Assault Case: ಗುರುದ್ವಾರದ ಬಳಿ ಸಿಖ್ ವ್ಯಕ್ತಿಯ ಮೇಲೆ ಡೆಡ್ಲಿ ಅಟ್ಯಾಕ್!-
ಕಳೆದವಾರ ಲಾಸ್ ಏಂಜಲೀಸ್‌ನ ಉತ್ತರ ಹಾಲಿವುಡ್ ಪ್ರದೇಶದ ಗುರುದ್ವಾರದ ಬಳಿ 70 ವರ್ಷದ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬೋ ರಿಚರ್ಡ್ ವಿಟಾಗ್ಲಿಯಾನೊ ಅನ್ನು ಸೋಮವಾರ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ಬಂಧಿಸಲಾಗಿದೆ. ಘಟನೆ ಕಾರಣ ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಸಿಖ್ ಆರೋಗ್ಯ ಚಿಂತಾಜನಕವಾಗಿದೆ ಎಂದು ಆತನ ಸಹೋದರ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಲಾಸ್ ಏಂಜಲೀಸ್: ವೃದ್ಧ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ (Attack on Elderly Sikh Man) ನಡೆಸಿದ ವ್ಯಕ್ತಿಯನ್ನು ಪೊಲೀಸರು ( Los Angeles police) ಬಂಧಿಸಿರುವ ಘಟನೆ ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದಿದೆ. ಬೋ ರಿಚರ್ಡ್ ವಿಟಾಗ್ಲಿಯಾನೊ (44) ಬಂಧಿತ ಆರೋಪಿ. ಕಳೆದ ವಾರ ಲಾಸ್ ಏಂಜಲೀಸ್‌ನ ಉತ್ತರ ಹಾಲಿವುಡ್ ಪ್ರದೇಶದಲ್ಲಿ (North Hollywood area ) 70 ವರ್ಷದ ಸಿಖ್ ವ್ಯಕ್ತಿಯ ಮೇಲೆ ಬೋ ರಿಚರ್ಡ್ ವಿಟಾಗ್ಲಿಯಾನೊ ಹಲ್ಲೆ ನಡೆಸಿದ್ದಾನೆ. ಈತನನ್ನು ಸೋಮವಾರ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ಬಂಧಿಸಲಾಯಿತು.
ಲಾಸ್ ಏಂಜಲೀಸ್‌ನ ಉತ್ತರ ಹಾಲಿವುಡ್ ಪ್ರದೇಶದಲ್ಲಿ ಕಳೆದ ವಾರ 70 ವರ್ಷದ ಸಿಖ್ ವ್ಯಕ್ತಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬೋ ರಿಚರ್ಡ್ ವಿಟಾಗ್ಲಿಯಾನೊ ನನ್ನು ಸೋಮವಾರ ರಾತ್ರಿ ಸ್ಥಳೀಯ ಸಮಯ 9.40ಕ್ಕೆ ಬಂಧಿಸಲಾಗಿದೆ.
ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಸಿಖ್ ವ್ಯಕ್ತಿ ಹರ್ಪಾಲ್ ಸಿಂಗ್ ಮೇಲೆ ಬೋ ರಿಚರ್ಡ್ ವಿಟಾಗ್ಲಿಯಾನೊ ದಾಳಿ ನಡೆಸಿದ್ದ. ಇದಕ್ಕೂ ಮುನ್ನ ಇವರಿಬ್ಬರ ಮಧ್ಯೆ ಜಗಳವಾಗಿತ್ತು ಎನ್ನಲಾಗಿದೆ.
ಇವರಿಬ್ಬರ ವಾಗ್ವಾದ ಜೋರಾಗಿ ಕೇಳುತ್ತಿತ್ತು. ಬಳಿಕ ಇಬ್ಬರು ಪರಸ್ಪರ ಲೋಹದ ವಸ್ತುಗಳನ್ನು ಎಸೆಯುತ್ತಿರುವುದನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದೆ. ಅನಂತರ ಇಬ್ಬರೂ ಗುಂಡು ಹಾರಿಸಿದ್ದಾರೆ. ಹರ್ಪಾಲ್ ಸಿಂಗ್ ನೆಲದ ಮೇಲೆ ಬಿದ್ದಿದ್ದಾಗ ಬೋ ರಿಚರ್ಡ್ ವಿಟಾಗ್ಲಿಯಾನೊ ಆತನ ಮೇಲೆ ಮತ್ತಷ್ಟು ಹಲ್ಲೆ ಮಾಡಿದ್ದಾನೆ. ಕೂಡಲೇ ಸ್ಥಳೀಯರು ಇದನ್ನು ನೋಡಿ ಕಿರುಚಿದ್ದರಿಂದ ಆರೋಪಿ ಬೋ ರಿಚರ್ಡ್ ವಿಟಾಗ್ಲಿಯಾನೊ ತನ್ನ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ.
ವಿಡಿಯೊ ಇಲ್ಲಿದೆ
A 70-year-old Sikh man nearly beaten to death with a golf club in North Hollywood is being considered a possible hate crime.
— Kevin Dalton (@TheKevinDalton) August 12, 2025
The victim is in a medically induced coma.
The only description of the perpetrator provided by KTLA is “a man”. pic.twitter.com/HckC0Zqa43
ತನಿಖೆ ವೇಳೆ ಪೊಲೀಸರು ಲಂಕರ್‌ಶಿಮ್ ಬೌಲೆವಾರ್ಡ್ ಮತ್ತು ಆರ್ಮಿಂಟಾ ಸ್ಟ್ರೀಟ್‌ನಲ್ಲಿ ವಿಟಾಗ್ಲಿಯಾನೊ ತನ್ನ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಗಳ ಮೂಲಕ ವೋದಿದ್ದರೆ. ಇದರಿಂದ ಆತನ ಬಂಧನ ಮಾಡಲು ಸಹಾಯವಾಯಿತು ಎಂದು ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಪಾಲ್ ಸಿಂಗ್ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ನಿವಾಸಿಯಾಗಿದ್ದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಬೋ ರಿಚರ್ಡ್ ವಿಟಾಗ್ಲಿಯಾನೊ ಆತನ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಹರ್ಪಾಲ್‌ಗೆ ಮೂರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಇನ್ನೂ ಆತನ ಸ್ಥಿತಿ ಗಂಭೀರವಾಗಿದೆ. ಸದ್ಯ ಪ್ರಜ್ಞಾಹೀನನಾಗಿರುವ ಆತನನ್ನು ಎಮರ್ಜೆನ್ಸಿ ವಾರ್ಡ್ ನಲ್ಲಿ ಇರಿಸಲಾಗಿದೆ ಎಂದು ಆತನ ಸಹೋದರ ಗುರುದಿಯಲ್ ಸಿಂಗ್ ರಾಂಧವ ತಿಳಿಸಿದ್ದಾರೆ.
ಇದನ್ನೂ ಓದಿ: Shehbaz Sharif: ಅಸೀಮ್ ಮುನೀರ್ ಆಯ್ತು, ಇದೀಗ ಶೆಹಬಾಜ್ ಷರೀಫ್ ; ಸಿಂದೂ ನದಿ ನೀರು ಬಿಡುವಂತೆ ಭಾರತಕ್ಕೆ ಬೆದರಿಕೆ
ಈ ಘಟನೆಗೆ ಪ್ರತಿಕ್ರಿಯಿಸಿರುವ ಜಿಲ್ಲಾ 7 LA ನಗರ ಪರಿಷತ್ ಸದಸ್ಯೆ ಮೋನಿಕಾ ರೊಡ್ರಿಗಸ್, ನಮ್ಮ ಸಮುದಾಯದ ಯಾವುದೇ ಒಬ್ಬ ಸದಸ್ಯರ ಮೇಲಿನ ಹಲ್ಲೆ ನಮ್ಮೆಲ್ಲರ ಮೇಲಿನ ಹಲ್ಲೆಯಾಗಿದೆ ಎಂದು ಹೇಳಿದ್ದಾರೆ.