ಜಕ್ಕೂರಿನಲ್ಲಿ ನೂತನ ಮಳಿಗೆ ಆರಂಭಿಸಿದ ಗೃಹಾಲಂಕಾರ ಉತ್ಪನ್ನಗಳ ಕಂಪೆನಿ
ಗ್ರಾಹಕರಿಗೆ ತಮ್ಮ ಮನೆಗಳ ವಿನ್ಯಾಸಕ್ಕೆ ಹೊಸ ಆಲೋಚನೆಗಳನ್ನು ನೀಡುವ ಉದ್ದೇಶ ದಿಂದ ಮಳಿಗೆ ರೂಪಿಸಲಾಗಿದ್ದು, ವಿಭಿನ್ನ ಕೋಣೆಗಳ ವಿನ್ಯಾಸಗಳು ಮತ್ತು ಉತ್ಪನ್ನಗಳ ಅನುಭ ವಾತ್ಮಕ ಪ್ರದರ್ಶನಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ. ಜೊತೆಗೆ, ಕಂಪನಿಯ ವಿನ್ಯಾಸ ಸಲಹೆಗಾರರು ಗ್ರಾಹಕರ ವೈಯಕ್ತಿಕ ಅಭಿರುಚಿ, ಅಗತ್ಯ ಮತ್ತು ಬಜೆಟ್ಗೆ ಅನುಗುಣವಾಗಿ ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ.
-
ಬೆಂಗಳೂರು: ಭಾರತದ ಪ್ರಮುಖ ಪೀಠೋಪಕರಣ ಮತ್ತು ಗೃಹಾಲಂಕಾರ ಉತ್ಪನ್ನಗಳ ಖಾಸಗಿ ಸಂಸ್ಥೆ ಬೆಂಗಳೂರಿನ ಜಕ್ಕೂರಿನಲ್ಲಿ ತನ್ನ ನೂತನ ಮಳಿಗೆ ಆರಂಭಿಸಿದೆ. ಈ ಮೂಲಕ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದ್ದು, ದೇಶಾದ್ಯಂತ ಗ್ರಾಹಕರಿಗೆ ಸುಲಭ, ಅನುಕೂಲಕರ ಮತ್ತು ವೈಯಕ್ತಿಕ ಗೊಳಿಸಿದ ಗೃಹೋಪಯೋಗಿ ಶಾಪಿಂಗ್ ಅನುಭವ ಒದಗಿಸುವ ತನ್ನ ಓಮ್ನಿಚಾ ನೆಲ್ ವಿಸ್ತರಣಾ ಕಾರ್ಯತಂತ್ರಕ್ಕೆ ಮತ್ತೊಂದು ಮೈಲಿಗಲ್ಲು ಸೇರಿಸಿದೆ.
ಜಕ್ಕೂರಿನಲ್ಲಿ ನೂತನ ಮಳಿಗೆ ಆರಂಭವಾಗುವುದರೊಂದಿಗೆ ಬೆಂಗಳೂರಿನಲ್ಲಿ ಮಳಿಗೆಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ದೇಶದ ಪ್ರಮುಖ ಗೃಹೋಪಯೋಗಿ ಮತ್ತು ಜೀವನಶೈಲಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ತನ್ನ ಗ್ರಾಹಕ ಸಂಪರ್ಕ ವಿಸ್ತರಿಸಲು ಸಂಸ್ಥೆಯು ಈ ಮೂಲಕ ಮುಂದಾಗಿದೆ. ಪ್ರಸ್ತುತ, ಈ ಖಾಸಗಿ ಸಂಸ್ಥೆಯ ದೇಶಾದ್ಯಂತ 90ಕ್ಕೂ ಹೆಚ್ಚು ನಗರಗಳಲ್ಲಿ 150ಕ್ಕೂ ಅಧಿಕ ಸ್ಟುಡಿಯೋಗಳು ಮತ್ತು ಮಳಿಗೆಗಳ ಮೂಲಕ ಗ್ರಾಹಕರಿಗೆ ತನ್ನ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.
ಸುಮಾರು 800 ಚದರ ಅಡಿ ವಿಸ್ತೀರ್ಣದಲ್ಲಿ ಸ್ಥಾಪಿಸಲಾಗಿರುವ ಜಕ್ಕೂರು ಸ್ಟುಡಿಯೋದಲ್ಲಿ ಪೀಠೋಪಕರಣಗಳು, ಹಾಸಿಗೆಗಳು, ಗೃಹಾಲಂಕಾರ ಉತ್ಪನ್ನಗಳು, ಮಾಡ್ಯುಲರ್ ಪರಿಹಾರ ಗಳು ಹಾಗೂ ವಿವಿಧ ಜೀವನಶೈಲಿ ಉತ್ಪನ್ನಗಳ ಆಯ್ದ ಶ್ರೇಣಿಯನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: E-Commerce: ಇ-ಕಾಮರ್ಸ್ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ
ಗ್ರಾಹಕರಿಗೆ ತಮ್ಮ ಮನೆಗಳ ವಿನ್ಯಾಸಕ್ಕೆ ಹೊಸ ಆಲೋಚನೆಗಳನ್ನು ನೀಡುವ ಉದ್ದೇಶ ದಿಂದ ಮಳಿಗೆ ರೂಪಿಸಲಾಗಿದ್ದು, ವಿಭಿನ್ನ ಕೋಣೆಗಳ ವಿನ್ಯಾಸಗಳು ಮತ್ತು ಉತ್ಪನ್ನಗಳ ಅನುಭವಾತ್ಮಕ ಪ್ರದರ್ಶನಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ. ಜೊತೆಗೆ, ಕಂಪನಿಯ ವಿನ್ಯಾಸ ಸಲಹೆಗಾರರು ಗ್ರಾಹಕರ ವೈಯಕ್ತಿಕ ಅಭಿರುಚಿ, ಅಗತ್ಯ ಮತ್ತು ಬಜೆಟ್ಗೆ ಅನುಗುಣವಾಗಿ ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಮಾತನಾಡಿದ ಕಂಪನಿಯ ಮುಖ್ಯ ವ್ಯವಹಾರ ಅಧಿಕಾರಿ ಹುಸೇನ್ ಕೇಸುರಿ ಅವರು, “ಬೆಂಗಳೂರು ನಮ್ಮ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಮನೆಗಳ ಒಳಾಂಗಣ ವಿನ್ಯಾಸ ಮತ್ತು ಸುಂದರವಾಗಿ ರೂಪಿಸಲಾದ ವಾಸಸ್ಥಳಗಳ ಬಗ್ಗೆ ಗ್ರಾಹಕರ ಆಸಕ್ತಿ ಹೆಚ್ಚುತ್ತಿದೆ. ಜಕ್ಕೂರಿನಲ್ಲಿ ನಮ್ಮ ಹೊಸ FOFO (Franchise Owned, Franchise Operated) ಸ್ಟುಡಿಯೋ ಆರಂಭಿಸಿರುವುದು, ಗ್ರಾಹಕರಿಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಇನ್ನಷ್ಟು ಹತ್ತಿರಕ್ಕೆ ತರುವ ಹಾಗೂ ತಡೆರಹಿತ ಓಮ್ನಿಚಾನೆಲ್ ಅನುಭವವನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸ್ಟುಡಿಯೋ ಗಳಲ್ಲಿ ಗ್ರಾಹಕರು ವಿವಿಧ ಉತ್ಪನ್ನಗಳನ್ನು ನೇರವಾಗಿ ವೀಕ್ಷಿಸಬಹುದು, ವೈಯಕ್ತಿಕ ಗೊಳಿಸಿದ ವಿನ್ಯಾಸ ಸಲಹೆಗಳನ್ನು ಪಡೆಯಬಹುದು ಮತ್ತು ತಮ್ಮ ಮನೆಗಳಿಗೆ ಸೂಕ್ತವಾದ ಆಯ್ಕೆಗಳನ್ನು ವಿಶ್ವಾಸದಿಂದ ಮಾಡಿಕೊಳ್ಳಬಹುದು,” ಎಂದು ಹೇಳಿದರು.
ಸ್ಟುಡಿಯೋದ ಫ್ರಾಂಚೈಸಿ ಮಾಲೀಕರಾದ ಶಶಾಂಕ್ ಕೆ. ರಾಮಕೃಷ್ಣ ಮಾತನಾಡಿ, “ಭಾರತದ ಪ್ರಮುಖ ಗೃಹೋಪಯೋಗಿ ಮತ್ತು ಪೀಠೋಪಕರಣ ಮಾರುಕಟ್ಟೆಯಾದ ಪೆಪ್ಪರ್ಫ್ರೈ ಜೊತೆ ಪಾಲುದಾರಿಕೆ ಹೊಂದಿರುವುದು ನಮಗೆ ಸಂತೋಷ ತಂದಿದೆ. ಪೆಪ್ಪರ್ಫ್ರೈ ತನ್ನ ವಿಶಿಷ್ಟ ಓಮ್ನಿಚಾನೆಲ್ ವ್ಯವಹಾರ ಮಾದರಿಯ ಮೂಲಕ ಗ್ರಾಹಕರಿಗೆ ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ ಅನುಭವಗಳನ್ನು ಸಮನ್ವಯಗೊಳಿಸುತ್ತಿದೆ. ದೇಶದ ಪ್ರಮುಖ ಓಮ್ನಿಚಾನೆಲ್ ಗೃಹೋಪಯೋಗಿ ಮತ್ತು ಪೀಠೋಪಕರಣ ವ್ಯವಹಾರ ಗಳಲ್ಲಿ ಒಂದನ್ನು ನಿರ್ಮಿಸುವ ಪೆಪ್ಪರ್ಫ್ರೈನ ಬೆಳವಣಿಗೆಯ ಪಯಣದ ಭಾಗವಾಗಿರುವು ದಕ್ಕೆ ನಾವು ಹೆಮ್ಮೆಪಡುತ್ತೇವೆ,” ಎಂದು ತಿಳಿಸಿದರು.
ಪೆಪ್ಪರ್ಫ್ರೈನ ಓಮ್ನಿಚಾನೆಲ್ ಮಾದರಿಯು ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಅನ್ವೇಷಿಸುವ ಅನುಕೂಲದೊಂದಿಗೆ, ಸ್ಟುಡಿಯೋಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ನೇರವಾಗಿ ವೀಕ್ಷಿಸುವ ಮತ್ತು ಪರಿಶೀಲಿಸುವ ಅವಕಾಶವನ್ನು ಒದಗಿಸುತ್ತದೆ. ಇದರಿಂದ ಗ್ರಾಹಕರು ಉತ್ಪನ್ನಗಳ ವಿನ್ಯಾಸ, ಗುಣಮಟ್ಟ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಂಡು ತಮ್ಮ ಅಗತ್ಯಗಳಿಗೆ ತಕ್ಕ ನಿರ್ಧಾರಗಳನ್ನು ಕೈಗೊಳ್ಳಬಹುದು.
ಇದರೊಂದಿಗೆ, ಜಕ್ಕೂರು ಸ್ಟುಡಿಯೋ ಒಳಾಂಗಣ ವಿನ್ಯಾಸ ಸಮಾಲೋಚನೆಗಳು ಮತ್ತು ಮಾಡ್ಯುಲರ್ ಗೃಹ ಪರಿಹಾರಗಳಿಗೂ ಕೇಂದ್ರವಾಗಿರಲಿದೆ. ಗ್ರಾಹಕರು ತಮ್ಮ ಮನೆಗಳ ಸ್ಥಳಾವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ವಿನ್ಯಾಸದ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ತಮ್ಮ ಅಭಿರುಚಿಗೆ ತಕ್ಕ ವಾಸಸ್ಥಳಗಳನ್ನು ರೂಪಿಸಿಕೊಳ್ಳಲು ಈ ಸ್ಟುಡಿಯೋ ನೆರವಾಗಲಿದೆ.