ಜೈಲು ಬೆಂಗಾವಲು ಪಡೆ ಮೇಲೆ ಬಾಂಬ್ ದಾಳಿ: ಕುಖ್ಯಾತ ರೌಡಿ ಪಾರು, ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ
ಒಂಬತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 30 ಪ್ರಕರಣಗಳಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿರುವ ವೆಳ್ಳೈ ಕಾಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕರೆತರುತ್ತಿದ್ದಾಗ ಜೈಲು ಬೆಂಗಾವಲು ಪಡೆ ಮೇಲೆ ಬಾಂಬ್ ದಾಳಿಯಾಗಿದೆ. ವೆಳ್ಳೈ ಕಾಲಿ ಅಪಾಯದಿಂದ ಪಾರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ -
ಚೆನ್ನೈ: ಜೈಲು ಬೆಂಗಾವಲು ಪಡೆ (prison escort) ಮೇಲೆ ಬಾಂಬ್ ದಾಳಿ (Bomb attack) ನಡೆಸಿರುವ ಪ್ರಕರಣ ತಮಿಳುನಾಡಿನ (Tamil nadu) ಪೆರಂಬಲೂರು ಜಿಲ್ಲೆಯಲ್ಲಿ (Perambalur district) ಶನಿವಾರ ನಡೆದಿದೆ. ಘಟನೆಯಲ್ಲಿ ವೆಳ್ಳೈ ಕಾಲಿ ಅಪಾಯದಿಂದ ಪಾರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ವೆಳ್ಳೈ ಕಾಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹಕ್ಕೆ ( Puzhal Central Prison) ಕರೆತರುತ್ತಿದ್ದಾಗ ಈ ದಾಳಿ ನಡೆದಿದೆ. ವೆಳ್ಳೈ ಕಾಲಿಯನ್ನು ಕೊಳ್ಳುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಒಂಬತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 30 ಪ್ರಕರಣಗಳಲ್ಲಿ ಭಾಗಿಯಾಗಿರುವ ಮಧುರೈನ ಕುಖ್ಯಾತ ಅಪರಾಧಿ ವೆಳ್ಳೈ ಕಾಲಿಯನ್ನು ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಬಳಕೆ ನಿಷೇಧ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ; ಜೀವಂತವಾಗಿ ಸುಟ್ಟು ಹಾಕಿದ ಪಾಪಿಗಳು
ಜನವರಿ 21ರಂದು ವೆಳ್ಳೈ ಕಾಲಿಯನ್ನು ಪುದುಕ್ಕೊಟ್ಟೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಆತನನ್ನು ದಿಂಡಿಗಲ್ ಸಬ್-ಜೈಲಿಗೆ ಸ್ಥಳಾಂತರಿಸಲಾಗಿದೆ. ನ್ಯಾಯಾಲಯದಿಂದ ಹಿಂದಿರುಗುತ್ತಿದ್ದ ಜೈಲು ಪೊಲೀಸ್ ಬೆಂಗಾವಲು ಪಡೆ ವಾಹನದಲ್ಲಿದ್ದ ಅಧಿಕಾರಿಗಳು ಕಾಲಿಯೊಂದಿಗೆ ಪೆರಂಬಲೂರ್ ಜಿಲ್ಲೆಯ ಹೊಟೇಲ್ ಬಳಿ ಊಟಕ್ಕೆಂದು ಎರಡು ಎಸ್‌ಯುವಿಗಳಲ್ಲಿ ಬಂದ ತಂಡವೊಂದು ಕಾಲಿಯನ್ನು ಕೊಲ್ಲುವ ಸಲುವಾಗಿ ದೇಶೀಯ ಬಾಂಬ್‌ಗಳನ್ನು ಎಸೆದಿದೆ. ತಕ್ಷಣವೇ ಬೆಂಗಾವಲು ತಂಡದ ಸಬ್-ಇನ್‌ಸ್ಪೆಕ್ಟರ್ ಗುಂಡು ಹಾರಿಸಿದ್ದು, ದಾಳಿಕೋರರು ತಪ್ಪಿಸಿಕೊಂಡರು. ವೆಳ್ಳೈ ಕಾಲಿಗೆ ಯಾವುದೇ ಗಾಯವಾಗಿಲ್ಲ. ಬಾಂಬ್ ದಾಳಿಯ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಂಗ್ ಓಡಿಹೋಗುತ್ತಿದ್ದಂತೆ, ಪೊಲೀಸರು ಬೃಹತ್ ಹುಡುಕಾಟ ನಡೆಸಿದರು.ದಾಳಿ ನಡೆಸಿದ ತಂಡವು ಎರಡು ಎಸ್‌ಯುವಿಗಳಲ್ಲಿ ಒಂದನ್ನು ಕಡಲೂರು ಜಿಲ್ಲೆಯಲ್ಲಿ ಬಿಟ್ಟಿದೆ. ಇದು ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಶಂಕಿತರನ್ನು ಪತ್ತೆಹಚ್ಚಲು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೀತು ದೇಶದಲ್ಲಿಯೇ ಅತ್ಯಂತ ದೊಡ್ಡ ದರೋಡೆ; 400 ಕೋಟಿ ರಾಬರಿ!
ಈ ದಾಳಿಯ ಹಿಂದೆ ವಿಕೆ ಗುರುಸಾಮಿ ನೇತೃತ್ವದ ಗ್ಯಾಂಗ್ ಕೈವಾಡವಿರುವ ಸಾಧ್ಯತೆ ಇದೆ. ಯಾಕೆಂದರೆ ಕಾಲಿ ಮೇಲೆ ಈ ಗುಂಪು ಹಳೆಯ ದ್ವೇಷವನ್ನು ಹೊಂದಿದೆ. ಗುರುಸಾಮಿ ಡಿಎಂಕೆ ಸದಸ್ಯನಾಗಿದ್ದು, ವೆಳ್ಳೈ ಕಾಲಿ ಎಐಎಡಿಎಂಕೆ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.