ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಬಳಿಕ ಕಲಬುರಗಿಯಲ್ಲೂ ರುಬ್ಬುಕಲ್ಲಿನಿಂದ ಹತ್ಯೆ; ಪತಿಯ ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಕೊಂದ ಪತ್ನಿ, ಪ್ರಿಯಕರ

Kalaburagi Crime: ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸದ್ಯ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಮೃತನನ್ನು ಸಿದ್ದರಾಮ ಎಂದು ಗುರುತಿಸಲಾಗಿದೆ.

ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಪತಿಯ ಹತ್ಯೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 8, 2026 5:45 PM

ಕಲಬುರಗಿ, ನ. 8: ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್‌ ಇಂದುಶೇಖರ್‌ ರುಬ್ಬುಕಲ್ಲಿನಿಂದ ತಲೆ ಜಜ್ಜಿ 7 ಮಂದಿಯನ್ನು ಹತ್ಯೆಗೈದ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬೆನ್ನಿಗೆ ಅಂತಹದ್ದೇ ಮತ್ತೊಂದು ಭೀಕರ ಕೊಲೆ ದೂರದ ಕಲಬುರಗಿಯಲ್ಲಿ ನಡೆದಿದೆ. ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ (Kalaburagi Crime). ಸದ್ಯ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಮೃತನನ್ನು ಸಿದ್ದರಾಮ ಎಂದು ಗುರುತಿಸಲಾಗಿದೆ.

ಕೊಲೆ ಮಾಡಿದ ಸಿದ್ದರಾಮ ಅವರ ಪತ್ನಿ ಅಂಬಿಕಾ ಮತ್ತು ಆಕೆಯ ಪ್ರಿಯಕರ ಮಾರುತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಮಾರುತಿ ಜತೆ ಅಂಬಿಕಾ ಇರುವುದನ್ನು ಸಿದ್ದರಾಮ ಗಮನಿಸಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ

ಮೈಮೇಲೆ ಗಾಯದ ಗುರುತು ಬೀಳದಂತೆ ಸಿದ್ದರಾಮನ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ ಬಳಿಕ ಮಂಚದ ಮೇಲೆ ಡೆಡ್ ಬಾಡಿ ಹಾಕಿ ಸಹಜ ಸಾವು ಎಂಬಂತೆ ಬಿಂಬಿಸಲು ಮುಂದಾದ ಜೋಡಿ ಇದೀಗ ಕೊನೆಗೂ ಸಿಕ್ಕಿ ಬಿದ್ದಿದೆ. ಅಂಬಿಕಾ ಮತ್ತು ಪ್ರಿಯಕರ ಮಾರುತಿ ಸೇರಿ ಪತಿ ಸಿದ್ದರಾಮನ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಮೈಮೇಲೆ ಗಾಯದ ಗುರುತು ಮೂಡದಂತೆ ಈ ಕೊಲೆ ನಡೆದಿತ್ತು.

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65 ವರ್ಷದ ವೃದ್ಧ

ನವೆಂಬರ್ 3ರಂದು ರಾತ್ರಿ ಸಿದ್ದರಾಮಗೆ ನಿದ್ರೆ ಮಾತ್ರ ಕೊಟ್ಟಿದ್ದ ಅಂಬಿಕಾ ಬಳಿಕ ಮಾರುತಿಯನ್ನು ಮನೆಗೆ ಕರೆಸಿದ್ದಾಳೆ. ಅಂಬಿಕಾ ಜತೆ ಮಾರುತಿ ರಾತ್ರಿ ಇಡಿ ಕಳೆದಿದ್ದಾನೆ. ನವೆಂಬರ್ 4ರಂದು ಮುಂಜಾನೆ ಎಚ್ಚರಗೊಂಡ ಪತಿ ಸಿದ್ದರಾಮ ಪತ್ನಿ ಅಂಬಿಕಾ ಜತೆ ಮಾರುತಿ ಮಲಗಿರುವುದು ಕಂಡು ಕೋಪಗೊಂಡಿದ್ದಾನೆ. ಅಲ್ಲದೆ ಜಗಳ ತೆಗೆದಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಮಾರುತಿ ಮತ್ತು ಅಂಬಿಕಾ ಸೇರಿ ಸಿದ್ದರಾಮನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.