ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Union Budget 2025-26: ಯಾವ ವಸ್ತು ಅಗ್ಗ? ಯಾವ ವಸ್ತು ದುಬಾರಿ? ಇಲ್ಲಿದೆ ವಿವರ

ಮೋದಿ 3.0 ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದು, ಮಧ್ಯಮ ವರ್ಗಕ್ಕೆ ಬಂಪರ್‌ ಕೊಡುಗೆ ಘೋಷಿಸಿದ್ದಾರೆ. ಅವರು ಬಜೆಟ್ ಭಾಷಣದಲ್ಲಿ ಕಾರು, ಮೊಬೈಲ್ ಮತ್ತು ಟಿವಿಯಂತಹ ಅನೇಕ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದ್ದಾರೆ. ಈ ಮೂಲಕ ಇವು ಅಗ್ಗವಾಗಲಿವೆ.

ಯಾವ ವಸ್ತು ಅಗ್ಗ? ಯಾವ ವಸ್ತು ದುಬಾರಿ?

ನಿರ್ಮಲಾ ಸೀತಾರಾಮನ್‌. -

Ramesh B Ramesh B Feb 1, 2025 12:48 PM

ಹೊಸದಿಲ್ಲಿ: ಮೋದಿ 3.0 ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದು, ಮಧ್ಯಮ ವರ್ಗಕ್ಕೆ ಬಂಪರ್‌ ಕೊಡುಗೆ ಘೋಷಿಸಿದ್ದಾರೆ. ಅವರು ಬಜೆಟ್ ಭಾಷಣದಲ್ಲಿ ಕಾರು, ಮೊಬೈಲ್ ಮತ್ತು ಟಿವಿಯಂತಹ ಅನೇಕ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ 36 ಜೀವರಕ್ಷಕ ಔಷಧಿಗಳ ಮೂಲ ಸುಂಕವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದಾರೆ. ಈ ಮೂಲಕ ಹಲವು ವಸ್ತುಗಳು ಅಗ್ಗವಾಗಲಿದೆ.

ಅಗ್ಗವಾಗುವ ವಸ್ತುಗಳು

ಟಿ.ವಿ, ಮೊಬೈಲ್, ವಿದ್ಯುತ್ ಕಾರು, ಇವಿ ಬ್ಯಾಟರಿ, ಕ್ಯಾನ್ಸರ್ ಔಷಧಗಳು, ಸ್ವದೇಶಿ ಬಟ್ಟೆ.

ದುಬಾರಿಯಾಗುವ ವಸ್ತುಗಳು

ಫ್ಯಾಟ್‌ ಪ್ಯಾನೆಲ್‌ ಡಿಸ್‌ಪ್ಲೇ, ನೇಯ್ಗೆಯ ಬಟ್ಟೆಗಳು, ಐಷರಾಮಿ ಸರಕುಗಳು, ಆಲ್ಕೋಹಾಲ್‌, ತಂಬಾಕು, ಟೆಲಿಕಾಂ ಉಪಕರಣ, ಸಿಗರೇಟ್‌, ಚಿನ್ನ, ಬೆಳ್ಳಿ ಆಮದು ಸುಂಕ ಏರಿಕೆ, ವಿಮಾನ ಇಂಧನ, ವಿಮಾನ ಟಿಕೆಟ್‌ ದರ.

'ಧನ್ ಧಾನ್ಯ ಕೃಷಿ' ಯೋಜನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 'ಧನ್ ಧಾನ್ಯ ಕೃಷಿ' ಯೋಜನೆಯನ್ನು ಘೋಷಿಸಿದ್ದು, ಇದು ದೇಶದ 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಯೋಜನೆ ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದರು.



ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ' ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವಾಗಿದ್ದು, ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

ಬಜೆಟ್‌ ಪ್ರತಿ ಓದಲು ಇಲ್ಲಿ ಕ್ಲಿಕ್‌ ಮಾಡಿ.