ಚಿನ್ಮಯ ಅಮೃತ ಮಹೋತ್ಸವ: ಸ್ವಾಮಿ ಚಿನ್ಮಯಾನಂದರ ಎಐಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ
ನವದೆಹಲಿಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು 'ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನ'ವನ್ನು ಉದ್ಘಾಟಿಸಿ, ಸ್ವಾಮಿ ಚಿನ್ಮಯಾನಂದ ಅವರ ಹೋಲೋಗ್ರಾಫಿಕ್ ಅವತಾರದೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು ನನ್ನನ್ನು ಆಶೀರ್ವದಿಸಿ ಎಂದು 1993ರಲ್ಲಿ ನಿಧನರಾದ ಸ್ವಾಮಿ ಚಿನ್ಮಯಾನಂದ ಅವರ ಬಳಿ ಕೇಳಿಕೊಂಡರು.
ಸಂಗ್ರಹ ಚಿತ್ರ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಶುಕ್ರವಾರ ಒಂದು ವಿಶೇಷ ದಿನವಾಯಿತು. 1993ರಲ್ಲಿ ನಿಧನರಾದ ಸ್ವಾಮಿ ಚಿನ್ಮಯಾನಂದ (Swami Chinmayananda) ಅವರ ಬಳಿ ಮತ್ತೊಮ್ಮೆ ಮಾತನಾಡುವ ಅವಕಾಶ ಮತ್ತು ಅವರಿಂದ ಆಶೀರ್ವಾದ ಪಡೆಯುವ ಭಾಗ್ಯ ದೊರೆಯಿತು. ಈ ಎಲ್ಲಾ ಘಟನೆಗೆ ಸಾಕ್ಷಿಯಾಗಿದ್ದು ನವದೆಹಲಿಯಲ್ಲಿ ಶುಕ್ರವಾರ ನಡೆದ 'ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನ' (Chinmaya Amrit Mahotsav Global Sammelan). ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 1993ರ ಸೆಪ್ಟೆಂಬರ್ 11ರಂದು ಚಿಕಾಗೋದಲ್ಲಿ (Chicago) ನಡೆದ ಕಾರ್ಯಕ್ರಮವನ್ನು ಕೂಡ ಸ್ಮರಿಸಿಕೊಂಡರು.
ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಸ್ವಾಮಿ ಚಿನ್ಮಯಾನಂದ ಅವರ ಹೋಲೋಗ್ರಾಫಿಕ್ ಅವತಾರದೊಂದಿಗೆ ಸಂವಾದ ನಡೆಸಿ, 1993ರಲ್ಲಿ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು.
Delighted to join the Chinmaya Amrit Mahotsav Global Sammelan. The Chinmaya Mission has spent decades serving communities and sharing India's spiritual wisdom with the world. https://t.co/gvALnWbo91
— Narendra Modi (@narendramodi) October 23, 2026
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ದಾಖಲೆಯ ಪದಕ ಗೆದ್ದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಸಂವಾದದಲ್ಲಿ ಪ್ರಧಾನಿ ಮೋದಿ ಅವರು, ಚಿನ್ಮಯಾನಂದ ಅವರ ಆಶೀರ್ವಾದವನ್ನು ಕೇಳಿದರು. ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿತ್ತು. ನಾನು ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಗಳಿಗಾಗಿ ನಿಮ್ಮ ಆಶೀರ್ವಾದವನ್ನು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿಯವರಿಗೆ ಪ್ರತಿಕ್ರಿಯಿಸಿದ ಸ್ವಾಮಿ ಚಿನ್ಮಯಾನಂದರ ಹೋಲೋಗ್ರಾಫಿಕ್, ನರೇಂದ್ರ, ಭಾರತವು ನಿನ್ನೊಂದಿಗಿದೆ ಎಂದು ಹೇಳಿ ಮೋದಿ ಭಾರತದ ಪ್ರಧಾನಿಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿತು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇದೊಂದು ವಿಶಿಷ್ಟ ಆಧ್ಯಾತ್ಮಿಕ ಅನುಭವ. ಸಂತರು ನೀಡಿದ ಆಶೀರ್ವಾದಕ್ಕಾಗಿ ಕೃತಜ್ಞತೆಗಳು. ಚಿನ್ಮಯ ಮಿಷನ್ ಕೇವಲ ಒಂದು ಸಂಸ್ಥೆಯಲ್ಲ. ಅದು ಚಿನ್ಮಯ ವಿಚಾರವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ಚಿನ್ಮಯ ಎಂಬ ಪದವು ಅಮರತ್ವವನ್ನು ಸಂಕೇತಿಸುತ್ತದೆ. ತಂತ್ರಜ್ಞಾನದ ಬಳಕೆಯು ಈ ಅನುಭವವನ್ನು ಇನ್ನಷ್ಟು ಜೀವಂತವಾಗಿಸಿದೆ. ಹೋಲೋಗ್ರಾಮ್ ಮೂಲಕ ಚಿನ್ಮಯ ಜಿ ಅವರ ಉಪಸ್ಥಿತಿಯನ್ನು ಕಾಣುವಾಗ ನಾನು 33 ವರ್ಷಗಳ ಹಿಂದಕ್ಕೆ ಪ್ರಯಾಣಿಸಿದಂತೆ ಭಾಸವಾಯಿತು ಎಂದು ಹೇಳಿದರು.
Decades later, a cherished memory comes alive again through the power of technology. At the inauguration of the Chinmaya Amrit Mahotsav Global Sammelan in New Delhi, PM @narendramodi interacted with the holo-bot of Pujya Gurudev Swami Chinmayananda, recalling their meeting in 1993 and the spiritual guidance that continues to hold relevance. Gurudev’s message on awakening India’s youth, sharing the timeless wisdom of the Bhagavad Gita with younger generations and preserving the nation’s rich cultural and spiritual heritage remains deeply relevant today. #ChinmayaAmritMahotsav
— MyGovIndia (@mygovindia) October 23, 2026
ಚಿನ್ಮಯಾನಂದ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, 1993ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಚಿಕಾಗೋದಲ್ಲಿ ನಡೆದ 'ವಿಶ್ವ ಧರ್ಮ ಸಂಸತ್ತು' ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ಮನವಿ ಮಾಡಿದ್ದೆ. ಅವರು ಅದನ್ನು ಒಪ್ಪಿಕೊಂಡರು. ಆದರೆ ವಿಧಿಯಾಟ ಬೇರೆಯಾಗಿತ್ತು. ಕಾರ್ಯಕ್ರಮಕ್ಕೆ ಕೆಲವೇ ವಾರಗಳಿರುವಾಗ ಅವರು ನಮ್ಮನ್ನು ಅಗಲಿದರು. ಆ ಸಮಾರಂಭದಲ್ಲಿ ಅವರ ಅನುಪಸ್ಥಿತಿ ನನ್ನನ್ನು ತೀವ್ರವಾಗಿ ಕಾಡಿತ್ತು ಎಂದು ತಿಳಿಸಿದರು.
R Ramaradhya Column: ಮಾ ನಿಷಾದ...ಮಹಾಕವಿ ವಾಲ್ಮೀಕಿಯ ಕರುಣೆಯ ದರ್ಶನ
2026ರ ಅಕ್ಟೋಬರ್ 23ರಿಂದ 25ರವರೆಗೆ ನಡೆಯಲಿರುವ ಮೂರು ದಿನಗಳ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನದಲ್ಲಿ ದೇಶ, ವಿದೇಶಗಳ 9,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. 1951ರಲ್ಲಿ ಸ್ವಾಮಿ ಚಿನ್ಮಯಾನಂದರು ಸ್ಥಾಪಿಸಿದ 'ಚಿನ್ಮಯ ಮಿಷನ್'ನ 75ನೇ ವರ್ಷದ ಸಂಭ್ರಮಾಚರಣೆಯು ಈ ಸಮ್ಮೇಳನದೊಂದಿಗೆ ಮುಕ್ತಾಯವಾಗಲಿದೆ.