ವಿಶ್ವದ ಅತ್ಯಂತ ಶೀತದ ವಾತಾವರಣ ಇರುವ ಸ್ಥಳ ಯಾವುದು ಗೊತ್ತಾ? ಈ ವಿಡಿಯೋ ನೋಡಿ
Viral Video: ರಷ್ಯಾದ ನಗರವೊಂದರಲ್ಲಿ ಚಳಿಯಲ್ಲಿ ನಿತ್ಯ ಜೀವನ ಕಷ್ಟಕರವಾಗಿದ್ದು ಈ ಬಗ್ಗೆ ಇತ್ತೀಚೆಗಷ್ಟೇ ವಿಡಿಯೋ ಒಂದು ವೈರಲ್ (Viral Video) ಆಗಿದೆ. ಈ ಪ್ರದೇಶವನ್ನು ಭೂಮಿಯ ಮೇಲಿನ ಅತ್ಯಂತ ಶೀತಲ ವಾತಾವರಣ ಇರುವ ಪ್ರದೇಶ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಜನರ ಪರಿಸ್ಥಿತಿ ಯನ್ನು ಚಳಿಗಾಲದಲ್ಲಿ ನಮಗೆ ಊಹಿಸಲು ಸಾಧ್ಯವಿಲ್ಲದ ಮಟ್ಟಿಗೆ ಭೀಕರವಾಗಿರುತ್ತದೆ ಎನ್ನಲು ಈ ವಿಡಿಯೋ ಸಾಕ್ಷಿಯಾಗಿದೆ.
ಸಂಗ್ರಹ ಚಿತ್ರ -
ರಷ್ಯಾ, ಡಿ. 21: ಚಳಿಗಾಲ ಈಗಾಗಲೇ ಆರಂಭವಾಗಿದ್ದು ನಗರ ಮತ್ತು ಹಳ್ಳಿ ಭಾಗದಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ಇದೆ. ಬೆಳಗ್ಗೆ ಬೇಗ ಎದ್ದು ಆಫೀಸ್ ಹೋಗಬೇಕು, ಶಾಲೆ, ಕಾಲೇಜಿಗೆ ಹೋಗಬೇಕು ಎನ್ನುವವರಿಗೆ ಚಳಿಯಿಂದ ಏಳಲು ಕೂಡ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು, ಲಕ್ನೋ , ದೆಹಲಿ ಸೇರಿದಂತೆ ಬಹುತೇಕ ಭಾಗಗಳು ಮುಂಜಾನೆ ಮತ್ತು ಸಂಜೆ ಹೊತ್ತಿಗೆ ಮಂಜಿನಿಂದ ಆವೃತ್ತವಾಗಿದ್ದು ನಿತ್ಯ ಓಡಾಡಲು ಕೂಡ ಕಷ್ಟವಾಗು ವಂತಿದೆ. ನಮ್ಮ ಪರಿಸ್ಥಿತಿಯೇ ಹೀಗಿರುವಾಗ ಹಿಮಾಲಯ, ಲಡಾಖ್ ಇತರ ಭಾಗದಲ್ಲಿ ಇರುವವರು ಹೇಗಾಗಿರಬೇಡ ಎಂದು ಅನಿಸುತ್ತದೆ. ಅಂತೆಯೇ ರಷ್ಯಾದ ನಗರವೊಂದರಲ್ಲಿ ಚಳಿಯಲ್ಲಿ ನಿತ್ಯ ಜೀವನ ಕಷ್ಟಕರವಾಗಿದ್ದು ಈ ಬಗ್ಗೆ ಇತ್ತೀಚೆಗಷ್ಟೇ ವಿಡಿಯೋ ಒಂದು ವೈರಲ್ (Viral Video) ಆಗಿದೆ. ಈ ಪ್ರದೇಶವನ್ನು ಭೂಮಿಯ ಮೇಲಿನ ಅತ್ಯಂತ ಶೀತಲ ವಾತಾವರಣ ಇರುವ ಪ್ರದೇಶ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಜನರ ಪರಿಸ್ಥಿತಿಯನ್ನು ಚಳಿಗಾಲದಲ್ಲಿ ನಮಗೆ ಊಹಿಸಲು ಸಾಧ್ಯವಿಲ್ಲದ ಮಟ್ಟಿಗೆ ಭೀಕರವಾಗಿರುತ್ತದೆ ಎನ್ನಲು ಈ ವಿಡಿಯೋ ಸಾಕ್ಷಿಯಾಗಿದೆ.
ಚುಮು ಚುಮು ಚಳಿಯನ್ನು ಇಷ್ಟ ಪಡುವ ಬಹುತೇಕರು ಡಿಸೆಂಬರ್ ಜನವರಿಯಲ್ಲಿ ಮನಾಲಿ, ಲಡಾಕ್ ಎಂದೆಲ್ಲ ಪ್ರವಾಸಕ್ಕೆ ಹೋಗುವುದಿದೆ. ಆದರೆ ರಷ್ಯಾದ ಈ ಸ್ಥಳಕ್ಕೆ ಹಿಮ ನೋಡಲು ಹೋದರೆ ಅಲ್ಲಿನ ಜನರ ನಿತ್ಯ ಪಾಡನ್ನು ಕೂಡ ನೀವು ಅರ್ಥೈಸಿಕೊಳ್ಳಬಹುದಾಗಿದೆ. ಜಗತ್ತಿನ ಅತ್ಯಂತ ಶೀತಲ ನಗರ ಎಂದು ಖ್ಯಾತಿ ಪಡೆದ ರಷ್ಯಾದ ಯಾಕುಟ್ಸ್ಕ್ ನಗರದ ತಾಪಮಾನವು ನಮ್ಮ ದೇಹದ ತಾಪಮಾನಕ್ಕೆ ಸವಾಲು ಹಾಕುವಂತಿದೆ. ಸೈಬೀರಿಯಾದ ಹೃದಯಭಾಗದಲ್ಲಿ ಇರುವ ಈ ನಗರದಲ್ಲಿ ಸುಮಾರು 3,55,000 ಜನಸಂಖ್ಯೆ ಇದೆ. ವರ್ಷದ ಬಹುಪಾಲು ಇಲ್ಲಿ ಚಳಿಗಾಲದ ಪರಿಸ್ಥಿತಿ ಇರಲಿದೆ.
ವಿಡಿಯೋ ವೀಕ್ಷಿಸಿ:
This is the coldest place on earth.
— Living Tricks (@LivingTricks_) December 19, 2025
Even boiling water freezes here ❄️
In Yakutsk, Russia, the air gets colder than a freezer. pic.twitter.com/Rovdwh9SNU
ಇತ್ತೀಚೆಗಷ್ಟೇ ಯಾಕುಟ್ಸ್ಕ್‌ನ ದಿನನಿತ್ಯದ ಜೀವನಶೈಲಿಯನ್ನು ಜಗತ್ತಿನ ಮುಂದೆ ತೋರಿಸುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಈ ಕ್ಲಿಪ್ ನಲ್ಲಿ ವಿಶ್ವದ ಅತ್ಯಂತ ಶೀತಲ ನಗರದ ಸಂಪೂರ್ಣ ನೋಟವನ್ನು ನೋಡಬಹುದಾಗಿದೆ. ವರದಿಯೊಂದರ ಪ್ರಕಾರ ಜನವರಿಯಲ್ಲಿ ಸರಾಸರಿ ಕಡಿಮೆ ತಾಪಮಾನ -42°C ಆಗಿದ್ದು ಈ ನಗರದಲ್ಲಿ ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಕಡಿಮೆ ಕಾಲ ಸೂರ್ಯನ ಬೆಳಕಿನ ಪ್ರಕಾಶ ಇರುತ್ತದೆ ಎಂದು ತಿಳಿದುಬಂದಿದೆ. ಫೆಬ್ರವರಿ 5, 1891 ರಂದು ಯಾಕುಟ್ಸ್ಕ್‌ನಲ್ಲಿ -64.4°C ನಷ್ಟು ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದ್ದು ಇಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂಬುದು ನಮ್ಮ ಊಹೆಗೂ ನಿಲುಕದ ವಿಚಾರ ಎಂದೆ ಹೇಳಬಹುದು.
ಯಾಕುಟ್ಸ್ಕ್ ನಗರದ ವಿಡಿಯೋವನ್ನು ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು 2.2 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನುಪಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಚಳಿಗಾಲ ದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ತಿಳಿಸಲಾಗಿದೆ. ಪ್ರದೇಶದಲ್ಲಿ ಕುದಿಯುವ ನೀರು ಸಹ ಸೆಕೆಂಡುಗಳಲ್ಲಿ ಹೇಗೆ ಮಂಜುಗಡ್ಡೆಯಾಗಿ ಪರಿವರ್ತನೆ ಆಗುತ್ತದೆ. ಬಟ್ಟೆ ಒಣಹಾಕಿದ ಸೆಕೆಂಡುಗಳಲ್ಲಿ ರಟ್ಟಿನಂತಾಗುತ್ತದೆ ಎಂಬುದನ್ನು ತಿಳಿಸಲಾಗಿದೆ.
ಕಾರುಗಳ ಮೇಲೆ ಮಂಜು ಮುಚ್ಚುವ ಕಾರಣ ಎಂಜಿನ್ ಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಇಲ್ಲಿನ ಜನರು ಸದಾ ಇಂಜಿನ್ ಅನ್ನು ಆನ್ ನಲ್ಲೇ ಇಡುತ್ತಾರೆ. ಇಲ್ಲಿ ಫ್ರಿಜ್ ಅವಶ್ಯಕತೆಯೇ ಇಲ್ಲ. ತಾಜಾ ಉತ್ಪನ್ನಗಳು ವಿರಳವಾಗಿರುವುದರಿಂದ ಯಾಕುಟ್ಸ್ಕ್ ಪ್ರದೇಶ ಸಸ್ಯಾಹಾರಿಗಳಿಗೆ ಬದುಕಲು ಸೂಕ್ತ ಸ್ಥಳವಲ್ಲವಾಗಿದೆ. ಇಲ್ಲಿನ ಜನರು ಮಾಂಸದ ಆಹಾರವನ್ನೇ ಅಧಿಕ ಸೇವಿಸುತ್ತಾರೆ. ಅಧಿಕ ಶೀತದ ವಾತಾವರಣದ ಕಾರಣಕ್ಕೆ ಮೀನು, ಮಾಂಸಗಳಂತೂ ಕಲ್ಲಿನಂತಾಗಲಿದೆ. ಹಣ್ಣನ್ನು ಕಟ್ ಮಾಡಲು ಕೂಡ ಸುತ್ತಿಗೆ ಬೇಕು. ಇಲ್ಲಿ ವಾಸಿಸಲು ಒಬ್ಬ ವ್ಯಕ್ತಿಯು ಸರಾಸರಿ ಒಂದು ದಿನಕ್ಕೆ 22 ಪೌಂಡ್‌ಗಳಷ್ಟು ಬಟ್ಟೆಗಳನ್ನು ಧರಿಸಬೇಕಾಗುತ್ತದೆ. ಇಲ್ಲಿ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ, ಏಕೆಂದರೆ ಅವುಗಳು ಕೂಡ ಶೀತದ ಗಾಳಿಯಲ್ಲಿ ಕೆಲವೇ ನಿಮಿಷಗಳಲ್ಲಿ ಆಫ್ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.