ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

union budget 2025: 120 ಹೊಸ ವಿಮಾನ ನಿಲ್ದಾಣ ಸ್ಥಾಪನೆ

ಹೊಸ ಉಡಾನ್ ಯೋಜನೆಯಲ್ಲಿ ಹೆಲಿಪ್ಯಾಡ್, ಚಿಕ್ಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಗಮನ ನೀಡಲಾಗುತ್ತದೆ. ಅದರಲ್ಲೂ ಇದು ಈಶಾನ್ಯ ರಾಜ್ಯಗಳು, ಬೆಟ್ಟಗುಡ್ಡ ಪ್ರದೇಶದ ವಿಮಾನ ನಿಲ್ದಾಣಗಳಿಗೆ ಸಹ ಬೆಂಬಲಿಸಲಿದೆ.

union budget 2025: 120 ಹೊಸ ವಿಮಾನ ನಿಲ್ದಾಣ ಸ್ಥಾಪನೆ

Udan

Profile Abhilash BC Feb 1, 2025 1:35 PM

ನವದೆಹಲಿ: ಈ ಬಾರಿಯ ಬಜೆಟ್‌ನಲ್ಲಿ ಉಡಾನ್‌(ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಗೆ(Udan) ಮತ್ತಷ್ಟು ಹೆಚ್ಚಿನ ಉತ್ತೇಜನವನ್ನು ನೀಡಿಲಾಗಿದೆ. 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಈ ವಿಮಾನ ನಿಲ್ದಾಣಗಳು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕೇಂದ್ರ ಸರ್ಕಾರ ಜನ ಸಾಮಾನ್ಯರು ಸಹ ವಿಮಾನದಲ್ಲಿ ಹಾರಾಡಲು ಅನುಕೂಲವಾಗಬೇಕು ಎಂದು ಅಕ್ಟೋಬರ್ 21, 2016ರಂದು ಉಡಾನ್ ಯೋಜನೆಯನ್ನು ಘೋಷಣೆ ಮಾಡಿತು. 'ಉಡೇ ದೇಶ್ ಕಾ ಆಮ್ ನಾಗರೀಕ್' ಎನ್ನುವ ಘೋಷಣೆಯೊಂದಿಗೆ ಈ ಯೋಜನೆ ಆರಂಭಿಸಿತ್ತು. ಎರಡು ಜಲ ವಿಮಾನ ನಿಲ್ದಾಣಗಳು ಮತ್ತು 13 ಹೆಲಿಪೋರ್ಟ್‌ಗಳು ಸೇರಿದಂತೆ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ 619 ಮಾರ್ಗಗಳನ್ನು ಇಲ್ಲಿಯವರೆಗೆ ಕಾರ್ಯಗತಗೊಳಿಸಲಾಗಿದೆ.

ಹೊಸ ಉಡಾನ್ ಯೋಜನೆಯಲ್ಲಿ ಹೆಲಿಪ್ಯಾಡ್, ಚಿಕ್ಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಗಮನ ನೀಡಲಾಗುತ್ತದೆ. ಅದರಲ್ಲೂ ಇದು ಈಶಾನ್ಯ ರಾಜ್ಯಗಳು, ಬೆಟ್ಟಗುಡ್ಡ ಪ್ರದೇಶದ ವಿಮಾನ ನಿಲ್ದಾಣಗಳಿಗೆ ಸಹ ಬೆಂಬಲಿಸಲಿದೆ.



ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ. ದೇಶದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ವಿಷೇಶ ಅನುದಾನ ನೀಡಲಾಗುವುದು. ಭಗವಾನ್ ಬುದ್ಧನ ಜೀವನ ಮತ್ತು ಅವರಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಸರ್ಕಾರವು ವಿಶೇಷ ಗಮನ ನೀಡುತ್ತದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹೋಂಸ್ಟೇಗಳಿಗೆ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ನೀಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ಇದನ್ನೂ ಓದಿ Union Budget 2025-26: 1 ಗಂಟೆ 14 ನಿಮಿಷ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌; ಇಲ್ಲಿದೆ ಅತೀ ದೀರ್ಘ, ಕಡಿಮೆ ಅವಧಿಯ ಬಜೆಟ್‌ ಭಾಷಣಗಳ ವಿವರ

ಬಜೆಟ್ ಭಾಷಣವು 1 ಗಂಟೆ 14 ನಿಮಿಷಗಳ ಕಾಲ ನಡೆಯಿತು. ಅತ್ಯಂತ ಚಿಕ್ಕ ಬಜೆಟ್‌ ಭಾಷಣಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ (Union Budget 2025-26). ಈ ಹಿಂದೆ ಅವರು ಸುದೀರ್ಘ ಬಜೆಟ್‌ ಭಾಷಣ ಮಾಡಿದ ದಾಖಲೆಯನ್ನೂ ಹೊಂದಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಇತಿಹಾಸದಲ್ಲಿಯೇ ಅತಿ ಉದ್ದದ ಬಜೆಟ್ ಭಾಷಣ ಮಾಡಿದ್ದರು. ಅಂದು ಅವರ ಬಜೆಟ್ ಭಾಷಣ 2 ಗಂಟೆ 40 ನಿಮಿಷಗಳ ಕಾಲ ನಡೆದಿತ್ತು.