ಮಲೇಷ್ಯಾ ಏರ್‌ಲೈನ್ಸ್ ನ 'ಟೈಮ್ ಫಾರ್ ಪ್ರೀಮಿಯಂ ಎಸ್ಕೇಪೇಡ್ಸ್': ಎಲಿವೇಟೆಡ್ ಜರ್ನಿ ಗಳಿಗೆ ಪ್ರೋತ್ಸಾಹ
ಎನ್‌ರಿಚ್ ಸದಸ್ಯರಿಗೆ ಆಗಸ್ಟ್ 5–6 ರವರೆಗೆ ಸುಲಭ ಪ್ರವೇಶ ಮತ್ತು ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಅವರಿಗೆ ಹೆಚ್ಚುವರಿ 5% ಉಳಿತಾಯ. ಈಗ ಮಲೇಷ್ಯಾ ಏರ್‌ಲೈನ್ಸ್ ವೆಬ್‌ಸೈಟ್ ಮೂಲಕ ಎಲ್ಲ 15 ಒನ್ ವರ್ಲ್ಡ್ ಏರ್‌ಲೈನ್‌ಗಳಲ್ಲಿ, 900+ ಜಾಗತಿಕ ತಾಣಗಳಿಗೆ ಪ್ರಯಾಣಿ ಸುವ ಎನ್‌ರಿಚ್ ಸದಸ್ಯರು ಆನ್‌ಲೈನ್‌ನಲ್ಲಿ ಪಾಯಿಂಟ್‌ಗಳನ್ನು ತಕ್ಷಣವೇ ರಿಡೀಮ್ ಮಾಡಬಹುದು


ಮಲೇಷ್ಯಾ ಏರ್‌ಲೈನ್ಸ್, ತನ್ನ ವಿಶೇಷ ’ಟೈಮ್ ಫಾರ್ ಪ್ರೀಮಿಯಂ ಎಸ್ಕೇಪೇಡ್ಸ್’ ಅಭಿಯಾನ ದೊಂದಿಗೆ ಪ್ರೀಮಿಯಂ ಪ್ರಯಾಣಕ್ಕೆ ಹೊಸ ಅರ್ಥ ನೀಡುವುದನ್ನು ಮುಂದುವರೆಸಿದೆ. ಹೆಸರಾಂತ ಮಲೇಷ್ಯನ್ ಹಾಸ್ಪಿಟಾಲಿಟಿ ಮತ್ತು ಪ್ರೀಮಿಯಂ ಆರಾಮದ ಬಿಸಿನೆಸ್ ವರ್ಗದಲ್ಲಿ ಮರೆಯ ಲಾಗದಂತಹ ಪ್ರಯಾಣಗಳನ್ನು ಕೈಗೊಳ್ಳಲು ಸದಭಿರುಚಿಯ ಪ್ರಯಾಣಿಕರಿಗೆ ಆಹ್ವಾನ ನೀಡುತ್ತಿದೆ. ತಡೆರಹಿತ ಸಂಪರ್ಕ, ಆಲೋಚಿಸಿ ಮಾಡಿರುವ ಸೌಕರ್ಯಗಳು ಮತ್ತು ಕ್ಯುರೇಟೆಡ್ ಇನ್‌ಫ್ಲೈಟ್ ಅನುಭವ ಎಲ್ಲವೂ ಇದರಲ್ಲಿದೆ.
ಮಲೇಷ್ಯಾ ಏವಿಯೇಷನ್ ಗ್ರೂಪ್ (ಎಮ್ಎಜಿ) ನ ಏರ್‌ಲೈನ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ದೆರ್ಸೆನಿಶ್ ಅರೆಸಾಂಡಿರನ್: “ಮಲೇಷ್ಯಾವನ್ನು ಜಗತ್ತಿಗೆ ಸಂಪರ್ಕಿಸುವ, ಶ್ರೇಷ್ಠ ಪರಂಪರೆಯನ್ನು ಹೊಂದಿರುವ ರಾಷ್ಟ್ರೀಯ ವಾಹಕವಾಗಿ ನಾವು, ಮಲೇಷ್ಯಾದ ವಿಶಿಷ್ಟ ಪ್ರೀಮಿಯಂ ಪ್ರಯಾಣ ಅನುಭವವನ್ನು ಎಲ್ಲರಿಗೂ ನೀಡಲು ಬದ್ಧರಾಗಿದ್ದೇವೆ. 'ಟೈಮ್ ಫಾರ್ ಪ್ರೀಮಿಯಂ ಎಸ್ಕೇಪೇಡ್ಸ್' ಮೂಲಕ, ಏಷ್ಯಾ ಪೆಸಿಫಿಕ್‌ನಲ್ಲಿ, ಮಲೇಷ್ಯಾ ಏರ್‌ಲೈನ್ಸ್ ನಲ್ಲಿರುವ ಸೌಕರ್ಯ, ಕಾಳಜಿ ಮತ್ತು ಶ್ರೇಷ್ಠತೆಯನ್ನು ಅನುಭವಿಸಿ ನೋಡಲು ನಾವು ಎಲ್ಲ ಪ್ರಯಾಣಿಕರನ್ನು ಆಹ್ವಾನಿಸುತ್ತಿದ್ದೇವೆ. ಇದು ಮಲೇಷ್ಯದ ಒಳಗಿರುವ ಮತ್ತು ಆಚೆಗಿರುವ ಸಮುದಾಯಗಳನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.”
ಇದನ್ನೂ ಓದಿ: Gururaj Gantihole Column: ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು
ಆಗಸ್ಟ್ 5 ರಿಂದ 20, 2025 ರವರೆಗೆ, ಆಗ್ನೇಯ ಏಷ್ಯಾ, ಆಸಿಯಾನ್, ಆಸ್ಟ್ರೇಲಿಯಾ ಮತ್ತು ನ್ಯೂಜಿ ಲೆಂಡ್‌ನಾದ್ಯಂತ ಆಯ್ದ ಸ್ಥಳಗಳಿಗೆ ರೂ. 47,999 ರಿಂದ ಪ್ರಾರಂಭವಾಗುವ ವಿಶೇಷ ಆಲ್-ಇನ್ ರಿಟರ್ನ್ ಬಿಸಿನೆಸ್ ಕ್ಲಾಸ್ ದರಗಳು, ನಿಮಗಾಗಿ. ಆಗಸ್ಟ್ 7, 2025 ಮತ್ತು ಮೇ 31, 2026 ರ ನಡುವೆ ಪ್ರಯಾಣಿಸುವವರಿಗೆ ಈ ಸವಲತ್ತುಗಳು ಲಭ್ಯವಿರುತ್ತವೆ. ಎನ್‌ರಿಚ್ ಸದಸ್ಯರಿಗೆ ಆಗಸ್ಟ್ 5–6 ರವರೆಗೆ ಸುಲಭ ಪ್ರವೇಶ ಮತ್ತು ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಅವರಿಗೆ ಹೆಚ್ಚುವರಿ 5% ಉಳಿತಾಯ. ಈಗ ಮಲೇಷ್ಯಾ ಏರ್‌ಲೈನ್ಸ್ ವೆಬ್‌ಸೈಟ್ ಮೂಲಕ ಎಲ್ಲ 15 ಒನ್ ವರ್ಲ್ಡ್ ಏರ್‌ಲೈನ್‌ಗಳಲ್ಲಿ, 900+ ಜಾಗತಿಕ ತಾಣಗಳಿಗೆ ಪ್ರಯಾಣಿಸುವ ಎನ್‌ರಿಚ್ ಸದಸ್ಯರು ಆನ್‌ಲೈನ್‌ನಲ್ಲಿ ಪಾಯಿಂಟ್‌ಗಳನ್ನು ತಕ್ಷಣವೇ ರಿಡೀಮ್ ಮಾಡಬಹುದು. ಇನ್ನೂ ಎನ್‌ರಿಚ್ ಸದಸ್ಯರಲ್ಲವೇ? ವಿಶೇಷ ಬಹುಮಾನಗಳು, ರಿಯಾಯಿತಿಗಳು ಇತ್ಯಾದಿಗಳನ್ನು ಅನ್‌ಲಾಕ್ ಮಾಡಲು ಉಚಿತವಾಗಿ ಸದಸ್ಯರಾಗಿ.
ಪ್ರಯಾಣ ಪ್ರಾರಂಭವಾದ ಕ್ಷಣದಿಂದ, ಬಿಸಿನೆಸ್ ಕ್ಲಾಸ್ ಅತಿಥಿಗಳಿಗೆ ಮಲೇಷ್ಯಾ ಏರ್‌ಲೈನ್ಸ್‌ನ ಗೋಲ್ಡನ್ ಲೌಂಜ್‌ಗೆ ಪ್ರವೇಶ, ಜೊತೆಗೆ ಆದ್ಯತೆಯ ಚೆಕ್-ಇನ್ ಕೌಂಟರ್‌ಗಳು ಮತ್ತು 50 ಕೆಜಿ ಬ್ಯಾಗೇಜ್ ಒಯ್ಯುವ ಅನುಕೂಲಗಳು ಇರುತ್ತವೆ. ನಿರ್ಗಮನದ ಮೊದಲು ವಿಶ್ರಾಂತಿ ಪಡೆಯುತ್ತಿರಲಿ ಅಥವಾ ಕೆಲಸ ಮಾಡುತ್ತಿರಲಿ, ಅತಿಥಿಗಳಿಗೆ ಗೌರ್ಮೆಟ್ ಡೈನಿಂಗ್, ಪ್ರೀಮಿಯಂ ಪಾನೀಯಗಳು ಮತ್ತು ಶಾಂತವಾಗಿರುವ ಲೌಂಜ್ ಸೆಟ್ಟಿಂಗ್‌ನಲ್ಲಿ ವಿಶೇಷ ಸೇವೆಯನ್ನು ನೀಡಲಾಗುತ್ತದೆ.
ಆನ್‌ಬೋರ್ಡ್‌ನಲ್ಲಿ ಪ್ರೀಮಿಯಂ ಅನುಭವ. ಶುರುವಿಗೆ ಎಂಎಚ್ ಸಿಗ್ನೇಚರ್ ಡ್ರಿಂಕ್. ಪೇರಲ, ಅನಾನಸ್ ಮತ್ತು ಹುಳಿ ಪ್ಲಮ್‌ನ ರುಚಿಕರವಾದ ಪಾನೀಯದೊಂದಿಗೆ ರಿಫ್ರೆಶ್ ಆಗಬಹುದು. ಷೆಫ್-ಆನ್-ಕಾಲ್ ಸೇವೆ. ಇದು ಬಿಸಿನೆಸ್ ಸ್ವೀಟ್ ಮತ್ತು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗಾಗಿಯೇ ಪ್ರತ್ಯೇಕವಾಗಿದೆ, ಪ್ರೀಮಿಯಂ ಪದಾರ್ಥಗಳೊಂದಿಗೆ ರಚಿಸಲಾದ ಗೌರ್ಮೆಟ್ ಮಲೇಷಿಯನ್ ಮತ್ತು ಅಂತಾರಾಷ್ಟ್ರೀಯ ಭಕ್ಷ್ಯಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಊಟದ ಅನುಭವ ಏರ್‌ಲೈನ್‌ನ ಸಿಗ್ನೇಚರ್ ಸಟೇ ಸ್ಕ್ಯೂಯರ್‌ಗಳಿಂದ ಮತ್ತಷ್ಟು ಉತ್ತಮಗೊಳ್ಳುತ್ತದೆ. ಇವುಗಳನ್ನು ಚೆನ್ನಾಗಿ ಗ್ರಿಲ್ ಮಾಡಿರಲಾಗುತ್ತದೆ ಮತ್ತು ಸಮೃದ್ಧವಾದ ಕಡಲೆಕಾಯಿ ಸಾಸ್‌ನೊಂದಿಗೆ ಬಿಸಿಯಾಗಿ ಬಡಿಸಲಾಗುತ್ತದೆ. ಇದು ಅಪ್ಪಟ ಮಲೇಷ್ಯಾದ ಆತಿಥ್ಯ. ಅತಿಥಿಗಳು ಏರ್‌ಲೈನ್‌ನ ಬೆಸ್ಟ್ ಆಫ್ ಏಷ್ಯಾ ಮೆನುವನ್ನು ಸಹ ಸವಿಯಬಹುದು, ಜುಲೈ ಮತ್ತು ಆಗಸ್ಟ್ ಹೊಸ ಮೆನು, ಅಯಮ್ ಮಸಾಕ್ ಮೇರಾದೊಂದಿಗೆ ನಾಸಿ ಹುಜನ್ ಪನಾಸ್, ಅಕಾರ್ ರಾಂಪೈ ಮತ್ತು ಅಕಾರ್ ನಾನಾಸ್ ಗಳಂತಹ ಮುಖ್ಯ ಪದಾರ್ಥಗಳಿರುತ್ತವೆ.
ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ಗಳು ಗೌಪ್ಯತೆ ಮತ್ತು ಸೌಕರ್ಯವನ್ನು ನೀಡುತ್ತವೆ, ದೀರ್ಘ-ಪ್ರಯಾಣದ ವಿಮಾನಗಳಲ್ಲಿ ಲಂಡನ್‌ನ ಆಸ್ಪಿನಲ್ ಸೌಲಭ್ಯ ಕಿಟ್‌ಗಳಿರುತ್ತವೆ. ಬಾಲಿ, ಸಿಡ್ನಿ, ಮೆಲ್ಬೋರ್ನ್, ಆಕ್ಲೆಂಡ್ ಮತ್ತು ಇತ್ತೀಚಿನ ಟೋಕಿಯೋ-ನರಿಟಾ ಸೇರಿದಂತೆ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಹೊಸ ಏರ್‌ಬಸ್ A330neo, ಕಾಲಿನ್ಸ್ ಏರೋಸ್ಪೇಸ್ ಎಲಿವೇಶನ್ ಸೀಟುಗಳು 1-2-1 ವಿನ್ಯಾಸ ದಲ್ಲಿರುತ್ತವೆ. ನೇರ ಹಜಾರಕ್ಕೆ ಪ್ರವೇಶ, 17.3-ಇಂಚಿನ 4K ಪರದೆಗಳು, ಬ್ಲೂಟೂತ್ ಜೋಡಣೆ ಮತ್ತು ವೈರ್‌ಲೆಸ್ ಚಾರ್ಜಿಂಗ್. A330neo A350 ಮತ್ತು ಆಯ್ದ A330-200/300 ವಿಮಾನಗಳಲ್ಲಿ MHconnect ಜೊತೆಗೆ ಉಚಿತ ಅನಿಯಮಿತ ವೈ-ಫೈ. ಮತ್ತೂ, A330neo ಸ್ಕ್ರೀಣ್ ಗಳಲ್ಲಿ ಕಿಡ್ಸ್ ಮೋಡ್ ಇರುವುದರಿಂದ ಕುಟುಂಬ-ಸ್ನೇಹಿ ವಾತಾವರಣವಿರುತ್ತದೆ.
ವ್ಯಾಪಾರ, ವಿರಾಮ ಅಥವಾ ಕಾತರತೆಯಿಂದ ಪುನರ್ಮಿಲನಕ್ಕಾಗಿ ಪ್ರಯಾಣಿಸುತ್ತಿರಲಿ, ಮಲೇಷ್ಯಾ ಏರ್‌ಲೈನ್ಸ್ ಅಸಾಧಾರಣ ಪ್ರೀಮಿಯಂ ಅನುಭವವನ್ನು ನೀಡಲು ಬದ್ಧವಾಗಿದೆ. ’ಟೈಮ್ ಫಾರ್ ಪ್ರೀಮಿಯಂ ಎಸ್ಕೇಪೇಡ್ಸ್’ ಅಭಿಯಾನ ಏಷ್ಯಾ ಪೆಸಿಫಿಕ್ ಮತ್ತು ಅದರಾಚೆಗಿನ ಎತ್ತರದ ಪ್ರದೇಶ ಗಳಿಗೆ ಹೋಗುವಾಗ ಮತ್ತು ದೀರ್ಘ-ಪ್ರಯಾಣ ಮಾಡುವಾಗ ಎಲ್ಲರ ಆಯ್ಕೆಯ ವಾಹಕವಾಗಿದೆ. ಇದು, ಏರ್‌ಲೈನ್‌ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲೆಲ್ಲ ಆಧುನಿಕ ಮಲೇಷ್ಯನ್ ಆತಿಥ್ಯ ಆತ್ಮೀಯತೆಯನ್ನು ಒದಗಿಸುತ್ತದೆ.
ನಿಮ್ಮ ಮುಂದಿನ ಪ್ರೀಮಿಯಂ ಪ್ರಯಾಣದ ಬಗ್ಗೆ ತಿಳಿಯಲು ಅಥವಾ ಬುಕ್ ಮಾಡಲು, malaysiaairlines.com ಗೆ ಭೇಟಿ ನೀಡಿ ಅಥವಾ ಮಲೇಷ್ಯಾ ಏರ್‌ಲೈನ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.