್ 4 ರವರೆಗೆ ಮಾತ್ರ ಗ್ರಾಹಕರಿಗೆ ಲಭ್ಯವಿರಲಿವೆ.