ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೂಪಾಯಿ ಮೌಲ್ಯ ಕುಸಿತ: ಆರ್ ಬಿಐನಿಂದ ರೆಪೋ ದರ ಇಳಿಕೆ

ಜಿಡಿಪಿಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದೆ. ರೆಪೋ ದರ 25 ಬೇಸಿಸ್ ಪಾಯಿಂಟ್‌ ಕಡಿತಗೊಂಡಿದ್ದು, ಇದರಿಂದ ರೆಪೋ ಬಡ್ಡಿ ದರ ಶೇ. 5.50 ರಿಂದ 5.25ಕ್ಕೆ ಇಳಿಕೆಯಾಗಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ರೆಪೊ ದರ ಶೇ. 5.25ಕ್ಕೆ ಇಳಿಕೆ

(ಸಂಗ್ರಹ ಚಿತ್ರ) -

ನವದೆಹಲಿ: ಸಾಲ (Loan), ಇಎಂಐ (EMI) ಕಟ್ಟುವವರಿಗೆ ಒಂದು ಶುಭ ಸುದ್ದಿ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ರೆಪೋ ದರವನ್ನು (repo rate) ಇಳಿಕೆ ಮಾಡಿದ್ದು, ಇದರಿಂದ ಸಾಲ, ಇಎಂಐ ಬಡ್ಡಿ ದರವೂ ಇಳಿಕೆಯಾಗಲಿದೆ. ದೇಶದ ಜಿಡಿಪಿಗೆ (GDP) ಉತ್ತೇಜನ ನೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದೆ. ಇದರಲ್ಲಿ 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಲಾಗಿದ್ದು, ಇದರಿಂದ ರೆಪೋ ಬಡ್ಡಿ ದರ ಶೇ. 5.50 ರಿಂದ ಶೇ. 5.25ಕ್ಕೆ ಇಳಿಕೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರೆಪೋ ದರದ ಬೇಸಿಸ್ ಪಾಯಿಂಟ್ 25 ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಇದಾರರಿಂದ ಸಾಲ, ಇಎಂಐ ಮೇಲಿನ ಬಡ್ಡಿ ದರವೂ ಇಳಿಕೆಯಾಗಲಿದೆ.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ವಯಸ್ಸಿನ ಮಿತಿ ಇದೆಯೇ? ಯಾರೆಲ್ಲ ಇನ್‌ವೆಸ್ಟ್‌ ಮಾಡಬಹುದು? ನಿಮ್ಮೆಲ್ಲ ಅನುಮಾನಗಳಿಗೆ ಇಲ್ಲಿದೆ ಉತ್ತರ

ರೆಪೋ ದರ ಇಳಿಕೆಯಾಗಿರುವುದರಿಂದ ಹೊಸ ಸಾಲಗಾರರಿಗೆ ಗೃಹ ಸಾಲ, ವಾಹನದ ಮೇಲಿನ ಸಾಲ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಾಗಲಿದೆ. ಅಲ್ಲದೇ ಆಟೊಮೊಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳು ಕೂಡ ಇಳಿಕೆಯಾಗಬಹುದು. ಕಳೆದ ಫೆಬ್ರವರಿಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದ ಬೇಸಿಸ್ ಪಾಯಿಂಟ್ 125 ರಷ್ಟನ್ನು ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ 25, ಏಪ್ರಿಲ್‌ನಲ್ಲಿ 25, ಜೂನ್‌ನಲ್ಲಿ 50 ಬೇಸಿಸ್‌ ಪಾಯಿಂಟ್‌ ಕಡಿತಗೊಂಡಿತ್ತು ಎನ್ನುತ್ತಾರೆ ಆರ್ಥಿಕ ತಜ್ಞರು.

ಏನಿದು ರೆಪೋ ದರ?

ರಿಸರ್ವ್ ಬ್ಯಾಂಕ್ ನಿಂದ ವಾಣಿಜ್ಯ ಬ್ಯಾಂಕ್ ಗಳು ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನಲಾಗುತ್ತದೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲಸೌಲಭ್ಯ ದೊರೆಯುತ್ತದೆ. ರೆಪೋ ರೇಟ್‌ ಹೆಚ್ಚಾದರೆ ಬ್ಯಾಂಕ್‌ಗಳು

ನೀಡುವ ಸಾಲದ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳವಾಗುತ್ತದೆ. ಇದರಿಂದ ವಾಹನ, ಗೃಹ ಸಾಲಗಳ ಬಡ್ಡಿ ದರದಲ್ಲಿ ಹೆಚ್ಚಳವಾಗುತ್ತದೆ.

ಯಾಕಾಗಿ ರೆಪೋ ದರ ಇಳಿಕೆ?

ಹಣದುಬ್ಬರವು ರೆಪೋ ದರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹಣದುಬ್ಬರ ಏರಿಕೆ ಮತ್ತು ಇಳಿಕೆಯ ವೇಗವನ್ನು ಗಮನದಲ್ಲಿಟ್ಟುಕೊಂಡು ರೆಪೋ ದರವನ್ನು ಇಳಿಕೆ ಮಾಡಲಾಗಿದೆ. ಇತ್ತೀಚೆಗೆ ಚಿಲ್ಲರೆ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಬೆಲೆಯ ಮೇಲೆ ಸ್ಥಿರತೆ ಕಾಯ್ದುಕೊಳ್ಳಲು ಆರ್ ಬಿಐ ಸಾಕಷ್ಟು ಅವಕಾಶ ನೀಡಿದೆ. ಹೀಗಾಗಿ ದೇಶದ ಆರ್ಥಿಕತೆಯು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ.

ರೆಪೋ ದರ ಇಳಿಕೆ ನಿರ್ಧಾರ ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರದ ಬಗ್ಗೆ ಚರ್ಚಿಸಲು ಡಿಸೆಂಬರ್ ಕಳೆದ ಮೂರು ದಿನಗಳಿಂದ ಸಭೆ ನಡೆಯುತ್ತಿದೆ. ಬೆಳವಣಿಗೆ ಕಾಣುತ್ತಿರುವ ಆರ್ಥಿಕ ಪರಿಸ್ಥಿತಿಗಳು ಮತ್ತು ಭವಿಷ್ಯದ ದೃಷ್ಟಿಕೋನವನ್ನು ಅವಲಂಭಿಸಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ. 5.25ಕ್ಕೆ ಇಳಿಸಲು ಎಂಪಿಸಿ ಸರ್ವಾನುಮತದಿಂದ ನಿರ್ಣಯ ಮಾಡಿದ್ದು ಇದು ತಕ್ಷಣದಿಂದ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.

ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ. 8.2ರಷ್ಟು ಬೆಳವಣಿಗೆಯಾಗಿದೆ. ಅಲ್ಪ ಪ್ರಮಾಣದ ಹಣದುಬ್ಬರದ ಪರಿಣಾಮ ಇದರ ಮೇಲೆ ಬಿದ್ದಿದೆ. ಕಳೆದ ಅಕ್ಟೋಬರ್ ನಲ್ಲಿ ಚಿಲ್ಲರೆ ಮಾರುಕಟ್ಟೆ ಮೇಲೆ ಹಣ ದುಬ್ಬರದ ಪ್ರಭಾವ ಶೇ. 0.25ರಷ್ಟಾಗಿದೆ. ಇದು ದಾಖಲೆಯ ಕನಿಷ್ಠ ಮಟ್ಟವಾಗಿದೆ.

Mobile Safety Alert: ಮೊಬೈಲ್‌ನಲ್ಲಿ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆ; ರಿಲಯನ್ಸ್ ಜಿಯೋ ಜತೆ ಎನ್ಎಚ್ಎಐ ಒಪ್ಪಂದ

ಅಕ್ಟೋಬರ್ 1ರಿಂದ ರೆಪೊ ದರವನ್ನು ಶೇಕಡಾ 5.5ರಷ್ಟು ಕಾಯ್ದುಕೊಂಡಿರುವ ಆರ್ ಬಿಐ ಇದೀಗ ವರ್ಷಾಂತ್ಯದಲ್ಲಿ ರೆಪೋ ದರವನ್ನು ಇಳಿಕೆ ಮಾಡಿದೆ. ಜಿಡಿಪಿ ಬಲವಾಗಿರುವಾಗ ಹಣದುಬ್ಬರವು ಇಳಿಕೆಯಾಗುವ ನೀರಿಕ್ಷೆಯಿಂದ ರೆಪೋ ದರ ಇಳಿಸಲಾಗಿದೆ ಎಂದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಬ್ಲೂಮ್‌ಬರ್ಗ್ ನಡೆಸಿರುವ ಸಮೀಕ್ಷೆ ಪ್ರಕಾರ ಹೆಚ್ಚಿನ ಆರ್ಥಿಕ ತಜ್ಞರು ಹಣದುಬ್ಬರವು ಶೇ. 4ಕ್ಕಿಂತ ಕಡಿಮೆಯಿರುವುದರಿಂದ ಆರ್‌ಬಿಐ ರೆಪೋ ದರವನ್ನು ಶೇ. 5.25ಕ್ಕೆ ಇಳಿಸುತ್ತಾರೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದರು. ಭಾರತದ ಆರ್ಥಿಕತೆ ವೇಗವಾಗಿ ವಿಸ್ತರಿಸುತ್ತಿರುವುದರಿಂದ ಡಾಲರ್‌ ಎದುರು ರೂಪಾಯಿ ಮೌಲ್ಯ 90ಕ್ಕಿಂತ ಕಡಿಮೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹೀಗಾಗಿ ರೆಪೋ ದರವನ್ನು ಕೂಡ ಆರ್‌ಬಿಐ ಕನಿಷ್ಠ ಮಟ್ಟಕ್ಕೆ ಇಳಿಸಿದೆ.