ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ಹೊಸ ದಾಖಲೆ ಬರೆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಅತಿಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ

Nirmala Sitharaman: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. 2019ರಿಂದ 2024ರ ಮಧ್ಯಂತರ ಬಜೆಟ್ ಸೇರಿ ಈಗಾಗಲೇ 8 ಬಜೆಟ್ ಮಂಡಿಸಿರುವ ಅವರು, ಈ ಸಾಧನೆಯೊಂದಿಗೆ ಪಿ. ಚಿದಂಬರಂ ಅವರ ದಾಖಲೆಗೆ ಸಮಾನರಾಗಲಿದ್ದಾರೆ.

ನಿರ್ಮಲಾ ಸೀತಾರಾಮನ್ ಎಷ್ಟು ಬಜೆಟ್ ಮಂಡನೆ ಮಾಡಿದ್ದಾರೆ?

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ) -

Profile
Sushmitha Jain Feb 1, 2026 7:00 AM

ನವದೆಹಲಿ, ಫೆ. 1: ಇಂದು (ಫೆ. 1) ಕೇಂದ್ರ ಸರ್ಕಾರದ ಸತತ 9ನೇ ಬಜೆಟ್‌ (Union Budget 2026) ಅನ್ನು ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಜ್ಜಾಗಿದ್ದಾರೆ. ಈ ಮೂಲಕ ಅವರು ಮತ್ತೊಂದು ಐತಿಹಾಸಿಕ ಸಾಧನೆಗೆ ಇನ್ನೊಂದು ಹೆಜ್ಜೆ ಇಡಲಿದ್ದಾರೆ. 2019ರ ಜುಲೈನಲ್ಲಿ ದೇಶದ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿರ್ಮಲಾ ಸೀತಾರಾಮನ್, 2024ರ ಫೆಬ್ರವರಿಯ ಮಧ್ಯಂತರ ಬಜೆಟ್‌ ಸೇರಿ ಇದುವರೆಗೆ ಸತತ 8 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದೀಗ 9ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.

ಜಾಗತಿಕ ಆರ್ಥಿಕ ಅಸ್ಥಿರತೆ, ರಾಜಕೀಯ ಸವಾಲುಗಳ ನಡುವೆಯೇ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸುಧಾರಣಾ ಕ್ರಮಗಳನ್ನು ಒಳಗೊಂಡ ಬಜೆಟ್ ಇರಲಿದೆ ಎಂಬ ನಿರೀಕ್ಷೆ ಮೂಡಿದೆ. ಇದರೊಂದಿಗೆ, ಕೇಂದ್ರ ಬಜೆಟ್‌ಗಳನ್ನು ಅತಿಹೆಚ್ಚು ಬಾರಿ ಮಂಡಿಸಿದ ದಿಗ್ಗಜರ ಪಟ್ಟಿಗೆ ನಿರ್ಮಲಾ ಸೀತಾರಾಮನ್ ಸೇರಿಕೊಳ್ಳಲಿದ್ದಾರೆ.

ಅತಿಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಯಾರದು ಗೊತ್ತಾ?

ಕೇಂದ್ರ ಬಜೆಟ್‌ಗಳನ್ನು ಅತಿಹೆಚ್ಚು ಬಾರಿ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಅವರು ಒಟ್ಟು 10 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. 1959ರ ಫೆಬ್ರವರಿ 28ರಂದು ಮೊದಲ ಬಜೆಟ್ ಮಂಡಿಸಿದ ದೇಸಾಯಿ, 1960 ಮತ್ತು 1961ರಲ್ಲಿ ಪೂರ್ಣ ಬಜೆಟ್‌ಗಳನ್ನು ಮಂಡಿಸಿದರು. 1962ರಲ್ಲಿ ಮಧ್ಯಂತರ ಬಜೆಟ್‌ ನೀಡಿದ ಬಳಿಕ ಮತ್ತೆ ಎರಡು ಪೂರ್ಣ ಬಜೆಟ್‌ ಮಂಡಿಸಿದರು. 1967ರಲ್ಲಿ ಮತ್ತೊಮ್ಮೆ ಮಧ್ಯಂತರ ಬಜೆಟ್ ಮಂಡಿಸಿದ ಅವರು, 1967, 1968 ಮತ್ತು 1969ರಲ್ಲಿ ಮೂರು ಪೂರ್ಣ ಬಜೆಟ್‌ ಮಂಡಿಸಿದರು.

ಸತತ 9ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌; ಯಾವಾಗ ಮಂಡನೆ?

2ನೇ ಸ್ಥಾನದಲ್ಲಿರುವವರು ಇವರೇ!

ಒಟ್ಟು 9 ಬಾರಿ ಕೇಂದ್ರ ಬಜೆಟ್ ಮಂಡಿಸಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಎರಡನೇ ಸ್ಥಾನದಲ್ಲಿದ್ದಾರೆ. 1996ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ಮೊದಲ ಬಜೆಟ್ ಮಂಡಿಸಿದ ಅವರು, 1997ರಲ್ಲಿ ಮತ್ತೊಂದು ಬಜೆಟ್ ನೀಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ 2004ರಿಂದ 2008ರವರೆಗೆ ಸತತ ಐದು ಬಜೆಟ್‌ ಮಂಡಿಸಿದರು. ಬಳಿಕ 2013 ಮತ್ತು 2014ರಲ್ಲಿ ಇನ್ನೂ ಎರಡು ಬಜೆಟ್ ಮಂಡಿಸಿದರು. ಇದೀಗ ನಿರ್ಮಲಾ ಸೀತಾರಾಮನ್ ಕೂಡ ಸತತ 9ನೇ ಬಜೆಟ್ ಮಂಡಿಸುವ ಮೂಲಕ ಚಿದಂಬರಂ ಅವರ ಸಾಧನೆಯ ಮಟ್ಟಿಗೆ ತಲುಪಲಿದ್ದಾರೆ.

ನಿರ್ಮಲಾ ಸೀತಾರಾಮನ್‌ಗೆ ಎಷ್ಟನೇ ಸ್ಥಾನ?

ಈವರೆಗೆ 8 ಬಾರಿ ಕೇಂದ್ರ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಸದ್ಯ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಪ್ರಣಬ್ ಮುಖರ್ಜಿ1982ರಲ್ಲಿ ಮೊದಲ ಬಜೆಟ್ ಮತ್ತು 2012ರಲ್ಲಿ ಕೊನೆಯ ಬಜೆಟ್ ಮಂಡಿಸಿದ್ದರು.

ಅತಿಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ

ನಿರ್ಮಲಾ ಸೀತಾರಾಮನ್ ಅವರ ಮತ್ತೊಂದು ವಿಶೇಷ ಸಾಧನೆ ಎಂದರೆ, ಸತತವಾಗಿ ಅತಿಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. 2025ರ ಫೆಬ್ರವರಿ 1ರ ಮಧ್ಯಂತರ ಬಜೆಟ್ ಸೇರಿ 8 ಬಜೆಟ್‌ಗಳನ್ನು ಸತತವಾಗಿ ಮಂಡಿಸಿರುವ ಅವರು, 2024ರ ಜುಲೈ 23ರಂದು ಮೊರಾರ್ಜಿ ದೇಸಾಯಿ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದರು.