ನರ್ಸರಿ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಮನ ಬಂದಂತೆ ಹಲ್ಲೆ; ಮಹಿಳಾ ಸಿಬ್ಬಂದಿಯ ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆ
Nursery school assault case: ನರ್ಸರಿ ಶಾಲೆಯೊಂದರಲ್ಲಿ 4 ವರ್ಷದ ಬಾಲಕಿಯ ಮೇಲೆ ಸಿಬ್ಬಂದಿಯೊಬ್ಬಳು ಮನ ಬಂದಂತೆ ಥಳಿಸಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಹೈದರಾಬಾದ್, ಡಿ. 1: ನರ್ಸರಿ ಶಾಲೆಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿಯ ಮೇಲೆ ಮಹಿಳಾ ಸಿಬ್ಬಂದಿ ಹಲ್ಲೆ (Child abuse) ನಡೆಸಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ಬಾಲಕಿಯ ಪೋಷಕರು ತಮ್ಮ ಮಗು ಶಾಲಾ ಆರೈಕೆಯಲ್ಲಿದ್ದಾಗ ದೈಹಿಕವಾಗಿ ಹಾನಿಗೊಳಗಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೋಷಕರ ದೂರಿನ ಮೇರೆಗೆ ಪೊಲೀಸರು, ಶಾಲಾ ನರ್ಸರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಆತಂಕಕಾರಿ ವಿಡಿಯೊ ವೈರಲ್ ಆದ ನಂತರ ಈ ಬೆಳವಣಿಗೆ ಸಂಭವಿಸಿದೆ. ಅದರಲ್ಲಿ ಸಹಾಯಕಿ ಮಗುವನ್ನು ಆಚೆ ಕರೆದುಕೊಂಡು ಹೋಗಿ ಬಲವಂತವಾಗಿ ಹೊಡೆದು ನೆಲಕ್ಕೆ ತಳ್ಳುತ್ತಿರುವುದು ಕಂಡು ಬಂದಿದೆ.
6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಸಲ್ಮಾನ್ ಎಸ್ಕೇಪ್
ಮಗುವಿನ ತಲೆಯನ್ನು ಹಲವು ಬಾರಿ ನೆಲಕ್ಕೆ ಬಡಿದು, ತುಳಿದಿದ್ದಾಳೆ. ಈ ವಿಡಿಯೊ ಸ್ಥಳೀಯ ನಿವಾಸಿಗಳು, ಪೋಷಕರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ. ಈ ಹಲ್ಲೆ ಉದ್ದೇಶಪೂರ್ವಕವಾಗಿದ್ದು, ಆಕಸ್ಮಿಕವಾಗಿ ನಡೆದುದಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಸಹಾಯಕಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಗುವಿನ ಹೆತ್ತವರು ಒತ್ತಾಯಿಸಿದರು. ಅಲ್ಲದೆ, ಚಿಕ್ಕ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಾಲೆಯಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಳವಡಿಸಬೇಕೆಂದು ಪಟ್ಟು ಹಿಡಿದರು.
ಇಲ್ಲಿದೆ ವಿಡಿಯೊ
Shocking Assault on Nursery Girl by School Attendant
— BNN Channel (@Bavazir_network) December 1, 2025
A four-year-old nursery student at Poornima School in #ShapurNagar, under #Jeedimetla police station limits in #Hyderabad's #Medchal district, endured brutal assault by a school attendant named Lakshmi۔
The disturbing video,… pic.twitter.com/AH3myRL33Q
ಇಬ್ಬರು ಮಹಿಳೆಯರ ನಡುವೆ ನಡೆದ ಘರ್ಷಣೆಯೇ ಈ ಘಟನೆ ನಡೆಯಲು ಕಾರಣವಿರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ಲಕ್ಷ್ಮೀ ಅದೇ ಶಾಲೆಯ ಕಿರಿಯ ಸಿಬ್ಬಂದಿಯಾಗಿದ್ದ ನಾಲ್ಕು ವರ್ಷದ ಮಗುವಿನ ತಾಯಿಯ ಬಗ್ಗೆ ಅಸಮಾಧಾನಗೊಂಡಿದ್ದಳು. ಹೀಗಾಗಿ ಆಕೆಯ ಮೇಲಿನ ಸಿಟ್ಟಿಗೆ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜೀಡಿಮೆಟ್ಲಾ ಠಾಣೆಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ಭಾಗವಾಗಿ ವಿಡಿಯೊ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸೇರಿದಂತೆ ಎಲ್ಲ ಸಂಬಂಧಿತ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ತನಿಖೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಿಯಕರನ ಮೃತದೇಹವನ್ನು ವರಿಸಿದ ಯುವತಿ
ಮಹಾರಾಷ್ಟ್ರದ ನಾಂದೇಡ್‌ನ ಯುವತಿಯೊಬ್ಬಳು ತನ್ನ ಹೆತ್ತವರಿಗೆ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾಳೆ. ಯುವತಿಯು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಅವನು ಅಂತರ್ಜಾತಿಯವನು ಎನ್ನುವ ಕಾರಣಕ್ಕೆ ವಿವಾಹಕ್ಕೆ ಒಪ್ಪದ ಯುವತಿಯ ಪೋಷಕರು ಅವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದರಿಂದ ನೊಂದ ಯುವತಿ ಪ್ರಿಯಕರನ ಮೃತದೇಹದ ಜತೆಗೆ ವಿವಾಹವಾಗಿದ್ದಾಳೆ.
ನಂತರ ತನ್ನ ಹೆತ್ತವರಿಗೆ ಮರಣ ದಂಡನೆ ವಿಧಿಸಬೇಕೆಂದು ಯುವತಿ ಒತ್ತಾಯಿಸಿದ್ದಾಳೆ. ಈ ಘಟನೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತ ಮತ್ತು ಆರೋಪಿಗಳು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.