Acid Attack: ವ್ಯಾಲೆಂಟೈನ್ಸ್ ಡೇ ದಿನವೇ ಯುವತಿ ಮೇಲೆ ಆಸಿಡ್ ದಾಳಿ ಮಾಡಿದ ಸೈಕೋ ಪ್ರೇಮಿ!
ಹೈದರಬಾದ್‌ನ ಯುವಕನೊಬ್ಬ ಹುಡುಗಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಸಿಡ್ ದಾಳಿ ಮಾಡಿದ್ದಾನೆ. ಪ್ರೇಮಿಗಳ ದಿನವೇ ಈ ಆತಂಕಕಾರಿ ಘಟನೆ ನಡೆದಿದ್ದು, ಯುವತಿಯ ಮುಖದಲ್ಲಿ ಗಂಭೀರ ಗಾಯಗಳಾಗಿದ್ದು,ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಹೈದರಾಬಾದ್: ಜಗತ್ತಿನ ಹಲವು ಪ್ರೇಮಿಗಳು ಇಂದು ವ್ಯಾಲೆಂಟೈನ್ಸ್ ಡೇ (Valentineʼs Day) ಸಂಭ್ರಮದಲ್ಲಿದ್ದಾರೆ. ಹುಡುಗ ಹುಡುಗಿಯರು ಪರಸ್ಪರ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಿದ್ದಾರೆ. ಕೈ ಕೈ ಹಿಡಿದು ಹೊಸ ಗಮ್ಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾ,ಪ್ರವಾಸ ಹೀಗೆ ತಮ್ಮದೇ ಗುಂಗಿನಲ್ಲಿ ಮುಳುಗಿದ್ದಾರೆ. ನೂರು ಸಂಭ್ರಮ ಮತ್ತು ಸಡಗರದ ನಡುವೆಯೇ ಪ್ರೇಮಿಗಳೆಲ್ಲರೂ ಬೆಚ್ಚಿ ಬೀಳುವ ಆತಂಕಕಾರಿ ಘಟನೆಯೊಂದು ನಡೆದಿದೆ. ಹೈದರಾಬಾದ್‌ನಲ್ಲಿ(Acid Attack) ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಹುಡುಗಿ ತನ್ನನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಮೇಲೆ ಆಸಿಡ್ ದಾಳಿ(Acid Attack) ಮಾಡಿ ಚಾಕುವಿನಿಂದ ಇರಿದಿದ್ದಾನೆ. ಯುವತಿಯ ಮುಖದಲ್ಲಿ ಗಂಭೀರ ಗಾಯಗಳಾಗಿದ್ದು, ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ತನ್ನ ಪ್ರೀತಿಯನ್ನು ಯುವತಿ ನಿರಾಕರಿಸಿದ ಕಾರಣ ಆಕ್ರೋಶಗೊಂಡ ಯುವಕನೊಬ್ಬ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಗುರಂಕೊಂಡ ಎಂಎಂ. ಪ್ಯಾರಂಪಳ್ಳಿಯ 23 ವರ್ಷದ ಯುವತಿಯೊಬ್ಬಳು ಏಪ್ರಿಲ್ 29 ರಂದು ಶ್ರೀಕಾಂತ್ ಎಂಬ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ. ಇದನ್ನು ತಿಳಿದ ಅಮ್ಮಚೆರುವು ಮಿತ್ತದ ಗಣೇಶ್ ಆಕೆಯನ್ನು ಪ್ರೀತಿಸಿ ತನ್ನನ್ನೇ ವಿವಾಹವಾಗುವಂತೆ ಕಿರುಕುಳ ನೀಡಿದ್ದಾನೆ. ಹುಡುಗಿ ಅವನಿಗೆ ಇರುವ ವಿಷಯ ಹೇಳಿ ಅವನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಅಷ್ಟಕ್ಕೇ ಆತ ಆಕೆಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಮುಖದ ಮೇಲೆ ಆಸಿಡ್ ಸುರಿದು ರಾಕ್ಷಸಿ ಪ್ರವೃತ್ತಿ ಮೆರೆದಿದ್ದಾನೆ. ಸದ್ಯ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಸುದ್ದಿಯನ್ನೂ ಓದಿ:Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ
ಗರ್ಭಿಣಿಯಾದ ಪ್ರೇಯಸಿಯನ್ನು ಸುಟ್ಟು ಹಾಕಿದ ನೀಚ ಪ್ರೇಮಿ
ವ್ಯಕ್ತಿಯೊಬ್ಬ ಗರ್ಭಿಣಿಯಾಗಿದ್ದ ತನ್ನ ಗೆಳತಿಯ ಕತ್ತು ಹಿಸುಕಿ ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಗರ್ಭಿಣಿ ಗಳತಿಯನ್ನು ಅಮಾನವೀಯವಾಗಿ ಹತ್ಯೆಗೈದ ವ್ಯಕ್ತಿಯನ್ನು ಶಕೀಲ್ ಮುಕ್ತವಾ ಎಂದು ಗುರುತಿಸಲಾಗಿದೆ. 18 ವರ್ಷದ ಯುವತಿಯೊಂದಿಗೆ ಸಂಬಂಧವಿಟ್ಟುಕೊಂಡಿದ್ದನು. ಕೆಲ ದಿನಗಳ ಹಿಂದೆ ಈತನ ಗೆಳತಿ ಗರ್ಭಿಣಿಯಾಗಿದ್ದು, ತನ್ನೊಂದಿಗೆ ಜೀವನ ನಡೆಸುವಂತೆ ಹಠ ಹಿಡಿದಿದ್ದಳು. ಹೀಗಾಗಿ ಹೇಗಾದರೂ ಮಾಡಿ ಆಕೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ ವಾಷಿ ಶಕೀಲ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೆಳತಿಯ ಮನವೊಲಿಸಿ ಹತ್ತಿರದ ಹೊಲಕ್ಕೆ ಕರೆದೊಯ್ದಿದ್ದ ಆತ ಆಕೆಯ ಕತ್ತು ಹಿಸುಕಿ ಕೊಂದು ನಂತರ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಹೊಲದಲ್ಲಿ ಅರೆ ಬೆಂದಿದ್ದ ಬೆತ್ತಲೆ ಶವ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ, ಕಲವೇ ಗಂಟೆಗಳಲ್ಲಿ ಆರೋಪಿ ಶಶೀಲ್‌ವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.