ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೆ 'ರಾಣಿ'ಯಾಗಿ ಮಿಂಚಲು ಸಜ್ಜಾದ ಸಂಸದೆ ಕಂಗನಾ ರಣಾವತ್; 13 ವರ್ಷಗಳ ನಂತರ ಬರಲಿದೆ 'ಕ್ವೀನ್ 2'!

ʻಕ್ವೀನ್‌ 2ʼ ಚಿತ್ರದ ಮೂಲಕ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತೆ ತೆರೆಯ ಮೇಲೆ ರಾಣಿ ಮೆಹ್ರಾ ಆಗಿ ಮಿಂಚಲು ಸಜ್ಜಾಗಿದ್ದಾರೆ. 13 ವರ್ಷಗಳ ಹಿಂದೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಸೀಕ್ವೆಲ್ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದೆ. ಮೊದಲ ಭಾಗದಲ್ಲಿ ವಿದೇಶಿ ಪ್ರವಾಸ ಮಾಡಿದ್ದ ರಾಣಿ, ಈ ಬಾರಿ ಭಾರತದ ವಿವಿಧ ನಗರಗಳಲ್ಲಿ ಪಯಣ ಮಾಡಲಿದ್ದಾರೆ.

13 ವರ್ಷದ ನಂತರ ಬರ್ತಿದೆ 'ಕ್ವೀನ್' ಸೀಕ್ವೇಲ್; 'ರಾಣಿ' ಆಲಿದ್ದಾರೆ ಕಂಗನಾ

-

Avinash GR
Avinash GR Apr 1, 2026 8:56 PM

ನಟಿ, ಸಂಸದೆ ಕಂಗನಾ ರಣಾವತ್ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಹಿಟ್‌ ಸಿನಿಮಾ ಎಂದರೆ, 'ಕ್ವೀನ್' ಎನ್ನಬಹುದು. ಆ ಚಿತ್ರದ ನಂತರ ಕಂಗನಾ ಅವರ ಇಮೇಜ್‌ ಸಂಪೂರ್ಣವಾಗಿ ಬದಲಾಯಿತೆಂದರೆ, ಅತಿಶಯೋಕ್ತಿ ಅಲ್ಲ. 13 ವರ್ಷಗಳ ಹಿಂದೆ ತೆರೆಕಂಡಿದ್ದ ಕ್ವೀನ್‌ ಸಿನಿಮಾವು ನಿರ್ಮಾಪಕರಿಗೆ ದೊಡ್ಡ ಲಾಭ ತಂದುಕೊಟ್ಟಿತ್ತು. ಕಂಗನಾಗೆ ನ್ಯಾಷನಲ್‌ ಅವಾರ್ಡ್‌ ತಂದುಕೊಟ್ಟಿತ್ತು. ಈಗೇಕೆ ಈ ಚಿತ್ರದ ಬಗ್ಗೆ ಮಾತು ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ.

ಬರ್ತಿದೆ ಕ್ವೀನ್‌ 2

ಈಗೆಲ್ಲಾ ಸೀಕ್ವೇಲ್‌ಗಳದ್ದೇ ಜಮಾನಾ. ಇದರ ನಡುವೆಯೇ ನಟಿ ಕಂಗನಾ ರಣಾವತ್‌ ಅವರು ಮತ್ತೆ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಅದು ಕೂಡ ಕ್ವೀನ್‌ 2 ಚಿತ್ರದ ಮೂಲಕ. ಇದರ ಚಿತ್ರೀಕರಣವು ಏಪ್ರಿಲ್ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. 2013ರಲ್ಲಿ ಬಿಡುಗಡೆಯಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಗಳಿಸಿದ್ದ ಕ್ವೀನ್‌ ಚಿತ್ರದ ಸೀಕ್ವೇಲ್‌ ಹೇಗೆ ಮೂಡಿಬರಬಹುದು ಎಂಬ ಕೂತಹಲ ಸಿನಿಪ್ರಿಯರಲ್ಲಿ ಇದೆ.

Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!

ರಾಣಿ ಮೆಹ್ರಾ ಪಾತ್ರ ಹಾಗೇ ಇರಲಿದೆಯಾ?

ಕ್ವೀನ್‌ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್‌ ಅವರು ರಾಣಿ ಮೆಹ್ರಾ ಎಂಬ ಪಾತ್ರ ಮಾಡಿದ್ದರು. ಸೀಕ್ವೇಲ್‌ನಲ್ಲೂ ಅದೇ ಪಾತ್ರ ಮುಂದುವರಿಯಲಿದೆಯಂತೆ. ಮೊದಲ ಭಾಗದಲ್ಲಿ ಸಣ್ಣ ಊರಿನ ಹುಡುಗಿಯೊಬ್ಬಳು ಯುರೋಪ್ ಪ್ರವಾಸದ ಮೂಲಕ ತನ್ನನ್ನು ತಾನು ಕಂಡುಕೊಳ್ಳುವ ಕಥೆಯಿತ್ತು. ಆದರೆ, ಸೀಕ್ವೆಲ್‌ನಲ್ಲಿ ರಾಣಿ ನಗರ ಪ್ರದೇಶದ ಪಾತ್ರವಾಗಿ ಕಾಣಿಸಿಕೊಳ್ಳಲಿದ್ದಾರೆ. ಆಕೆಯ ಚುರುಕುತನ ಹಾಗೆಯೇ ಇರಲಿದ್ದು, ಜೀವನದ ಒಂದು ಪ್ರಮುಖ ಘಟನೆಯಿಂದ ಪ್ರೇರಿತವಾಗಿ ಮತ್ತೊಂದು ಹೊಸ ಆತ್ಮಾವಲೋಕನದ ಪಯಣವನ್ನು ಈ ಚಿತ್ರದ ಮೂಲಕ ರಾಣಿ ಪಾತ್ರ ಮಾಡಲಿದೆಯಂತೆ. ಜೊತೆಗೆ ಈ ಬಾರಿ ಅಂತರರಾಷ್ಟ್ರೀಯ ಪ್ರವಾಸದ ಬದಲು, ಭಾರತದ ವಿವಿಧ ನಗರಗಳಲ್ಲಿ ರಾಣಿಯ ಪಯಣ ಸಾಗಲಿದೆಯಂತೆ.

Kangana Ranaut: ಕಾಂಗ್ರೆಸ್‌ ವೋಟ್‌ ಚೋರಿ ಆರೋಪ; ಬ್ರೆಜಿಲ್‌ ಮಾಡೆಲ್‌ಗೆ ಸಂಸತ್ತಿನಲ್ಲೇ ಕ್ಷಮೆ ಕೇಳಿದ ಕಂಗನಾ

ಕ್ವೀನ್‌ ಚಿತ್ರದಲ್ಲಿದ್ದ ರಾಜ್‌ಕುಮಾರ್ ರಾವ್ ಮತ್ತು ಲಿಸಾ ಹೇಡನ್ ಈ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ನಿರ್ದೇಶಕ ವಿಕಾಸ್ ಬಹ್ಲ್ ಈ ಬಾರಿ ಹೊಸ ತಾರಾಗಣವನ್ನು ಆಯ್ಕೆ ಮಾಡುತ್ತಿದ್ದು, ಪೋಷಕ ಪಾತ್ರಗಳಿಗಾಗಿ ಹಲವಾರು ರಂಗಭೂಮಿ ಕಲಾವಿದರ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮೂರು ತಿಂಗಳ ಅವಧಿಯಲ್ಲಿ ಮುಗಿಸಲು ಯೋಜಿಸಲಾಗಿದೆ.

ಕಂಗನಾ ರಣಾವತ್ ಅವರು ಇತ್ತೀಚೆಗೆ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಆರ್. ಮಾಧವನ್ ಅವರೊಂದಿಗೆ ಒಂದು ಚಿತ್ರ ಹಾಗೂ 'ಭಾರತ್ ಭಾಗ್ಯ ವಿಧಾತ' ಚಿತ್ರಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.