ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಾವಿನಲ್ಲಿ ಕೊನೆಯಾದ ಬರ್ತ್ ಡೇ ಸಂಭ್ರಮ; ಭಿಕ್ಷುಕನನ್ನು ತಮಾಷೆ ಮಾಡಿದ ಯುವಕನನ್ನು ಕೊಂದ ಸ್ನೇಹಿತರು

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಹುಟ್ಟುಹಬ್ಬದ ಆಚರಣೆಯಲ್ಲಿ ಯುವಕರ ತಂಡ ಭಾಗಿಯಾಗಿತ್ತು. ಆದರೆ ಅವರ ನಡುವೆಯೇ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. 18 ವರ್ಷದ ಹದಿಹರೆಯದವನನ್ನು ಆತನ ಸ್ನೇಹಿತರೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಹುಟ್ಟುಹಬ್ಬದ ಆಚರಣೆಗಾಗಿ ಸೇರಿದ್ದ ಸ್ನೇಹಿತರ ಗುಂಪಿನ ನಡುವೆ ವಾಗ್ವಾದ ನಡೆದಿದ್ದು ಯುವಕ ಪ್ರಾಣವನ್ನೆ ಕಳೆದುಕೊಂಡಿದ್ದಾನೆ.

ಬರ್ತ್ ಡೇ ಸಂಭ್ರಮದ ವೇಳೆ ಸ್ನೇಹಿತನಿಗೆ ಚಾಕು ಇರಿದು ಕೊಲೆ

ಧಾರ್ಮಿಕ್‌ (ಸಂಗ್ರಹ ಚಿತ್ರ) -

Profile
Pushpa Kumari Dec 10, 2025 5:53 PM

ಗಾಂಧಿನಗರ, ಡಿ.10: ಬರ್ತಡೇ ಪಾರ್ಟಿಗಾಗಿ ಸೇರಿದ್ದ ಯುವಕರ ಗುಂಪಿನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಗುಜರಾತ್‌ನ (Gujarat) ರಾಜ್‌ಕೋಟ್ ನಗರದಲ್ಲಿ ನಡೆದಿದೆ. ಹುಟ್ಟುಹಬ್ಬದ ಆಚರಣೆಗೆ ಯುವಕರ ತಂಡವೊಂದು ಒಟ್ಟು ಗೂಡಿತ್ತು. ಈ ವೇಳೆ ಅವರ ನಡುವೆಯೇ ಉಂಟಾದ ಜಗಳದಲ್ಲಿ 18 ವರ್ಷದ ಹದಿಹರೆಯದವನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಂದಿದ್ದಾರೆ. ಹುಟ್ಟುಹಬ್ಬದ ಆಚರಣೆಗಾಗಿ ಸೇರಿದವರೇ ಸ್ನೇಹಿತನನ್ನು ಕೊಂದಿದ್ದಾರೆ.

ಸೋಮವಾರ (ಡಿಸೆಂಬರ್‌ 8) ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಧಾರ್ಮಿಕ್ ಎಂದು ಗುರುತಿಸಲಾಗಿದೆ. ರಾಹುಲ್‌ನ ಹುಟ್ಟುಹಬ್ಬವನ್ನು ಆಚರಿಸಲು ಒಟ್ಟು ಏಳು ಮಂದಿ ಸೇರಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಸ್ನೇಹಿತರ ಗುಂಪು ಚಹಾ ಕುಡಿಯಲು ಒಂದು ಕಡೆಗೆ ಹೋಗಿದ್ದರು. ಈ ವೇಳೆ ಧಾರ್ಮಿಕ್ ಅಲ್ಲೇ ಇದ್ದ ಭಿಕ್ಷುಕನೊಬ್ಬನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆತನ ಈ ವರ್ತನೆಗೆ ಗುಂಪಿನಲ್ಲಿದ್ದ ಇತರ ಸ್ನೇಹಿತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಹಾರ ಎಲೆಕ್ಷನ್‌ ಕುರಿತು ವಾಗ್ವಾದ.... ಕೊಲೆಯಲ್ಲಿ ಅಂತ್ಯ! ಸೋದರಳಿಯನನ್ನೇ ಕೊಂದ ಮಾವಂದಿರು

ಧಾರ್ಮಿಕ್ ಸ್ನೇಹಿತರ ಮಾತನ್ನು ಕೇಳದೆಯೇ ಭಿಕ್ಷುಕನಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಇದರಿಂದಾಗಿ ಸ್ನೇಹಿತರ ನಡುವಿನ ವಾಗ್ವಾದ ಹೆಚ್ಚಾಗಿದ್ದು ವಿಪರೀತ ಜಗಳ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣ ಮೀರಿದಾಗ, ಗುಂಪಿನ ಇತರ ಕೆಲವು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದಾರೆ. ರಾಹುಲ್‌ನ ಸೋದರ ಸಂಬಂಧಿ ಮತ್ತು ರಿಕ್ಷಾ ಚಾಲಕ ಮಯೂರ್ ಕೂಡ ಬಂದಿದ್ದಾರೆ. ಮಯೂರ್ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾನೆ‌. ಆದರೆ ಧಾರ್ಮಿಕ್ ಆತನಿಗೆ ಕೆಟ್ಟ ಶಬ್ದಗಳಿಂದ ಬೈದಿದ್ದಾನೆ. ಇದರಿಂದ ಕೋಪಗೊಂಡ ಮಯೂರ್, ತನ್ನ ಬಳಿಯಿದ್ದ ಚಾಕುವಿನಿಂದ ಧಾರ್ಮಿಕ್‌ನ ಎದೆಗೆ ಹಾಗೂ‌ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಧಾರ್ಮಿಕ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಪೊಲೀಸರಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಕೊಲೆ ಆರೋಪಿ ಮಯೂರ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಯುವಕರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಿನಲ್ಲಿ ಸಣ್ಣ ಜಗಳವು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದ್ದು ನಗರದಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.