ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕಾರ್ಪೊರೇಟ್ ಕೆಲಸವನ್ನೇ ತೊರೆದ ವ್ಯಕ್ತಿ; ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ!
Viral News: ಹೈದರಾಬಾದ್ ವಿಯಾಪುರದ ನಿವಾಸಿಯೊಬ್ಬರು ತನ್ನ ಕಾರ್ಪೊರೇಟ್ ಕೆಲಸ ಬಿಟ್ಟು ಬಡ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದಾರೆ. ಕೈ ತುಂಬಾ ಬರುತ್ತಿದ್ದ ಸಂಬಳ ಬಿಟ್ಟು ಇದೀಗ ಇದೀಗ ಸಾವಿ ರಾರು ಬಡ ಮಕ್ಕಳ ಜೀವನವನ್ನು ಬೆಳಗಿಸುತ್ತಿದ್ದಾರೆ. ಸದ್ಯ ಇವರ ಮಾನವೀಯ ಕೆಲಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ...
ಕಾರ್ಪೊರೇಟ್ ಕೆಲಸ ತ್ಯಜಿಸಿ ಬಡ ಮಕ್ಕಳಿಗೆ ನೆರವಾದ ಹೈದರಾಬಾದ್ ವ್ಯಕ್ತಿ -
ಹೈದರಾಬಾದ್,ಮೇ 25: ಸ್ವಾರ್ಥ ಬದುಕಿನ ನಡುವೆ ಮಾನವೀಯತೆ ಮೆರೆಯುವ ಅನೇಕ ಘಟನೆಗಳನ್ನು ನೀವು ನೋಡಿರಬಹುದು. ಬೀದಿನಾಯಿಗಳ ಲಾಲನೆ, ಅನಾಥಶ್ರಮಗಳ ಅಭಿವೃದ್ಧಿ ಹೀಗೆ ಸಹಾಯ ಹಸ್ತ ಮೆರೆಯುವ ಅನೇಕ ಹೃದಯವಂತರು ಇದ್ದಾರೆ. ಈ ನಡುವೆ ಇದೀಗ ಹೈದರಾಬಾದ್ (Hyderabad) ವಿಯಾಪುರದ ನಿವಾಸಿಯೊಬ್ಬರು ತನ್ನ ಕಾರ್ಪೊರೇಟ್ ಕೆಲಸ ಬಿಟ್ಟು ಬಡ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದಾರೆ. ಕೈ ತುಂಬಾ ಬರುತ್ತಿದ್ದ ಸಂಬಳ ಬಿಟ್ಟು ಇದೀಗ ಇದೀಗ ಸಾವಿರಾರು ಬಡ ಮಕ್ಕಳ ಜೀವನವನ್ನು ಬೆಳಗಿಸುತ್ತಿದ್ದಾರೆ. ಸದ್ಯ ಇವರ ಮಾನವೀಯ ಕೆಲಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಹೈದರಾಬಾದಿನ ವ್ಯಕ್ತಿಯೊಬ್ಬರು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ತನ್ನ ಕಾರ್ಪೊರೇಟ್ ಕೆಲಸವನ್ನು ತೊರೆದಿದ್ದಾರೆ. 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಪ್ರಯೋಜನ ಪಡೆದಿದ್ದು ಅನೇಕರು ಈಗ ಎಂಜಿನಿಯರ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು ಅದ್ಭುತ ಸಂಬಳವನ್ನು ಗಳಿಸುತ್ತಿದ್ದಾರೆ.
ಹೌದು ಹೈದರಾಬಾದ್ ನ ಮಿಯಾಪುರದ ನಿವಾಸಿಯಾದ ಪೋತುಕುಚಿ ಶ್ರೀನಿವಾಸ್ ಜರ್ಮನಿಯ ಪ್ರತಿಷ್ಠಿತ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಜೀವನದಲ್ಲಿ ನಡೆದ ಘಟನೆಯೂ ಇಡೀ ದಿಕ್ಕನ್ನೆ ಬದಲಾಯಿಸಿದೆ.
ಶ್ರೀನಿವಾಸ್ ಅವರು ಕಛೇರಿ ಸಮಯದ ನಂತರ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ವಯಂ ಇಚ್ಚೆಯಿಂದ ಪಾಠ ಹೇಳಿ ಕೊಡುತ್ತಿದ್ದರು. ಒಂದು ದಿನ ವಿದ್ಯಾರ್ಥಿಯೊಬ್ಬ ತಾನು ಚಹಾದ ಅಂಗಡಿಯಲ್ಲಿ ಕೆಲಸ ಮಾಡುವುದರಿಂದ ಮತ್ತು ಮನೆಯಲ್ಲಿ ವಿದ್ಯುತ್ ಇಲ್ಲದೆ ಇರುವುದರಿಂದ ಹೋಮ್ ವರ್ಕ್ ಮಾಡಿಲ್ಲ ಎಂದು ಹೇಳುತ್ತಾನೆ. ಈ ಮಾತು ಶ್ರೀನಿವಾಸ್ ಅವರಿಗೆ ಆಳವಾಗಿ ಪ್ರಭಾವ ಬೀರಿತ್ತು
Viral Video: ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್
ಹೀಗಾಗಿ ತನ್ನ ಕಂಪನಿಯ ಜಾಬ್ ತೊರೆದು ಬಡ ಮಕ್ಕಳಿಗೆ ನೆರವು ನೀಡಲು ಮುಂದಾದರು. 2003 ರಲ್ಲಿ, ಶ್ರೀನಿವಾಸ್ ತಮ್ಮ ತಂದೆಯ ಹೆಸರಿನ ಪೋತುಕುಚಿ ಸೋಮಸುಂದರ ಸಮಾಜ ಕಲ್ಯಾಣ ಮತ್ತು ದತ್ತಿ ಟ್ರಸ್ಟ್ ಅನ್ನು ಸ್ಥಾಪಿಸಿದರು. ಅವರು ತಮ್ಮ ಮನೆಯಿಂದಲೇ ಮಕ್ಕಳಿಗೆ ಉಚಿತವಾಗಿ ಓದಿಸಲು ಪ್ರಾರಂಭಿ ಸಿದರು. ಈ ಟ್ರಸ್ಟ್ ಇದುವರೆಗೆ 1,500 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಶಾಲಾ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣವನ್ನು ನೀಡಿದೆ
ಇದು ಮಕ್ಕಳ ಬೋಧನೆ, ಪುಸ್ತಕಗಳು, ಸಮವಸ್ತ್ರಗಳು, ಸಾರಿಗೆ ವೆಚ್ಚ ತರಬೇತಿ ತರಗತಿಗಳಿಗೆ ಹಣವನ್ನು ನೀಡುತ್ತಿದೆ. ಮತ್ತು ಸಂಜೆ ಅವಧಿಗಳಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಇಲ್ಲಿ ಕಲಿತ ಅಕುಲಾ ಕಲ್ಯಾಣಿ ಎಂಬ ವಾಚ್‌ಮನ್ ಮಗಳು ಇಂದು ಖ್ಯಾತ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಇವರಂತೆ ನೂರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕಲಿತು ಹೆಸರು ಪಡೆದ ಮಕ್ಕಳು ಈಗ ಮತ್ತೆ ಅದೇ ಟ್ರಸ್ಟ್‌ಗೆ ಸಹಾಯ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರ ಸಹಾಯ ಮಾನೋಭಾವಕ್ಕೆ ಹೆಗಲು ನೀಡುತ್ತಿದ್ದಾರೆ. ಸದ್ಯ ವಾಚ್‌ಮನ್ ಗಳ ಮಕ್ಕಳು, ಮನೆಗೆಲಸದವರ ಮಕ್ಕಳು ಹೀಗೆ ಬಡತನನಲ್ಲಿ ಬದುಕುತ್ತಿದ್ದ ಮಕ್ಕಳು ಇಲ್ಲಿ ನೆರವು ಪಡೆಯುತ್ತಿದ್ದಾರೆ.