ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತ್ನಿಯನ್ನು ಕೊಂದು ಶವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ; 4 ವರ್ಷದ ಮಗನಿಂದ ಬಯಲಾಯ್ತು ಭಯಾನಕ ಸತ್ಯ

Crime News: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಬಗ್ಗೆ ಇದ್ದ ಅನುಮಾನದಿಂದ ಜಗಳವಾಡಿದ ನಂತರ ಆಕೆಯನ್ನು ಕೊಂದು, ನಂತರ ಆಕೆಯ ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿರುವ ಘಟನೆ ಒಡಿಶಾದ ನಬರಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಪತಿಯನ್ನು ಸುಬಾಸ್ ಗೊಂಡ್ ಎಂದು ಗುರುತಿಸಲಾಗಿದ್ದು, ಮನೈ ಗೊಂಡ್‌ ಮೃತ ದುರ್ದೈವಿ.

ಪತ್ನಿಯನ್ನು ಕೊಂದು ಶವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ

ಸಾಂದರ್ಭಿಕ ಚಿತ್ರ -

Priyanka P
Priyanka P Apr 13, 2026 6:23 PM

ಭುವನೇಶ್ವರ, ಏ. 13: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಬಗ್ಗೆ ಇದ್ದ ಅನುಮಾನದಿಂದ ಜಗಳವಾಡಿದ ನಂತರ ಆಕೆಯನ್ನು ಕೊಂದು, ನಂತರ ಆಕೆಯ ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿರುವ ಘಟನೆ ಒಡಿಶಾದ (Odisha) ನಬರಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯನ್ನು ಕಂಡ ದಂಪತಿಯ ನಾಲ್ಕು ವರ್ಷದ ಮಗ ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ (crime news).

ಆರೋಪಿ ಪತಿಯನ್ನು ಸುಬಾಸ್ ಗೊಂಡ್ ಎಂದು ಗುರುತಿಸಲಾಗಿದ್ದು, ಮನೈ ಗೊಂಡ್‌ ಮೃತ ದುರ್ದೈವಿ. ಬೋರ್ಗಾನ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಏಪ್ರಿಲ್ 11ರಂದು ದಂಪತಿ ತಮ್ಮ ಮಕ್ಕಳೊಂದಿಗೆ ಮದುವೆ ಕಾರ್ಯಕ್ರಮದಿಂದ ಹಿಂದಿರುಗಿದ ನಂತರ ತೀವ್ರ ವಾಗ್ವಾದದ ನಡೆದಿದೆ. ನಂತರ ಆರೋಪಿ ಸುಬಾಸ್ ಗೊಂಡ್ ತನ್ನ ಪತ್ನಿ ಮನೈ ಗೊಂಡ್‌ಳನ್ನು ಹತ್ಯೆ ಮಾಡಿದ್ದಾನೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿಯ ಬಗ್ಗೆ ಇದ್ದ ಅನುಮಾನದಿಂದ ವಾಗ್ವಾದವು ಉಲ್ಬಣಗೊಂಡು, ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಸುಬಾಸ್ ಆಕೆಯ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಡೆದ ಸಮಯದಲ್ಲಿ ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ಅವರ ಕುಟುಂಬ ಹೇಳಿದೆ.

ಯುವಕನನ್ನು ಅಪಹರಿಸಿ ಯುವತಿ ವೇಷ ಹಾಕಿಸಿ ಲೈಂಗಿಕ ಸೇವೆಗೆ ಬಳಕೆ, ಲಿಂಗ ಬದಲಾವಣೆಗೆ ಒತ್ತಡ

ನಂತರ ಆರೋಪಿ ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಹಾಕಿದ್ದಾನೆ. ಘಟನೆಯನ್ನು ಕಂಡ ಅವರ ನಾಲ್ಕು ವರ್ಷದ ಮಗ ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತು. ಇದರಿಂದಾಗಿ ಸ್ಥಳೀಯರು ಆರೋಪಿಯನ್ನು ಪ್ರಶ್ನಿಸಿದರು. ಆರಂಭದಲ್ಲಿ ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೂ, ನಂತರ ಒತ್ತಡಕ್ಕೆ ಮಣಿದು ಸುಬಾಸ್ ತಪ್ಪೊಪ್ಪಿಕೊಂಡಿದ್ದಾನೆ.

ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಹೊರತೆಗೆದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಗಳ ಮೃತದೇಹದೊಂದಿಗೆ ದಿನ ಕಳೆದ ತಂದೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರಿಯಾಂಕಾ ಎಂಬ 34 ವರ್ಷದ ಮಹಿಳೆಯ ಅಸ್ಥಿಪಂಜರದ ಅವಶೇಷಗಳು ಮನೆಯೊಳಗೆ ಪತ್ತೆಯಾಗಿವೆ. ತಮ್ಮ ಮನೆಯಲ್ಲಿ ಮಹಿಳೆಯ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ. ಪ್ರಿಯಾಂಕಾ ತನ್ನ ತಂದೆ ಉದಯ್ ಭಾನ್ ಬಿಸ್ವಾಸ್ ಜತೆ ವಾಸಿಸುತ್ತಿದ್ದರು. ಉದಯ್ ಭಾನ್ ಬಿಸ್ವಾಸ್ ಮೃತ ಮಗಳೊಂದಿಗೆ ಕೆಲವು ದಿನ ಮನೆಯಲ್ಲೇ ಕಳೆದಿದ್ದ.