Physical Assault : ಜೂಜಾಟದಲ್ಲಿ ಪತ್ನಿಯನ್ನೇ ಅಡವಿಟ್ಟು ಸೋತ ಪತಿ ಮಹಾಶಯ; ಮಾವ, ಮೈದುನ ಸೇರಿದಂತೆ 8 ಮಂದಿಯಿಂದ ಅತ್ಯಾಚಾರ
Husband Loses Wife in Gambling: ಉತ್ತರ ಪ್ರದೇಶದಲ್ಲಿ ಒಂದು ವಿಚಿತ್ರ ಪ್ರಕರಣದಲ್ಲಿ, ಪತಿಯೊಬ್ಬ ಜೂಜಾಟದಲ್ಲಿ ಪತ್ನಿಯನ್ನು ಅಡವಿಟ್ಟು ಸೋತಿದ್ದಾನೆ. ಇದರಿಂದ ಆಕೆಯ ಮೇಲೆ ಮಾವ, ಮೈದುನ ಹಾಗೂ ಅತ್ತಿಗೆಯ ಪತಿ 8 ಮಂದಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ನಡೆದಿದೆ.
ಮಾವ, ಮೈದುನ ಸೇರಿದಂತೆ 8 ಮಂದಿಯಿಂದ ಮಹಿಳೆ ಮೇಲೆ ಅತ್ಯಾಚಾರ (ಸಾಂಕೇತಿಕ ಚಿತ್ರ) -
ಲಖನೌ: ಮಹಾಭಾರತದಲ್ಲಿ ಧರ್ಮರಾಯನು ದ್ರೌಪದಿಯನ್ನು ಅಡವಿಟ್ಟು ಜೂಜಾಟವಾಡಿದ್ದ. ಅಂದು ಆಕೆಯನ್ನು ಕಾಪಾಡಲು ಸ್ವತಃ ಶ್ರೀಕೃಷ್ಣ ಬಂದಿದ್ದ. ಇದೀಗ ಉತ್ತರ ಪ್ರದೇಶದಲ್ಲೊಂದು (Uttar Pradesh) ಅಮಾನವೀಯ ಘಟನೆಯೊಂದು ನಡೆದಿದೆ. ಜೂಜಾಟದ (Gambling) ಚಟವಿದ್ದ ನೀಚ (Physical Assault) ವ್ಯಕ್ತಿಯೊಬ್ಬನಿಗೆ ಹಣ ಸಾಲದ್ದಕ್ಕೆ ಹೆಂಡತಿನ್ನೇ ಅಡವಿಟ್ಟಿ ಸೋತಿದ್ದಾನೆ. ಈ ಮೂಲಕ ತನ್ನ ಪತ್ನಿಯ ಜೀವನವನ್ನೇ ಹಾಳು ಮಾಡಿದ್ದಾನೆ. ಆಕೆಯ ಮೇಲೆ ಮಾವ, ಮೈದುನ ಸೇರಿದಂತೆ ಎಂಟು ಮಂದಿ ಅತ್ಯಾಚಾರವೆಸಗಿದ್ದಾರೆ (Crime News). ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಸಂತ್ರಸ್ಥ ಮಹಿಳೆ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬುವವನ್ನು ಮದುವೆಯಾಗಿದ್ದಳು. ಮದುವೆಯಾಗಿ ಸ್ವಲ್ಪ ಸಮಯದ ನಂತರ ಪತಿ ಮತ್ತು ಅತ್ತೆ-ಮಾವ ನಿರಂತರ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ದಿನನಿತ್ಯ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತಾರದ್ದಕ್ಕೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ.
ಇನ್ನು ಪತಿ ಡ್ಯಾನಿಶ್ಗೆ ಮದ್ಯಪಾನ ಮತ್ತು ಜೂಜಾಟದ ಚಟವಿತ್ತು. ನಿತ್ಯ ಕುಡಿದು ಬರುವ ಡ್ಯಾನಿಶ್ ತನ್ನ ಪತ್ನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ. ದಿನನಿತ್ಯ ಕುಡಿದುಬಂದು ಆಕೆಗೆ ಹೊಡೆಯುತ್ತಿದ್ದ. ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಆತ ಹಣ ಸಾಲದ್ದಕ್ಕೆ ಜೂಜಾಟವಾಡಿ, ತನ್ನ ಪತ್ನಿಯನ್ನೇ ಜೂಜುಕೋರರಿಗೆ ಅಡವಿಟ್ಟಿದ್ದಾನೆ. ಜೂಜಿನಲ್ಲಿ ಸೋತ ನಂತರ ಪರಪುರುಷರೊಂದಿಗೆ ಮಲಗುವಂತೆ ಒತ್ತಾಯಿಸಿದ್ದಾನೆ. ಆಕೆ ಕೇಳದ್ದಕ್ಕೆ 8 ಮಂದಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳಾದ ಉಮೇಶ್ ಗುಪ್ತಾ, ಮೋನು ಮತ್ತು ಅನ್ಶುಲ್ ಎಂಬಾತ ಸೇರಿ 8 ಮಂದಿಯ ವಿರುದ್ಧ ಸಂತ್ರಸ್ಥೆ ಪೊಲೀಸ್ ದೂರು ನೀಡಿದ್ದಾಳೆ.
ಅಷ್ಟೇ ಅಲ್ಲ, ಸಂತ್ರಸ್ತೆ ಮೇಲೆ ಮೈದುನ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಕೂಡ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ದೂರಿದ್ದಾಳೆ. ತನ್ನ ಮಾವ ಅಂದರೆ ಪತಿಯ ತಂದೆ ಯಾಮಿನ್ ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾಳೆ. ವರದಕ್ಷಿಣೆ ತಾರದ್ದಕ್ಕೆ ತಾವು ಹೇಳಿದ್ದೆಲ್ಲವನ್ನೂ ಪಾಲಿಸಬೇಕು. ನಮ್ಮನ್ನು ಸಂತೋಷಪಡಿಸಬೇಕು ಎಂದು ಮಾವ ಹೇಳಿದ್ದಾಗಿ ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾಳೆ.
ನನ್ನ ಮದುವೆಯಾದಗಿನಿಂದಲೂ ವರದಕ್ಷಿಣೆಗಾಗಿ ತನಗೆ ನಿತ್ಯ ಹಿಂಸೆ ನೀಡಲಾಗುತ್ತಿತ್ತು ಎಂದು ಸಂತ್ರಸ್ಥೆ ದೂರಿದ್ದಾಳೆ. ತಾನು ಗರ್ಭಿಣಿ ಎಂದು ಹೇಳಿದಾಗ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾರೆ. ಬಳಿಕ ಕಾಲಿಗೆ ಆ್ಯಸಿಡ್ ಸುರಿದಿದ್ದಲ್ಲದೆ, ಕೊಲ್ಲುವ ಉದ್ದೇಶದಿಂದ ನದಿಗೆ ಎಸೆದಿದ್ದರು. ದಾರಿಹೋಕರು ಯಾರೋ ನನ್ನನ್ನು ರಕ್ಷಿಸಿದ್ದಾರೆ. ಹೀಗಾಗಿ ಅದೃಷ್ಟವಶಾತ್ ಬದುಕುಳಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ. ಈಗ ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾಳೆ.
ಇನ್ನು ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಅವರು ಬಾಗ್‌ಪತ್‌ನಲ್ಲಿರುವ ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಎಕ್ಸ್‌ನಲ್ಲಿ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.