Share Market: ಸೆನ್ಸೆಕ್ಸ್ 1,200 ಅಂಕ ಜಿಗಿತ, ನಿಫ್ಟಿ 350 ಅಂಕ ಏರಿಕೆ; ಕಾರಣವೇನು?
Sensex and Nifty: ಬುಧವಾರ ಸೆನ್ಸೆಕ್ಸ್ 1,200 ಅಂಕ, ನಿಫ್ಟಿ 349 ಅಂಕ ಹೆಚ್ಚಳವಾಯಿತು. ಆ ಮೂಲಕ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನೋಶನಲ್ ಲಾಭವಾಯಿತು. ಕಳೆದ ಎರಡು ವಹಿವಾಟು ದಿನಗಳಿಂದ ತೀವ್ರ ನಷ್ಟದಲ್ಲಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಇವತ್ತು ಗಣನೀಯ ಚೇತರಿಕೆ ಕಂಡಿತು. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್‌ಗಳು 3 ಪರ್ಸೆಂಟ್ ತನಕ ಚೇತರಿಸಿಕೊಂಡಿತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಎ. 1: ಸೆನ್ಸೆಕ್ಸ್ (Sensex) ಏಪ್ರಿಲ್ 1ರಂದು 1,187 ಅಂಕ ಏರಿಕೆಯಾಗಿ 73,134ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 349 ಅಂಕ ಹೆಚ್ಚಳವಾಗಿ 22,679ಕ್ಕೆ ಸ್ಥಿರವಾಯಿತು. ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನೋಶನಲ್ ಲಾಭವಾಯಿತು. ಕಳೆದ ಎರಡು ವಹಿವಾಟು ದಿನಗಳಿಂದ ತೀವ್ರ ನಷ್ಟದಲ್ಲಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಇವತ್ತು ಗಣನೀಯ ಚೇತರಿಸಿತು. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್‌ಗಳು 3 ಪರ್ಸೆಂಟ್ ತನಕ ಚೇತರಿಸಿತು.
ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ಮೀಡಿಯಾ ಇಂಡೆಕ್ಸ್‌ಗಳು ತಲಾ 3.7 ಪರ್ಸೆಂಟ್ ಏರಿಕೆ ದಾಖಲಿಸಿತು. ಮೆಟಲ್, ಐಟಿ, ಆಟೊಮೊಬೈಲ್ ಇಂಡೆಕ್ಸ್‌ಗಳು ತಲಾ 2 ಪರ್ಸೆಂಟ್ ವೃದ್ಧಿಸಿತು. ನಿಫ್ಟಿ ಬ್ಯಾಂಕ್ ಇಂಡೆಕ್ಸ್ 2,33 ಪರ್ಸೆಂಟ್ ವೃದ್ಧಿಸಿತು. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 412 ಲಕ್ಷ ಕೋಟಿ ರುಪಾಯಿಗಳಿಂದ 422 ಲಕ್ಷ ಕೋಟಿ ರುಪಾಯಿಗೆ ವೃದ್ಧಿಸಿತು.
ವಿಡಿಯೊ ಇಲ್ಲಿದೆ:
ಷೇರು ಸೂಚ್ಯಂಕಗಳ ಚೇತರಿಕೆಗೆ ಕಾರಣವಾದ 5 ಕಾರಣಗಳು
- ಅಮೆರಿಕ- ಇರಾನ್ ಯುದ್ಧ ಒಂದೆರಡು ವಾರಗಳು ಅಂತ್ಯವಾಗಬಹುದು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸಕಾರಾತ್ಮಕ ಪ್ರಭಾವ ಬೀರಿತು.
- ಏಷ್ಯಾದ ಮಾರುಕಟ್ಟೆಗಳು ಸಕಾರಾತ್ಮಕವಾಗಿತ್ತು. ಕೊರಿಯಾ, ಜಪಾನ್, ಯುರೋಪ್‌ನಲ್ಲಿ ಸೂಚ್ಯಂಕಗಳು ಚೇತರಿಸಿತು.
- ಡಾಲರ್ ಇಂಡೆಕ್ಸ್ 0.50% ಇಳಿಕೆ ದಾಖಲಿಸಿತು. ಡಾಲರ್ ಬಾಂಡ್ ಯೀಲ್ಡ್ ಇಳಿಕೆಯಾಗುವುದು ಭಾರತದಂತಹ ಎಮರ್ಜಿಂಗ್ ಮಾರುಕಟ್ಟೆಗಳಿಗೆ ಸಕಾರಾತ್ಮಕವಾಗಿದೆ.
- ನಿಫ್ಟಿ 50 ಇಂಡೆಕ್ಸ್ ಮಾರ್ಚ್ ನಲ್ಲಿ 11.3% ಇಳಿದಿರುವುದರಿಂದ ಷೇರುಗಳ ವಾಲ್ಯುಯೇಶನ್ ದೃಷ್ಟಿಯಿಂದ ಲಾಂಗ್ ಟರ್ಮ್ ಹೂಡಿಕೆಗೆ ಅನುಕೂಲಕರವಾಗಿತ್ತು.
5. ನಿಫ್ಟಿ 50 ಸೂಚ್ಯಂಕವು 22,700-22,800 ರ ಮಟ್ಟದಲ್ಲಿ ಕ್ರೂಶಿಯಲ್ ರೆಸಿಸ್ಟೆನ್ಸ್ ಅನ್ನು ತೋರಿಸಿತ್ತು. ಒಂದು ಹಂತದಲ್ಲಿ 22,900ಕ್ಕೂ ಏರಿತ್ತು.
ಐಪಿಒಗೆ ಎನ್‌ಎಸ್‌ಸಿ ಸಿದ್ಧತೆ
ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆಗಿರುವ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಎನ್‌ಎಸ್‌ಇ 20,000 ಕೋಟಿ ರುಪಾಯಿಗಳ ಐಪಿಒ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಪದವೀಧರರಿಗೆ ಗುಡ್‌ನ್ಯೂಸ್; ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1,425 ಹುದ್ದೆ
ಎನ್‌ಎಸ್‌ಇ ಷೇರುಗಳನ್ನು ಅನೇಕ ಮಂದಿ ಈಗಾಗಲೇ ಅನ್ ಲಿಸ್ಟೆಡ್ ಮಾರ್ಕೆಟ್‌ನಲ್ಲಿ ಖರೀದಿಸಿದ್ದಾರೆ. ಅಲ್ಲಿ ಅದರ ಬೆಲೆ ಪ್ರತಿ ಷೇರಿಗೆ 1,925 ರುಪಾಯಿ ಆಸುಪಾಸಿನಲ್ಲಿದೆ.
ಅನ್ ಲಿಸ್ಟೆಡ್ ಮಾರ್ಕೆಟ್ ನಲ್ಲಿ ಷೇರುಗಳನ್ನು ಹೊಂದಿರುವವರು ಎನ್‌ಎಸ್‌ಇ ಐಪಿಒದಲ್ಲಿ ಷೇರುಗಳನ್ನು ಮಾರಲು ಬಯಸುವುದಿದ್ದರೆ ಕೆಲವು ನಿಯಮಗಳು ಇವೆ. ಇದು ಆಟೊಮ್ಯಾಟಿಕ್ ಆಗಿ ಆಗುವುದಿಲ್ಲ.
ಅನ್ ಲಿಸ್ಟೆಡ್ ಷೇರುಗಳನ್ನು ಐಪಿಒದಲ್ಲಿ ಮಾರಾಟ ಮಾಡುವವರು, ಇದೇ ಐಪಿಒದಲ್ಲಿ ಹೂಡಿಕೆದಾರರಾಗಿ ಮರಳಲು ಅವಕಾಶ ಇರುವುದಿಲ್ಲ. ಷೇರುಗಳ ಮಂಜೂರಾದ ಬಳಿಕ 6 ತಿಂಗಳಿನ ಲಾಕ್ ಇನ್ ಅವಧಿ ಇರುತ್ತದೆ.
ಷೇರುದಾರರು ತಮ್ಮ ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್ ಸಲ್ಲಿಸಲು 2026ರ ಏಪ್ರಿಲ್ 27ರ ತನಕ ಅವಕಾಶ ಇರುತ್ತದೆ. ಒಂದು ವೇಳೆ ಅನ್ ಲಿಸ್ಟೆಡ್ ಷೇರುಗಳನ್ನು ಷೇರುದಾರರು ಐಪಿಒದಲ್ಲಿ ಮಾರಾಟ ಮಾಡದಿದ್ದರೆ ಏನಾಗುತ್ತದೆ?
ಐಪಿಒ ಬಳಿಕ ಲಿಸ್ಟೆಡ್ ಷೇರುಗಳಾಗಿ ಬದಲಾಗುತ್ತದೆ. ಆದರೆ ತಕ್ಷಣ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. 6 ತಿಂಗಳಿನ ಲಾಕ್ ಇನ್ ಅವಧಿಯ ನಂತರ ಮಾರಾಟ ಮಾಡಬಹುದು ಅಥವಾ ಇಟ್ಟುಕೊಳ್ಳಬಹುದು.