ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TMC ನಾಯಕನ ವಿರುದ್ಧದ ದೂರಿನ ಪ್ರಮುಖ ಸಾಕ್ಷಿಯ ಮಗ ಅಪಘಾತದಲ್ಲಿ ಸಾವು; ಸಿಬಿಐ ತನಿಖೆಗೆ ಆಗ್ರಹ

ತೃಣಮೂಲ ಕಾಂಗ್ರೆಸ್‍ನ ಪದಚ್ಯುತಗೊಂಡ ನಾಯಕ ಶಹಜಹಾನ್ ಶೇಖ್ ವಿರುದ್ಧ ದಾಖಲಾದ ದೂರಿನ ಪ್ರಮುಖ ಸಾಕ್ಷಿಯ ಮಗ ಅಪಘಾತದಲ್ಲಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ತಂದೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸುವಂತೆ ಜನರು ಆಗ್ರಹಿಸಿದ್ದಾರೆ.

TMC ನಾಯಕನ ವಿರುದ್ಧದ ದೂರಿನ ಪ್ರಮುಖ ಸಾಕ್ಷಿಯ ಮಗನ ನಿಗೂಢ ಸಾವು

ಸಂಗ್ರಹ ಚಿತ್ರ -

Priyanka P
Priyanka P Dec 10, 2025 6:07 PM

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಸಂದೇಶಖಾಲಿಯಲ್ಲಿ 2024ರಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮತ್ತು ಅಮಾನತುಗೊಂಡ ತೃಣಮೂಲ ಕಾಂಗ್ರೆಸ್‌ನ ಪ್ರಬಲ ನಾಯಕ ಶಹಜಹಾನ್ ಶೇಖ್ (Shahjahan Sheikh) ವಿರುದ್ಧದ ಪ್ರಮುಖ ಸಾಕ್ಷಿಯೊಬ್ಬರ ಪುತ್ರ ಬುಧವಾರ ನ್ಯಾಯಾಲಯಕ್ಕೆ ಹೋಗುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೋಯರ್ಮರಿ ಬಳಿಯ ಬಸಂತಿ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ, ಸಾಕ್ಷಿದಾರ ಭೋಲಾ ಘೋಷ್ ಮತ್ತು ಅವರ ಮಗನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಕಾರು ಮತ್ತು ಖಾಲಿ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಭೋಲಾ ಅವರ ಮಗ ಸತ್ಯಜಿತ್ ಘೋಷ್ ಮತ್ತು ಕಾರಿನ ಚಾಲಕ ಶಹನೂರ್ ಮೊಲ್ಲಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮಂಡ್ಯದಲ್ಲಿ ಭೀಕರ ಕಾರು ಅಪಘಾತ; ಮೂವರ ದುರ್ಮರಣ

ಅವರು ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಬಸಿರ್ಹತ್ ಉಪ-ವಿಭಾಗೀಯ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ವಾಹನವನ್ನು ಟ್ರಕ್ ಎಳೆದುಕೊಂಡು ಹತ್ತಿರದಲ್ಲಿದ್ದ ಕಾಲುವೆಗೆ ತಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಹೆದ್ದಾರಿಯ ಪಕ್ಕದಲ್ಲಿರುವ ಕಾಲುವೆ ಬಳಿ ಟ್ರಕ್ ನೇತಾಡುತ್ತಿರುವುದು ಕಂಡುಬಂದರೂ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಂಭೀರ ಗಾಯಗೊಂಡ ಘೋಷ್ ಅವರನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಬಸಿರ್ಹತ್ ಪೊಲೀಸ್ ವರಿಷ್ಠಾಧಿಕಾರಿ ಹೊಸೈನ್ ಮೆಹೆದಿ ರೆಹಮಾನ್ ಹೇಳಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಘೋಷ್ ತಮ್ಮ ಮಗನೊಂದಿಗೆ ಶಹಜಹಾನ್ ಅವರ ವಿರುದ್ಧ ದಾಖಲಿಸಿದ ಹಲವರು ಪ್ರಕರಣಗಳಲ್ಲಿ ಒಂದಕ್ಕೆ ಸಂಬಂಧಿಸಿದಂತೆ ಹಾಜರಾಗಲು ಬಸಿರ್ಹತ್ ಉಪ-ವಿಭಾಗೀಯ ನ್ಯಾಯಾಲಯಕ್ಕೆ ಪ್ರಯಾಣಿಸುತ್ತಿದ್ದರು. ಘೋಷ್ ಅವರ ಹಿರಿಯ ಮಗ ಬಿಸ್ವಜಿತ್, ಇದು ತನ್ನ ತಂದೆಯನ್ನು ಕೊಲ್ಲಲು ಯೋಜಿತ ಪ್ರಯತ್ನ ಎಂದು ಹೇಳಿದ್ದು, ಶಹಜಹಾನ್ ಜೈಲಿನಲ್ಲಿ ಕುಳಿತು ಈ ಅಪರಾಧವನ್ನು ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಕಾರಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಟ್ರಕ್, ಅತಿವೇಗದಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು, ಅದನ್ನು ಪುಡಿಪುಡಿ ಮಾಡಿ, ಪಕ್ಕದ ಕಾಲುವೆಗೆ ಬೀಳುವವರೆಗೂ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರು ಅಪಘಾತದಲ್ಲಿ ಸಜೀವ ದಹನಗೊಂಡ ಸಿಪಿಐ ಸಾಲಿಮಠ

ಕೋಳಿ ಮರಿ ಜಗಳ ವಿವಾದ ಕೊಲೆಯಲ್ಲಿ ಅಂತ್ಯ

ಸಣ್ಣ ವಿವಾದವೊಂದು ಹಿಂಸಾಚಾರಕ್ಕೆ ತಿರುಗಿ ವೃದ್ಧರೊಬ್ಬರ ಸಾವಿಗೆ ಕಾರಣವಾದ ಆಘಾತಕಾರಿ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪತ್ರಪಲ್ಲಿ ಗ್ರಾಮದಲ್ಲಿ ನಡೆದಿದೆ. ನೆರೆಯವರ ಸಾಕುಪ್ರಾಣಿ ಮುಂಗುಸಿಯ ವಿಚಾರವಾಗಿ ಆರಂಭವಾದ ವಿವಾದವು ಎರಡು ಕುಟುಂಬಗಳ ನಡುವಿನ ತೀವ್ರ ಜಗಳ ಮತ್ತು ಮಾರಕ ದಾಳಿಗೆ ಕಾರಣವಾಯಿತು.

ವರದಿಗಳ ಪ್ರಕಾರ, ಮೃತ 72 ವರ್ಷದ ಕೃಷ್ಣ ಚಂದ್ರ ಮೊಹಂತಿ ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದರು. ಅವರ ನೆರೆಮನೆಯ ನಾರಾಯಣ್ ದಾಸ್ ಎಂಬವರ ಮನೆಯ ಒಂದು ಮುಂಗುಸಿ ಆಗಾಗ ಅವರ ಮನೆಗೆ ನುಗ್ಗಿ ಅವರ ಮರಿಗಳನ್ನು ತಿನ್ನುತ್ತಿತ್ತು. ಹೀಗಾಗಿ ಕೃಷ್ಣ ಮೊಹಂತಿ ಅವರು, ಮುಂಗುಸಿಯನ್ನು ಕಟ್ಟಿಹಾಕುವಂತೆ ನಾರಾಯಣ್‌ಗೆ ಪದೇ ಪದೆ ಹೇಳಿದ್ದರು.

ಮುಂಗುಸಿ ಮತ್ತೆ ಕೃಷ್ಣ ಮೊಹಂತಿಯವರ ಮನೆಗೆ ನುಗ್ಗಿ ಕೋಳಿಗಳನ್ನು ತಿಂದುಬಿಟ್ಟಿತು. ಇದರಿಂದ ಹತಾಶೆಗೊಂಡ ಕೃಷ್ಣ ಮುಂಗುಸಿಯನ್ನು ಓಡಿಸಿ ನಂತರ ತನ್ನ ನೆರೆಯ ನಾರಾಯಣ್‌ಗೆ ದೂರು ನೀಡಿದ್ದಾರೆ. ಆದರೆ ಆ ದಿನದ ನಂತರ, ಮುಂಗುಸಿ ಮತ್ತೆ ಮನೆಗೆ ಪ್ರವೇಶಿಸಲು ಪ್ರಯತ್ನಿಸಿತು. ಇದರಿಂದ ಕೃಷ್ಣ ಮೊಹಂತಿ ಕೋಪಗೊಂಡು ಮುಂಗುಸಿಯನ್ನು ಕೋಲಿನಿಂದ ಹೊಡೆದಿದೆ. ಇದರಿಂದ ಮುಂಗುಸಿ ಮೃತಪಟ್ಟಿದೆ. ಮುಂಗುಸಿ ಕೊಂದಿದ್ದಕ್ಕೆ ಕೋಪಗೊಂಡ ನಾರಾಯಣ ಮೊಹಂತಿಯನ್ನು ಹಲವು ಬಾರಿ ಇರಿದು ಕೊಂದಿದ್ದಾನೆ.