Bengaluru Power Cut: ಇಂದು, ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
BESCOM: 220/66/11ಕೆ.ವಿ ಇ.ಪಿ.ಐ.ಪಿ. ಸ್ಟೇಷನ್ನಲ್ಲಿ 31.5 ಎಂ.ವಿ.ಎ. ಶಕ್ತಿ ಪರಿವರ್ತಕ -1 ಮತ್ತು 2ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ. 20ರ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ನ. 20: ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ. 20 ಮತ್ತು 21ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ಇಂದು ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು (ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆವರೆಗೆ)
ಕ್ವಾಲ್ಕಾಂಮ್ (ಕ್ವಾಲ್ಕಾಂಮ್–1 ಮತ್ತು ಕ್ವಾಲ್ಕಾಂಮ್–2), ಕ್ಯಾಪ್ಜೆಮಿನಿ, ಐಗೇಟ್ ವೃತ್ತ, ಕುಂದಲಹಳ್ಳಿ ಮುಖ್ಯ ರಸ್ತೆ, ಗ್ರಾಫೈಟ್ ವೃತ್ತ, ರಾಧಾ ಹೋಟೆಲ್, ಫಾರ್ಚ್ಯೂನ್ ಹೋಟೆಲ್, ನಂದಿ ಟೊಯೋಟಾ, ಎಲ್ & ಟಿ ಲಿಮಿಟೆಡ್, ಎಸ್ಎಂಟಿ ಮೆಡಿಕಲ್ ಸರ್ವೀಸಸ್, ಐಡಿಯಾ, ಉಡುಪಿ ಹೋಟೆಲ್, ಚೆಸ್ಸಾ ಡೆಂಟಲ್ ಕೇರ್, ನೀರಿನ ಟ್ಯಾಂಕ್ ಪ್ರದೇಶ, ಬಿಎಂಟಿಸಿ, ಆರ್ಎಂಜೆಡ್ (ಕುಂದಲಹಳ್ಳಿ ಮುಖ್ಯ ರಸ್ತೆ) ಹಾಗೂ ಆರ್ಎಂಜೆಡ್ ನೆಕ್ಸ್ಟ್, ಚೆನ್ನಮ್ಮ ಲೇಔಟ್, ಎಸ್ಎಪಿ ಲ್ಯಾಬ್ಸ್ ಲಿಮಿಟೆಡ್ (ಇಪಿಐಪಿ ಸ್ಟೇಷನ್ ಎದುರು), ಗೋಪಾಲನ್ ಗ್ಲೋಬಲ್ ಆಕ್ಸೆಸ್ ಮತ್ತು ಗೋಪಾಲನ್ ಎಂಟರ್ಪ್ರೈಸಸ್, ಮೈಂಡ್ ಕಾಂಪ್, ಬಿಐಪಿ ಡೆವಲಪರ್ಸ್, ಬಾಗ್ಮಾನೆ ನೀಯಾನ್ ಕಟ್ಟಡ ಮತ್ತು ಬಾಗ್ಮಾನೆ ನೀಯಾನ್ ಬ್ಲಾಕ್, ಆರ್ಜಿ ಹಳ್ಳಿ–ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್ ಹಾಗೂ ಇಪಿಐಪಿ ಕೈಗಾರಿಕಾ ಪ್ರದೇಶ, ಟಿಸಿಎಸ್ ಸಾಫ್ಟ್ವೇರ್, ಎಸ್ಜೆಆರ್ ಟೆಕ್ ಪಾರ್ಕ್, ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಓರಿಯಂಟಲ್ ಹೋಟೆಲ್, ಏರ್ಟೆಲ್, ಬುಶ್ರಾ ಟೆಕ್ ಪಾರ್ಕ್, ಸಾಧಾ ಟೆಕ್ ಪಾರ್ಕ್, ಜಿಇಬಿಇ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ನಾಳೆ ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು (ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆವರೆಗೆ)
ವಾಸ್ವಾನಿ ಅಪಾರ್ಟ್ಮೆಂಟ್ಸ್, ಪ್ರೆಸ್ಟೀಜ್ ವಾಟರ್ಫೋರ್ಡ್, ವೆಬ್ ವರ್ಕ್ಸ್ ಐಟಿ ಕಂಪನಿ, ಶಾಂತಿನಿಕೇತನ ಕಮರ್ಷಿಯಲ್ ಕಾಂಪ್ಲೆಕ್ಸ್, ಹೋಟೆಲ್ ಡೆನ್, ಹಾರ್ಮನ್ ಕಂಪನಿ, ಪಟ್ಟಂದೂರು ಅಗ್ರಹಾರ, ಅಂಜನಿ ಕನ್ಸ್ಟ್ರಕ್ಷನ್ಸ್, ಎಸ್ಬಿಬಿ ಟಚ್ಸ್ಟೋನ್ ಅಪಾರ್ಟ್ಮೆಂಟ್, ಶಾಂತಿನಿಕೇತನ ಅಪಾರ್ಟ್ಮೆಂಟ್ಸ್ (ಸಿ.ಆರ್. ಬ್ಲಾಕ್), ಸಾನ್ ಲೊಕೊಮೊಟಿವ್ ಮತ್ತು ಹೆರ್ಬರ್ಟ್, ಇಸಿಸಿ ರಸ್ತೆ, ನಾಯ್ಡು ಹೋಮ್, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಪಟ್ಟಂದೂರು ಅಗ್ರಹಾರದ ಕೆಲವು ಭಾಗಗಳು, ಎನ್ವಿಡಿ ಕಂಪನಿ, ಫೈರ್ ಸ್ಟೇಷನ್, ರೆಜೆಶ್ ಎಕ್ಸ್ಪೋರ್ಟ್ಸ್, ಫ್ಲೋಸರ್ವ್, ಎನ್ವಿಷನ್, ಹೋಮ್ಟೆಕ್, ಶ್ರೀ ಸತ್ಯಸಾಯಿ ಬಾಬಾ ಆಸ್ಪತ್ರೆ, ಬಿಐಪಿ ಡೆವಲಪರ್, ಕೀರ್ತಿ ಸಿಗ್ನೇಚರ್ ಅಪಾರ್ಟ್ಮೆಂಟ್, ಸೋಸ್ಮೋಸ್ ಕಂಪನಿ, ಟೋಟಲ್ ಎನ್ವಿರಾನ್ಮೆಂಟ್ ಕಚೇರಿ, ಬಿಎಂಡಬ್ಲ್ಯು ಶೋರೂಮ್, ಹೈದರಾಬಾದ್ ಬಿರಿಯಾನಿ ಹೋಟೆಲ್, ಸಿಲ್ವರ್ ಸಾಫ್ಟ್ವೇರ್, ಹೂಡಿ ಓ & ಎಂ ಟೋಟಲ್ ಎನ್ವಿರಾನ್ಮೆಂಟ್ ಅಪಾರ್ಟ್ಮೆಂಟ್ಸ್, ಸೀಕಾನ್ ಕಂಪನಿ, ಮಕಿನೋ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ
66/11ಕೆ.ವಿ ಬಾಗಮನೆ ಟೆಕ್ಪಾರ್ಕ್ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ. 21ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಮೂರು ದಿನ ಬೆಂಗಳೂರಿನಲ್ಲಿ ಚರಕದ ಕೈಮಗ್ಗ–ಕರಕುಶಲ ಉತ್ಪನ್ನಗಳ ಪ್ರದರ್ಶನ
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಜಿಎಂ ಪಾಳ್ಯ, ಮಲ್ಲೇಶಪಾಳ್ಯ, ಮಾರುತಿ ನಗರ, ಬೈರಸಂದ್ರ, ವಿಜ್ಞಾನ ನಗರ, ರಮೇಶ್ ನಗರ, ಅಯ್ಯಪ್ಪ ನಗರ, ಕಳಪ್ಪ ಲೇಔಟ್, ಟಾಟಾ ಶೆರ್ವುಡ್, ವಿಭೂತಿಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.