ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಜಯ್‌ ಗೆಲುವಿನ ಭವಿಷ್ಯ ನುಡಿದ ಜ್ಯೋತಿಷಿ ವೆಟ್ರಿವೇಲ್ ಈಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ

Astrologer Vetrivel appointed: ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಆಧ್ಯಾತ್ಮಿಕ ಸಲಹೆಗಾರ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯ (ರಾಜಕೀಯ) ಅಧಿಕಾರಿಯಾಗಿ ನೇಮಿಸಿದ್ದಾರೆ ಎಂದು ಮಂಗಳವಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ತಮಿಳುನಾಡು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಜ್ಯೋತಿಷಿ ವೆಟ್ರಿವೇಲ್ ನೇಮಕ

ವೆಟ್ರಿವೇಲ್ ಮತ್ತು ವಿಜಯ್‌ (ಸಂಗ್ರಹ ಚಿತ್ರ) -

Priyanka P
Priyanka P May 12, 2026 7:46 PM

ಚೆನ್ನೈ, ಮೇ 12: ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ (Joseph Vijay) ತಮ್ಮ ಆಧ್ಯಾತ್ಮಿಕ ಸಲಹೆಗಾರ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ (Rickey Radhan Pandit Vettrivel) ಅವರನ್ನು ಮುಖ್ಯಮಂತ್ರಿಯ ವಿಶೇಷ ಕರ್ತವ್ಯ (ರಾಜಕೀಯ) ಅಧಿಕಾರಿಯಾಗಿ ನೇಮಿಸಿದ್ದಾರೆ ಎಂದು ಮಂಗಳವಾರ (ಮೇ 12) ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ವೆಟ್ರಿವೇಲ್ ಅಧಿಕಾರ ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ, ಅವರನ್ನು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (ರಾಜಕೀಯ) ನೇಮಿಸಲಾಗಿದೆ.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಅನಿರೀಕ್ಷಿತ ಚುನಾವಣಾ ಯಶಸ್ಸಿನ ನಂತರ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ನೇಮಕಾತಿ ನಡೆದಿದೆ. ತಮಿಳುನಾಡಿನ ಪ್ರಸಿದ್ಧ ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕ ವೆಟ್ರಿವೇಲ್, ವಿಜಯ್ ಅವರ ರಾಜಕೀಯ ಪ್ರಯಾಣದಲ್ಲಿ ಪ್ರಮುಖ ಸಲಹೆಗಾರ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಲಾಗಿದೆ. ಫಲಿತಾಂಶ ಪ್ರಕಟವಾಗುವ ಮೊದಲೇ ಅವರು ವಿಜಯ್ ಅವರ ಚುನಾವಣಾ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಆರಂಭದಲ್ಲಿ ವಿಜಯ್ ಮೇ 10ರಂದು ಅಪರಾಹ್ನ 3.45ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿತ್ತು. ಆದರೆ ವೆಟ್ರಿವೇಲ್ ಅವರ ಸಲಹೆಯ ಮೇರೆಗೆ ಪ್ರಮಾಣ ವಚನ ಸಮಾರಂಭವನ್ನು ಬೆಳಗ್ಗೆ 10 ಗಂಟೆಗೆ ನಿಗದಿಪಡಿಲಾಯಿತು. ವೆಟ್ರಿವೇಲ್ ತಿಳಿಸಿದ ಶುಭ ಮುಹೂರ್ತದ ಆಧಾರದ ಮೇಲೆ ಪ್ರಮಾಣ ವಚನವನ್ನು ನಿಗದಿಪಡಿಸಲಾಯಿತು ಎನ್ನಲಾಗಿದೆ.

ಸನಾತನ ಧರ್ಮವನ್ನು ನಿರ್ಮೂಲನ ಮಾಡಬೇಕು: ನಾಲಗೆ ಹರಿಯಬಿಟ್ಟ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್

ನಾಟಕೀಯ ಬೆಳವಣಿಗೆ ಬಳಿಕ ಪ್ರಮಾಣ ವಚನ

ತಮಿಳುನಾಡು ರಾಜ್ಯಪಾಲರು ಸರ್ಕಾರ ರಚಿಸುವ ಅವರ ಮನವಿಯನ್ನು ಅಂಗೀಕರಿಸಿದ ನಂತರ, ನಟನಿಂದ ರಾಜಕಾರಣಿಯಾಗಿ ಬದಲಾದ ವಿಜಯ್‌ ಕೊನೆಗೂ ಭಾನುವಾರ (ಮೇ 10) ಪ್ರಮಾಣ ವಚನ ಸ್ವೀಕರಿಸಿದರು. ಈ ಬೆಳವಣಿಗೆಯು ಹಲವು ಸುತ್ತಿನ ಅನಿಶ್ಚಿತತೆ ಮತ್ತು ಅನುಮೋದನೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ. ಟಿವಿಕೆ ಗೆಲುವಿನ ನಂತರ ವಿಜಯ್ ಅವರನ್ನು ಅಭಿನಂದಿಸಿದ ಮೊದಲಿಗರಲ್ಲಿ ವೆಟ್ರಿವೇಲ್ ಕೂಡ ಒಬ್ಬರು. ಫಲಿತಾಂಶ ಸ್ಪಷ್ಟವಾದ ಕೂಡಲೇ ಅವರು ನಾಯಕನ ನಿವಾಸಕ್ಕೆ ತಲುಪಿದ್ದರು.

ರಾಜಕೀಯ ಸಂಪರ್ಕ ಹೊಂದಿರುವ ಹಿರಿಯ ಜ್ಯೋತಿಷಿ

ತಮಿಳುನಾಡು ರಾಜಕೀಯ ವಲಯದಲ್ಲಿ ವೆಟ್ರಿವೇಲ್ ಭಾರಿ ಪ್ರಭಾವ ಹೊಂದಿದ್ದಾರೆ. ಅವರು ಸುಮಾರು ನಾಲ್ಕು ದಶಕಗಳಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಹಲವು ಪ್ರಮುಖ ರಾಜಕೀಯ ನಾಯಕರು ಅವರ ಬಳಿ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಮಾಜಿ ಸಿಎಂ ದಿವಗಂತ ಜೆ. ಜಯಲಿಲಿತಾ ಕೂಡ, ತಮ್ಮ ಅಧಿಕಾರಾವಧಿಯಲ್ಲಿ ವೆಟ್ರಿವೇಲ್ ಅವರೊಂದಿಗೆ ಸಮಾಲೋಚಿಸಿದ ನಂತರವೇ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಅದ್ಭುತ ಚೊಚ್ಚಲ ಪ್ರವೇಶ

ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಟಿವಿಕೆ, 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ತನ್ನ ಮೊದಲ ಚುನಾವಣಾ ಫಲಿತಾಂಶದಲ್ಲೇ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು.

ಪಕ್ಷವು 108 ಸ್ಥಾನಗಳನ್ನು ಗೆದ್ದು, ಬಹುಮತಕ್ಕೆ 118 ಸ್ಥಾನಗಳ ಕೊರತೆಯನ್ನು ಎದುರಿಸಿತು. ಕಾಂಗ್ರೆಸ್ ಮತ್ತು ವಿಸಿಕೆ ಸೇರಿದಂತೆ ಸಣ್ಣ ಪಕ್ಷಗಳು ವಿಜಯ್‌ಗೆ ಬೆಂಬಲ ನೀಡಿದ್ದರಿಂದ ಅವರು ಸರ್ಕಾರ ರಚಿಸಲು ಸಾಧ್ಯವಾಯಿತು.