Self Harming: 47 ವರ್ಷದ ಅಂಕಲ್ ಕಾಟ ತಾಳಲಾಗದೆ ಆತ್ಮಹತ್ಯೆಗೆ ಶರಣಾದ 19ರ ಯುವತಿ
19 ವರ್ಷದ ವಂದನಾ ಗದಗ ಜಿಮ್ಸ್‌ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಮಗಳ ಬಗ್ಗೆ ಪೋಷಕರು ಸಾಕಷ್ಟು ಕನಸು ಕಂಡಿದ್ದರು. ಈಕೆಯ ಹಿಂದೆ ಬಿದ್ದ 47 ವರ್ಷದ ಕಿರಣ ಮದುವೆ ಆಗು ಎಂದು ನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಅಲ್ಲದೇ ಇಬ್ಬರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ.

ಆರೋಪಿ ಕಿರಣ್, ಮೃತ ವಂದನಾ

ಗದಗ: ಪ್ರೀತ್ಸೆ ಅಂತ ಹಿಂದೆ ಬಿದ್ದು ಸದಾ ಕಿರುಕುಳ (Harrassment) ನೀಡುತ್ತಿದ್ದ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ 47 ವರ್ಷದ ಅಂಕಲ್‌ನ ಕಾಟ ತಡೆಯಲಾಗದೆ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಈ ದುರದೃಷ್ಟಕರ ಘಟನೆ ಗದಗ (Gadaga news) ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾದಲ್ಲಿ ನಡೆದಿದೆ. ತಾಂಡಾ ನಿವಾಸಿ ಕಿರಣ್ ಎನ್ನುವಾತನೇ ಆರೋಪಿ.
ಈತ ತನ್ನ ಮಗಳ ವಯಸ್ಸಿನ ಯುವತಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಕಿರಣ ಕಳೆದ ಹಲವು ದಿನಗಳಿಂದ ವಂದನಾಗೆ (19) ನಿತ್ಯ ಫೋನ್ ಮಾಡಿ, ಮೆಸೇಜ್ ಮಾಡಿ, ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದ. ಮದುವೆ ಆಗದಿದ್ದರೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈತನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಕಾರಣನಾದ ಕಿರಣ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
19 ವರ್ಷದ ವಂದನಾ ಗದಗ ಜಿಮ್ಸ್‌ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಮಗಳ ಬಗ್ಗೆ ಪೋಷಕರು ಸಾಕಷ್ಟು ಕನಸು ಕಂಡಿದ್ದರು. ಈಕೆಯ ಹಿಂದೆ ಬಿದ್ದ 47 ವರ್ಷದ ಕಿರಣ ಮದುವೆ ಆಗು ಎಂದು ನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಅಲ್ಲದೇ ಇಬ್ಬರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಗದಗ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿರುವ ವಂದನಾ ಅಲ್ಲೇ ಫಿನಾಯಿಲ್ ಕುಡಿದಿದ್ದಾಳೆ. ಇದರಿಂದ ಅಸ್ವಸ್ಥಳಾಗಿದ್ದ ವಂದನಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. 47 ವರ್ಷದ ಕಿರಣ್ಗೆ ಎರಡು ಕಾಲು ಇಲ್ಲ. ಈತನನ್ನು ಸದ್ಯ ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಿರಣ್ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಮೃತ ವಂದನಾ ಹಾಗೂ ಕಿರಣ ಇಬ್ಬರೂ ವೀರಾಪೂರ ತಾಂಡಾ ನಿವಾಸಿಗಳು. ವಂದನಾ ಕುಟುಂಬಸ್ಥರು ಬೀಡಿ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಅದೇ ತಾಂಡಾದಲ್ಲಿ ಕಿರಣ್ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಕಿರಣ್, ವಂದನಾ ಜೊತೆಗೆ ಮದುವೆ ಮಾಡಿಕೊಡಿ ಎಂದು ಕುಟುಂಬಸ್ಥರನ್ನು ಕೇಳಿದ್ದ. ವಯಸ್ಸಿನ ಅಂತರದ ಕಾರಣ ಮೃತಳ ಕುಟುಂಬಸ್ಥರು ವಿರೋಧ ಮಾಡಿದ್ದರು. ಆಗ ಸುಮ್ಮನಾದ ಕಿರಣ ಪುನಃ ಕಿರುಕುಳ ನೀಡಲು ಪ್ರಾರಂಭಿಸಿದ್ದ.
ಇದನ್ನೂ ಓದಿ: Air India: ವಿಮಾನದಲ್ಲಿ ಪ್ರಯಾಣಿಕನ ನಿಗೂಢ ಸಾವು, ಪಕ್ಕದಲ್ಲಿ ಕುಳಿತವರಿಗೂ ಗೊತ್ತಾಗಲಿಲ್ಲ! ಏನಿದು ಘಟನೆ?