ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯಾವುದೇ ಗಲ್ಫ್ ಬಂದರು ಸುರಕ್ಷಿತವಾಗಿರೋದಿಲ್ಲ: ಅಮೆರಿಕದ ದಿಗ್ಬಂಧನಕ್ಕೂ ಮೊದಲೇ ಇರಾನ್ ಎಚ್ಚರಿಕೆ

ಇರಾನ್ ಮತ್ತು ಯುಎಸ್ ನಡುವಿನ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಹೊರ್ಮುಜ್ ಜಲಸಂಧಿ ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಯಾಕೆಂದರೆ ಅಮೆರಿಕ ಇಲ್ಲಿ ದಿಗ್ಬಂಧನಕ್ಕೆ ಮುಂದಾಗಿದ್ದು, ಇದಕ್ಕೆ ತಯಾರಿ ನಡೆಸುವ ಮುನ್ನವೇ ಇರಾನ್ ತಮ್ಮ ಬಂದರಿನ ಮೇಲೆ ದಾಳಿಯಾದರೆ ಗಲ್ಫ್ ರಾಷ್ಟ್ರಗಳ ಯಾವುದೇ ಬಂದರು ಕೂಡ ಸುರಕ್ಷಿತವಾಗಿರೋದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಹೊರ್ಮುಜ್  ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ

ಸಂಗ್ರಹ ಚಿತ್ರ -

ಟೆಹರಾನ್: ಅಮೆರಿಕ ದಿಗ್ಬಂಧನ (US blockade) ಆರಂಭವಾಗುವ ಮೊದಲೇ ಗಲ್ಫ್ ರಾಷ್ಟ್ರಗಳ () ಯಾವುದೇ ಬಂದರು ಸುರಕ್ಷಿತವಾಗಿರೋದಿಲ್ಲ ಎಂದು ಇರಾನ್ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಹೊರ್ಮುಜ್ ಜಲಸಂಧಿ (Strait of Hormuz) ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಇಲ್ಲಿ ದಿಗ್ಬಂಧನ ವಿಧಿಸಲು ಕರೆ ನೀಡಿದ್ದು, ಇರರ ಬೆನ್ನಲ್ಲೇ ಇರಾನ್ (Iran) ತಮ್ಮ ಬಂದರಿನ ಮೇಲೆ ದಾಳಿಯಾದರೆ ಗಲ್ಫ್ ರಾಷ್ಟ್ರಗಳ ಯಾವುದೇ ಬಂದರು ಕೂಡ ಸುರಕ್ಷಿತವಾಗಿರೋದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದೆ.

ಕಡಲಿನ ಮೇಲೆ ಇರಾನ್ ನಿಯಂತ್ರಣ ಸಾಧಿಸುವುದನ್ನು ತಡೆಯಲು ಮುಂದಾಗಿರುವ ಅಮೆರಿಕವು ಹೊರ್ಮುಜ್ ಜಲ ಮಾರ್ಗದಲ್ಲಿ ನಿರ್ಬಂಧ ವಿಧಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಪರ್ಷಿಯನ್ ಕೊಲ್ಲಿ ಅಥವಾ ಓಮನ್ ಸಮುದ್ರದಲ್ಲಿನ ಯಾವುದೇ ತನ್ನ ಬಂದರಿನ ಮೇಲೆ ದಾಳಿಯಾದರೆ ಗಲ್ಫ್ ರಾಷ್ಟ್ರಗಳ ಬಂದರುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ.

ಭಾರಿ ದಾಳಿಯ ಬಳಿಕ ಇಸ್ರೇಲ್ ಜತೆ ಕದನ ವಿರಾಮಕ್ಕೆ ಮುಂದಾದ ಲೆಬನಾನ್

ಕದನ ವಿರಾಮ ಮಾತುಕತೆಯು ವಿಫಲವಾದ ಬಳಿಕ ಇರಾನ್ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ದಿಗ್ಬಂಧನ ನಡೆಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಇದರಿಂದ ಇಲ್ಲಿ ಸರಕು ಹಡಗುಗಳ ಸಾಗಾಟಕ್ಕೆ ಅಡ್ಡಿಯಾಗಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

ಟೆಹರಾನ್ ಮೇಲೆ ಒತ್ತಡ ಹೆಚ್ಚಿಸಲು ಯುಎಸ್ ಮಿಲಿಟರಿ ಮೂಲಕ ಇರಾನ್ ಬಂದರುಗಳನ್ನು ಪ್ರವೇಶಿಸುವ ಅಥವಾ ಹೊರಡುವ ಹಡಗುಗಳನ್ನು ನಿರ್ಬಂಧಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇರಾನ್‌ನ ಮಿಲಿಟರಿ ಮತ್ತು ರೆವಲ್ಯೂಷನರಿ ಗಾರ್ಡ್ಸ್ , ಈ ಪ್ರದೇಶದ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ ಎಂದು ಘೋಷಿಸಿದೆ.

ಅಮೆರಿಕ ವಿಧಿಸಿರುವ ನಿರ್ಬಂಧವು ಬೆಳಗ್ಗೆ 10 ಗಂಟೆಯಿಂದ ಜಾರಿಗೆ ಬರಲಿದೆ. ಇದು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ಮೂಲಕ ಇರಾನ್ ಬಂದರುಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲಾ ರಾಷ್ಟ್ರಗಳ ಹಡಗುಗಳಿಗೆ ಅನ್ವಯಿಸುತ್ತದೆ. ಇರಾನ್ ಬಂದರಿಗೆ ಹೋಗದ ಹಡಗುಗಳು ಈ ಜಲಸಂಧಿ ಮೂಲಕ ಸಾಗಲು ಅವಕಾಶವಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜತೆ ಬಾಹ್ಯಾಕಾಶಕ್ಕೆ ಹಾರಿದ 'ಡಲ್ಕೋಫ್ಲೆಕ್ಸ್‌'

ಕದನ ವಿರಾಮ ಆರಂಭವಾದ ಬಳಿಕ ಈ ಜಲ ಮಾರ್ಗದಲ್ಲಿ ಭಾಗಶಃ ಹಡಗು ಸಂಚಾರ ಆರಂಭಗೊಂಡಿತ್ತು. ಆದರೆ ಸಂಘರ್ಷ ಆರಂಭಕ್ಕೂ ಮೊದಲು ಇಲ್ಲಿ ದಿನಕ್ಕೆ100–135 ಹಡಗುಗಳು ಸಾಗುತ್ತಿದ್ದು, ಸಂಘರ್ಷ ಆರಂಭವಾದ ಮೇಲೆ ದಿನಕ್ಕೆ ಕೇವಲ 40ರಷ್ಟು ವಾಣಿಜ್ಯ ಹಡಗುಗಳು ಮಾತ್ರ ಸಾಗುತ್ತಿದ್ದವು.