Dharmasthala: ನಂಗೆ ಯಾವ ಮಗಳೂ ಇಲ್ಲ, ಗ್ಯಾಂಗ್ ಹೇಳಿಕೊಟ್ಟಂತೆ ಮಾಡಿದೆ ಎಂದ ಸುಜಾತ ಭಟ್; SIT ಎದುರು ತಪ್ಪೊಪ್ಪಿಗೆ
ಸುಜಾತಾ ಭಟ್ ಮಾಡಿರುವ ಆರೋಪದ ಹಿಂದೆ ಬಿದ್ದಿರುವ ಎಸ್‌ಐಟಿ ಅಧಿಕಾರಿಗಳು ‘ಅನನ್ಯ’ವಾದ ಪ್ರಕರಣದ ಜಾಡು ಹಿಡಿದಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಸುಜಾತಾ ಭಟ್ರ ಪ್ರಾಥಮಿಕ ಹೇಳಿಕೆಯನ್ನಷ್ಟೇ ದಾಖಲಿಸಿಕೊಂಡಿದ್ದಾರೆ. ಆದರೀಗ ಈ ಕಥೆಯೆಲ್ಲಾ ಸುಳ್ಳು ಎಂಬ ವಿಚಾರ ಬಯಲಾಗಿದ್ದು, ಬುರುಡೆ ಕಥೆ ಕಟ್ಟಿದವರೇ ಸುಜಾತ ಭಟ್ ಅನ್ನು ಕಳುಹಿಸಿದ್ದು ಎಂಬ ಸತ್ಯ ಹೊರ ಬಿದ್ದಿದೆ.

ಸುಜಾತಾ ಭಟ್

ಬೆಂಗಳೂರು: ಧರ್ಮಸ್ಥಳದಲ್ಲಿ (Dharmasthala) ತನ್ನ ಮಗಳು ಅನನ್ಯ ಭಟ್ (Ananya Bhat) ಕಾಣೆಯಾಗಿದ್ದಾಳೆ ಎಂದು ಸುಳ್ಳು ಹೇಳಿದ್ದ ಸುಜಾತ ಭಟ್ (Sujatha Bhat) ಅವರ ಅಸಲಿಯತ್ತು ವಿಶೇಷ ತನಿಖಾ ತಂಡದ (Special Investigation Team) ಎದುರು ಹೊರಬಿದ್ದಿದೆೆ. ಸುಜಾತ ಭಟ್ ಮಾಡಿರುವ ಆರೋಪವನ್ನು ಕೈಗೆತ್ತಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಸತ್ಯ ಶೋಧನೆಯಲ್ಲಿ ನಡೆಸುತ್ತಿದ್ದು, ಧರ್ಮಸ್ಥಳ ವಿರೋಧಿಗಳು ಮಾಡಿದ ಷಡ್ಯಂತ್ರ ಒಂದೊಂದಾಗಿ ಹೊರಬರುತ್ತಿದೆ.
‘ಅನನ್ಯ’ ಪ್ರಕರಣದ ಜಾಡು ಹಿಡಿದಿರುವ ಅಧಿಕಾರಿಗಳು ಈಗಾಗಲೇ ಎರಡು ಬಾರಿ ಸುಜಾತ ಭಟ್ ಅನ್ನು ವಿಚಾರಣೆಗೆ ಒಳಪಡಿಸಿದ್ದು, ಎರಡು ದಿನಗಳ ಕಾಲ ನಡೆದ ತೀವ್ರ ವಿಚಾರಣೆಯಲ್ಲಿ ಸುಜಾತ, ಅನನ್ಯ ಭಟ್ ತನ್ನ ಮಗಳೆಂದು ಯಾವುದೇ ದಾಖಲೆ ನೀಡಲಾಗದೆ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಕಥೆಯ ಹಿಂದೆ ಇದ್ದ ಬುರುಡೆ ಗ್ಯಾಂಗ್‌ನ ಮುಖವಾಡವನ್ನು ಎಸ್‌ಐಟಿ ಎದುರು ಅನಾವರಣಗೊಳಿಸಿದ್ದು, ಈಗಾಗಲೇ ಧರ್ಮಸ್ಥಳಕ್ಕೆ ಕಳಂಕ ತರಲು ಕಾಣದ ಕೈಗಳು ಸಂಚು ಹಾಕಿರುವುದು ಬಯಲಾಗಿದೆ.
ಇಂದೂ ಕೂಡ ಸುಜಾತ ಭಟ್ ವಿಚಾರಣೆ
ಬುಧವಾರ ನಡೆದ ವಿಚಾರಣೆಯಲ್ಲಿ ಸುಜಾತ ಭಟ್, ಅನನ್ಯ ಭಟ್ ಕಾಣೆಯಾದ ಕಥೆಯನ್ನು ರೂಪಿಸಿದ್ದು ಬುರುಡೆ ಗ್ಯಾಂಗ್‌ನ ಯೋಜನೆಯ ಭಾಗವೆಂದು ಒಪ್ಪಿಕೊಂಡಿದ್ದಾರೆ. ಆಟೋದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬಂದ ಸುಜಾತ ಭಟ್, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದ್ದಾರೆ. ಇದೀಗ, ಗುರುವಾರ ಸತತ ಮೂರನೇ ದಿನದ ವಿಚಾರಣೆಯಲ್ಲಿ ಅವರು ಇನ್ನಷ್ಟು ಸ್ಫೋಟಕ ಮಾಹಿತಿಗಳನ್ನು ಬಹಿರಂಗಗೊಳಿಸುವ ಸಾಧ್ಯತೆಯಿದೆ.
ಈ ಸುದ್ದಿಯನ್ನು ಓದಿ: Dharmasthala: ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ; ಎಸ್‌ಐಟಿಯಿಂದ ತಿಮರೋಡಿ ಮನೆಗೆ ದಾಳಿ
ಚಿನ್ನಯ್ಯನ ಬುರುಡೆ ಕಥೆ ಬಯಲು
ಇದೇ ಪ್ರಕರಣದಲ್ಲಿ, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್ ಮ್ಯಾನ್‌ನ ಬಂಧನವೂ ಗಮನ ಸೆಳೆದಿದೆ. ಆತನನ್ನು ಚಿನ್ನಯ್ಯ ಎಂದು ಗುರುತಿಸಲಾಗಿದ್ದು, ತಲೆ ಬುರುಡೆ ತಂದು ಹಲವು ಆರೋಪ ಮಾಡಿದ್ ಆತನ ಕಥೆಯೂ ಸುಳ್ಳಾಗಿರುವುದು ಬಯಲಾಗಿದೆ. ಚಿನ್ನಯ್ಯ, ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದು, 17 ಕಡೆ ಭೂಮಿಯನ್ನು ಅಗೆಸಿ ಎಸ್‌ಐಟಿ ಅಧಿಕಾರಿಗಳಿಗೆ ತಲೆನೋವು ತಂದಿದ್ದ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಆತನ ತಂದ ಬುರುಡೆಯ ಮಣ್ಣು ಧರ್ಮಸ್ಥಳದ್ದಲ್ಲ ಎಂದು ದೃಢಪಟ್ಟಿತು.
ಬುರುಡೆ ಗ್ಯಾಂಗ್‌ನ ಒಡಲಾಳದಲ್ಲಿ ಹಲವು ರಹಸ್ಯ?
ತನಿಖೆಯಲ್ಲಿ ಚಿನ್ನಯ್ಯ, ಬೇರೆ ಜಾಗದಿಂದ ಬುರುಡೆ ತಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಬೋಳಿಯಾರ್, ಕಲ್ಲೇರಿ ಸೇರಿದಂತೆ ವಿವಿಧ ಜಾಗಗಳನ್ನು ಆತ ಹೆಸರಿಸಿದ್ದಾನೆ. ಇದೀಗ, ಆತನನ್ನು ಬಂಧಿಸಿ, ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಸುಜಾತಾ ಭಟ್ ಮತ್ತು ಚಿನ್ನಯ್ಯನ ಹೇಳಿಕೆಗಳು ಬುರುಡೆ ಗ್ಯಾಂಗ್‌ನ ಒಡಲಾಳದ ರಹಸ್ಯಗಳನ್ನು ಬಯಲಿಗೆಳೆಯುವ ಸಾಧ್ಯತೆಯಿದೆ.