ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಂದೇ ಮಾತರಂ ಹಾಡಲು ನಿರಾಕರಿಸಿದ ಇಂದೋರ್‌ನ ಇಬ್ಬರು ಮುಸ್ಲಿಂ ಕಾರ್ಪೊರೇಟರ್‌ಗಳು; ಭುಗಿಲೆದ್ದ ವಿವಾದ

ಇಂದೋರ್‌ನ ಇಬ್ಬರು ಕಾರ್ಪೊರೇಟರ್‌ಗಳು ವಂದೇ ಮಾತರಂ ಹಾಡಲು ನಿರಾಕರಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಏಪ್ರಿಲ್ 8ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಇಬ್ಬರು ಕಾರ್ಪೊರೇಟರ್‌ಗಳು ವಂದೇ ಮಾತರಂ ಹಾಡಲು ನಿರಾಕರಿಸಿದ್ದರು. ಅವರ ವಿರುದ್ಧ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ.

ವಂದೇ ಮಾತರಂ ಹಾಡಲು ನಿರಾಕರಣೆ: ಎಫ್‌ಐಆರ್ ದಾಖಲು

ಸಂಗ್ರಹ ಚಿತ್ರ -

ಇಂದೋರ್: ವಂದೇ ಮಾತರಂ (Vande Mataram) ಹಾಡಲು ನಿರಾಕರಿಸಿದ ಇಬ್ಬರು ಕಾರ್ಪೊರೇಟರ್‌ಗಳ (muslim corporator) ವಿರುದ್ಧ ಎಫ್‌ಐಆರ್ (FIR) ದಾಖಲಿಸಿರುವ ಘಟನೆ ಇಂದೋರ್ (Indore) ನಲ್ಲಿ ನಡೆದಿದೆ. ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (Indore Municipal Corporation) ನಲ್ಲಿ ಏಪ್ರಿಲ್ 8ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಕಾರ್ಪೊರೇಟರ್‌ಗಳಾದ ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ಅವರು ವಂದೇ ಮಾತರಂ ಹಾಡಲು ನಿರಾಕರಿಸಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ಕಾರ್ಪೊರೇಟರ್‌ಗಳಾದ ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ನಿರಾಕರಿಸಿದ್ದರು. ಏಪ್ರಿಲ್ 8ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಹಿಳಾ ಮೀಸಲಾತಿ ಕಾಯ್ದೆ ವಿರೋಧಿಸಲು ಸಜ್ಜಾದ ವಿಪಕ್ಷಗಳ ಇಂಡಿಯಾ ಒಕ್ಕೂಟ

ಇದನ್ನು ಗಮನಿಸಿದ ಬಿಜೆಪಿ ಕಾರ್ಪೊರೇಟರ್ ಮತ್ತು ಐಎಂಸಿ ಮುಖ್ಯ ಸಚೇತಕ ಕಮಲ್ ಬಘೇಲಾ ಅವರು ಎಂಜಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ವಿರುದ್ಧ ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 196(1) ಮತ್ತು 3(5) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ವಿರುದ್ಧ ಸಮನ್ಸ್ ಜಾರಿಗೊಳಿಸಲಾಗಿದ್ದು, ಬಳಿಕ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ರಾಮಸನೇಹಿ ಮಿಶ್ರಾ, ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ಅವರ ಹೇಳಿಕೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದ ಬಳಿಕ ಅವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಕೃತ್ಯವು ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಸಾಮರಸ್ಯವನ್ನು ಕೆಡಿಸುವ ಉದ್ದೇಶವನ್ನು ಹೊಂದಿತ್ತು. ಇಬ್ಬರು ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

CBSE 10th result: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ, ಹೀಗೆ ನೋಡಿ

ಏಪ್ರಿಲ್ 8ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವುದನ್ನು ತಪ್ಪಿಸಲು ಫೌಜಿಯಾ ಶೇಖ್ ಅಲೀಮ್ ಅವರು ತಡವಾಗಿ ಬಂದಿದ್ದಾರೆ ಎಂದು ಬಿಜೆಪಿ ಕಾರ್ಪೊರೇಟರ್‌ಗಳು ಆರೋಪಿಸಿದ್ದಾರೆ. ಬಳಿಕ ಅವರಿಗೆ ಒತ್ತಾಯ ಪೂರ್ವಕವಾಗಿ ಹಾಡಲು ಹೇಳಿದಾಗ ಅವರು ಕಾನೂನು ಆಧಾರವನ್ನು ಪ್ರಶ್ನಿಸಿ ಅಲ್ಲಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.