ಶಾಲೆಯಲ್ಲಿ 5 ವರ್ಷದ ಬಾಲಕನ ಭೀಕರ ಹತ್ಯೆ; ಮಗುವಿನ ಮೇಲೆ ನಡೆದಿದ್ಯಾ ಲೈಂಗಿಕ ದೌರ್ಜನ್ಯ? ಪ್ರಾಂಶುಪಾಲ ಅರೆಸ್ಟ್
Crime News: ಬಿಹಾರದ ರಾಜಧಾನಿ ಪಟನಾದಿಂದ ಸುಮಾರು 50 ಕಿ. ಮೀ ದೂರದಲ್ಲಿರುವ ಜೆಹಾನಾಬಾದ್‌ನಲ್ಲಿರುವ ಗುರುಕುಲಕ್ಕೆ 5 ವರ್ಷದ ಬಾಲಕನನ್ನು ಆತನ ಕುಟುಂಬವು ಅಧ್ಯಯನಕ್ಕೆ ಕಳುಹಿಸಿತ್ತು. ಇದೀಗ ಆ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಗುರುಕುಲ ಹಾಸ್ಟೆಲ್ ಮತ್ತು ಶಾಲೆಯ ಪ್ರಾಂಶುಪಾಲ ಮತ್ತು ನಿರ್ದೇಶಕ ತರುಣ್ ಕುಮಾರ್ ಬಂಧನ -
ಪಟನಾ, ಏ.8: ಏಪ್ರಿಲ್ 1 ರಂದು, ಕುಟುಂಬವೊಂದು ತನ್ನ ಐದು ವರ್ಷದ ಮಗನನ್ನು ಬಿಹಾರದ (Bihar) ಶಾಲಾ ಹಾಸ್ಟೆಲ್‌ನಲ್ಲಿ ಅಧ್ಯಯನಕ್ಕಾಗಿ ಕಳುಹಿಸಿದ್ದಾರೆ. ಆದರೆ, ಐದು ದಿನಗಳ ನಂತರ ಬಿರುಗಾಳಿಯಂತೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಏಪ್ರಿಲ್ 6 ರಂದು, ಮಗು ಮೃತಪಟ್ಟಿದೆ ಎಂಬ ಸುದ್ದಿ ಬಂತು. ತನ್ನ ಮಗುವಿಗೆ ಏನಾಯಿತು ಎಂದು ತಂದೆ-ತಾಯಿ ದಿಗ್ಭ್ರಮೆಗೊಂಡಿದ್ದಾರೆ. ರಾಜ್ಯ ರಾಜಧಾನಿ ಪಟನಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಜೆಹಾನಾಬಾದ್‌ನಲ್ಲಿರುವ ಗುರುಕುಲಕ್ಕೆ ಬಾಲಕನನ್ನು ಅಧ್ಯಯನಕ್ಕೆ ಕಳುಹಿಸಲಾಗಿತ್ತು. ಇದೀಗ ಆ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ (Crime News).
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ದೇಹದ ಮೇಲೆ ಹರಿತವಾದ ವಸ್ತುಗಳಿಂದ ಹಲ್ಲೆ ನಡೆಸಲಾಗಿದ್ದು, ದೇಹದಾದ್ಯಂತ ಆಳವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಗುವಿನ ತಂದೆ ಅಜಯ್ ಕುಮಾರ್ ಶರ್ಮಾ ಸಲ್ಲಿಸಿದ ಲಿಖಿತ ದೂರಿನ ಪ್ರಕಾರ, ಏಪ್ರಿಲ್ 6 ರಂದು ಬೆಳಿಗ್ಗೆ 5:20 ರ ಸುಮಾರಿಗೆ, ಗುರುಕುಲ ಹಾಸ್ಟೆಲ್ ಮತ್ತು ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ತರುಣ್ ಕುಮಾರ್ ಅವರಿಂದ ಕರೆ ಬಂದಿದೆ. ಈ ವೇಳೆ ತಮ್ಮ ಮಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಿಡ್ನ್ಯಾಪ್ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ
ಅಜಯ್ ಅವರ ಮಗ ಆಶು ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರಿಗೆ ತಿಳಿಸಲಾಯಿತು. 15 ನಿಮಿಷಗಳಲ್ಲಿ, ಅಜಯ್ ಆಸ್ಪತ್ರೆಗೆ ಆಗಮಿಸಿದಾಗ, ಅವರ ಮಗ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದೇಹದಾದ್ಯಂತ ಗಾಯದ ಗುರುತುಗಳೊಂದಿಗೆ ಮಲಗಿದ್ದನ್ನು ನೋಡಿ ಆಘಾತಗೊಂಡರು. ನನ್ನ ಮಗುವಿನ ಗಂಟಲು ಸೀಳಲಾಗಿದೆ. ಜನನಾಂಗಗಳು ಕತ್ತರಿಸಲ್ಪಟ್ಟಿವೆ ಮತ್ತು ಹೊಟ್ಟೆಯ ಎಡಭಾಗ, ಕೆನ್ನೆ ಮತ್ತು ಹುಬ್ಬಿನ ಕೆಳಗೆ ಗಾಯಗಳಾಗಿವೆ ಎಂದು ಮೃತ ಬಾಲಕನ ತಂದೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ, ಬಾಲಕ ಆಶುವನ್ನು ಪಟನಾದ ಮಲ್ಟಿ-ಸ್ಪೆಷಾಲಿಟಿಗೆ ಸ್ಥಳಾಂತರಿಸಲು ನಿರ್ಧರಿಸಿದರು. ಅಲ್ಲಿ ಬಾಲಕ ಮೃತಪಟ್ಟಿದ್ದಾಗಿ ಘೋಷಿಸಲಾಯಿತು. ವೈದ್ಯರ ಪ್ರಕಾರ, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಚೂಪಾದ ವಸ್ತುಗಳಿಂದ ಪದೇ ಪದೇ ಇರಿದಿದ್ದಾರೆ. ಕುಟುಂಬವು ಸಾಮೂಹಿಕ ಅತ್ಯಾಚಾರದ ಆರೋಪವನ್ನೂ ಮಾಡಿದೆ.
ಮೃತ ಬಾಲಕ ಆಶುವಿನ ಅಣ್ಣ ರಿಶು ಕೂಡ ಅದೇ ಶಾಲೆ ಮತ್ತು ಹಾಸ್ಟೆಲ್‌ನಲ್ಲಿ ಓದುತ್ತಿದ್ದ. ಆದರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದ. ಘಟನೆಯ ರಾತ್ರಿ ಆಶುವನ್ನು ಒಟ್ಟಿಗೆ ಮಲಗಲು ತನ್ನ ಕೋಣೆಗೆ ಕರೆದೊಯ್ದಿದ್ದನೆಂದು ಶಾಲಾ ಪ್ರಾಂಶುಪಾಲ ಕುಮಾರ್ ಮೃತ ಬಾಲಕನ ಕುಟುಂಬಕ್ಕೆ ತಿಳಿಸಿದನು.
ಅಜಯ್ ತನ್ನ ಮಗನ ಶವದೊಂದಿಗೆ ಹಾಸ್ಟೆಲ್‌ಗೆ ಹಿಂತಿರುಗಿದನು. ಅಲ್ಲಿ ಕುಟುಂಬವು ಗ್ರಾಮಸ್ಥರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿತು. ಪಟನಾ-ಗಯಾ ರಾಷ್ಟ್ರೀಯ ಹೆದ್ದಾರಿ -22 ಅನ್ನು ಸಂಪೂರ್ಣವಾಗಿ ತಡೆದು, ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿತು. ಪರಿಣಾಮ ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್‌ಗಳವರೆಗೆ ವಾಹನಗಳ ಬೃಹತ್ ಸಾಲು ಕಂಡುಬಂತು.
Dharwad News: ಬೇಕಂತಲೇ ಯುವತಿಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ; ಧಾರವಾಡದಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಅರೆಸ್ಟ್
ತಮ್ಮ ಮಗನ ಸಾವಿನಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ಕುಟುಂಬ ಆರೋಪಿಸಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಶಾಲಾ ಪ್ರಾಂಶುಪಾಲ ತರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಒಬ್ಬ ಶಿಕ್ಷಕಿ ಮತ್ತು ಇಬ್ಬರು ಮಹಿಳಾ ಸಿಬ್ಬಂದಿಯನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ. ಪೊಲೀಸರು ಶಾಲೆಯ ಭದ್ರತಾ ಸಿಬ್ಬಂದಿಯನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಅಧಿಕಾರದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣವೂ ದಾಖಲಾಗಿದೆ. ಸದ್ಯಕ್ಕೆ ಶಾಲೆಗೆ ಬೀಗ ಹಾಕಲಾಗಿದೆ.