ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India: ವಿಮಾನದಲ್ಲಿ ಪ್ರಯಾಣಿಕನ ನಿಗೂಢ ಸಾವು, ಪಕ್ಕದಲ್ಲಿ ಕುಳಿತವರಿಗೂ ಗೊತ್ತಾಗಲಿಲ್ಲ! ಏನಿದು ಘಟನೆ?

Air India: ನವದೆಹಲಿಯಲ್ಲಿ ಆರೋಗ್ಯವಂತನಾಗಿ ವಿಮಾವನ್ನು ಏರಿದ ವ್ಯಕ್ತಿಯೊಬ್ಬ ಲಖನೌಗೆ ಬಂದಿಳಿದಾಗ ಶವವಾಗಿದ್ದ. ಈತನ ಸಾವು ಎಷ್ಟು ನಿಗೂಢವಾಗಿತ್ತೆಂದರೆ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರಿಗೆ ಆ ವ್ಯಕ್ತಿ ಮೃತಪಟ್ಟಿದ್ದೇ ಗೊತ್ತಿರಲಿಲ್ಲ. ಪ್ರಯಾಣಿಕರು ಬಿಡಿ, ಆತನಿಗೆ ಆಹಾರ ನೀಡಿದ ಗಗನಸಖಿಯರಿಗೂ ಈ ವಿಚಾರ ತಿಳಿಯಲಿಲ್ಲ.

ವಿಮಾನದಲ್ಲೇ ಪ್ರಯಾಣಿಕನ ನಿಗೂಢ ಸಾವು! ಏನಿದು ಘಟನೆ?

Profile Sushmitha Jain Mar 21, 2025 12:31 PM

ಲಖನೌ ನವದೆಹಲಿ(Delhi)ಯಿಂದ ಲಖನೌ(Lucknow) ಚೌಧರಿ ಚರಣ್ ಸಿಂಗ್(Chaudhary Charan Singh) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(International Airport)ಕ್ಕೆ ಶುಕ್ರವಾರ ಬೆಳಗ್ಗೆ ಹೊರಟಿದ್ದ ವಿಮಾನ(Flight)ದಲ್ಲಿ ಎಲ್ಲವೂ ಎಂದಿನಂತೆ ಸಲೀಸಾಗಿ ನಡೆಯುತ್ತಿತ್ತು. ದಾರಿ ಮಧ್ಯದಲ್ಲಿ ಗಗನಸಖಿಯರು ಪ್ರಯಾಣಿಕರಿಗೆ ಆಹಾರವನ್ನೂ ನೀಡಿದ್ದರೂ. ಎಲ್ಲ ಪ್ರಯಾಣಿಕರು ಇದೊಂದು ಸಾಮಾನ್ಯ ವಿಮಾನಯಾನವೆಂಬಂತೆ ಭಾವಿಸಿದ್ದರು. ಆದರೆ, ಯಾವಾಗ ವಿಮಾನ ಲ್ಯಾಂಡ್‌ ಆಯಿತೋ, ಎಲ್ಲರೂ ಶಾಕ್‌ನಿಂದ ಒಂದು ಕ್ಷಣ ಕದಲದಂತೆ ನಿಂತು ಬಿಟ್ಟರು. ಇದಕ್ಕೆ ಕಾರಣ, ನವದೆಹಲಿಯಲ್ಲಿ ಆರೋಗ್ಯವಂತನಾಗಿ ವಿಮಾನ(Air India)ವನ್ನು ಏರಿದ ವ್ಯಕ್ತಿಯೊಬ್ಬ ಲಕ್ನೋಗೆ ಬಂದಿಳಿದಾಗ ಶವವಾಗಿದ್ದ.

ಈತನ ಸಾವು ಎಷ್ಟು ನಿಗೂಢವಾಗಿತ್ತೆಂದರೆ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರಿಗೆ ಆ ವ್ಯಕ್ತಿ ಮೃತಪಟ್ಟಿದ್ದೇ ಗೊತ್ತಿರಲಿಲ್ಲ. ಪ್ರಯಾಣಿಕರು ಬಿಡಿ, ಆತನಿಗೆ ಆಹಾರ ನೀಡಿದ ಗಗನಸಖಿಯರಿಗೂ ಈ ವಿಚಾರ ತಿಳಿಯಲಿಲ್ಲ. ಏರ್ ಇಂಡಿಯಾ(Air India) ವಿಮಾನ AI2845 ಬೆಳಿಗ್ಗೆ 8:10ಕ್ಕೆ ಲಕ್ನೋದಲ್ಲಿ ಬಂದಿಳಿಯಿತು. ಈ ವೇಳೆ ಆಸಿಫ್ ಉಲ್ಹಾ ಅನ್ಸಾರಿ ಎಂದು ಗುರುತಿಸಲಾದ ವ್ಯಕ್ತಿ ಶವವಾಗಿ(dead) ಪತ್ತೆಯಾಗಿದ್ದಾನೆ. ಇದು ವಿಮಾನದಲ್ಲಿ ಅನಿರೀಕ್ಷಿತ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟುಮಾಡಿದೆ.

ಪತ್ರಿಕೆ ವರದಿಯ ಪ್ರಕಾರ, ಒಬ್ಬ ಗಗನಸಖಿ ಆಹಾರದ ತಟ್ಟೆಗಳನ್ನು ತೆರವುಗೊಳಿಸಲು ಬಂದಾಗ ಆ ವ್ಯಕ್ತಿಯನ್ನು ಗಮನಿಸಿದ್ದಾರೆ. ಮೇಲ್ನೋಟಕ್ಕೆ ಮಲಗಿದಂತೆ ಕಾಣಿಸಿದ ಕಾರಣ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಕಳವಳಗೊಂಡ ಅವರು ಹತ್ತಿರದಲ್ಲಿ ಕುಳಿತಿದ್ದ ಪ್ರಯಾಣಿಕರ ಸಹಾಯ ಕೋರಿದರು. ವಿಮಾನದಲ್ಲಿದ್ದ ವೈದ್ಯರ ಗುಂಪು ಅನ್ಸಾರಿಯನ್ನು ಪರೀಕ್ಷಿಸಿ ಅವರ ನಾಡಿಮಿಡಿತ ಪತ್ತೆಯಾಗುತ್ತಿಲ್ಲ ಎಂಬುದನ್ನು ದೃಢಪಡಿಸಿದೆ. ವಿಮಾನದುದ್ದಕ್ಕೂ ಅವರು ತಮ್ಮ ಸೀಟ್‌ಬೆಲ್ಟ್ ಅನ್ನು ಬಿಚ್ಚಿಲ್ಲ ಅಥವಾ ಅವರ ಊಟವನ್ನೂ ಮುಟ್ಟಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.

"ವಿಮಾನ ಪ್ರಯಾಣದ ಸಮಯದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಸಿಬ್ಬಂದಿ ಆತನ ಬಳಿಗೆ ಬಂದಾಗ, ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ" ಎಂದು ಸಹ ಪ್ರಯಾಣಿಕನೊಬ್ಬರು ಘಟನೆಯ ಕುರಿತು ಹೇಳಿದರು.

ಈ ಸುದ್ದಿಯನ್ನು ಓದಿ: Viral Video: ವೀಸಾ ಇಲ್ಲದೇ ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಉದ್ಯಮಿ; ಏನಿದು ವಿಡಿಯೊ...?

ತನಿಖೆ ನಡೆಸುತ್ತಿರುವ ಅಧಿಕಾರಿಗಳು

ಅನ್ಸಾರಿ ಸಾವಿನ ಸುತ್ತಲಿನ ಸಂದರ್ಭಗಳು ಸ್ಪಷ್ಟವಾಗಿಲ್ಲದ ಕಾರಣ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅವರ ಶವವನ್ನು ಹೆಚ್ಚಿನ ಪರೀಕ್ಷೆಗಾಗಿ ವೈದ್ಯಕೀಯ ವೃತ್ತಿಪರರಿಗೆ ಹಸ್ತಾಂತರಿಸಲಾಗಿದೆ. ಅವರ ಸಾವಿನ ಹಿಂದಿನ ನಿಗೂಢತೆಯನ್ನು ಪತ್ತೆ ಹಚ್ಚಲು ಹಾಗೂ ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಈ ಘಟನೆಯ ಕುರಿತು ಏರ್ ಇಂಡಿಯಾ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.