ಮೂವರು ಅಧಿಕಾರಿಗಳು ಸೇರಿ KPSC ನೇಮಕಾತಿ ಹಗರಣ ನಡೆಸಿದ್ದು ಹೇಗೆ? ತನಿಖೆ ಇಂಚಿಂಚು ಮಾಹಿತಿ ಇಲ್ಲಿದೆ
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ಕೇವಲ ಮೂವರು ಅಧಿಕಾರಿಗಳು ಸೇರಿ ನಡೆಸಿದರು. ಇದರಲ್ಲಿ ಆಸನ ವ್ಯವಸ್ಥೆ, ಪ್ರಶ್ನೆಪತ್ರಿಕೆಗಳ ಅದಲುಬದಲು ಕೂಡ ಸೇರಿದೆ. ಈ ಹಗರಣಕ್ಕೆ ಸಂಬಂಧಿಸಿ ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪ, ಸದಸ್ಯೆ ಬಿ.ವಿ. ಗೀತಾ ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕೋಟ್ಯಾಂತರ ರೂಪಾಯಿಗಾಗಿ ನಡೆದಿರುವ ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ನಡೆಸುವ ನೇಮಕಾತಿ ಪರೀಕ್ಷೆಯ (ecruitment scam) ಅಕ್ರಮಕ್ಕೆ (KPSC exam scam) ಸಂಬಂಧಿಸಿ ಕೆಪಿಎಸ್‌ಸಿ ಅಧ್ಯಕ್ಷ (KPSC Chairman) ಸಾಹುಕಾರ್ ಶಿವಶಂಕರಪ್ಪ, ಸದಸ್ಯೆ ಬಿ.ವಿ. ಗೀತಾ ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಮೂವರು ಸೇರಿಕೊಂಡು ನಿರ್ದಿಷ್ಟ ಕೆಲವು ಅಭ್ಯರ್ಥಿಗಳಿಗೆ ಸೋರಿಕೆಯಾದ ಉತ್ತರ ಪತ್ರಿಕೆಯನ್ನು ಹಂಚಿದ್ದರು. ಇವರಿಗೆ ಆಸನ ವ್ಯವಸ್ಥೆ, ಪ್ರಶ್ನೆಪತ್ರಿಕೆಗಳ ಅದಲುಬದಲು ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪ, ಸದಸ್ಯೆ ಬಿ.ವಿ. ಗೀತಾ ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಬಂಧಿಸಿದೆ. ಸಂಪೂರ್ಣ ಹಗರಣದಲ್ಲಿ ಈ ಮೂವರು ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದಾರೆ.
ಹಿರಿಯ ನಟ ನಾನಾ ಪಾಟೇಕರ್ ನಿಧನ; ಗೋವಾ ಪೊಲೀಸರಿಂದ ಅಸ್ವಾಭಾವಿಕ ಸಾವು ಪ್ರಕರಣ ದಾಖಲು!
ಹಗರಣಕ್ಕೆ ಸಂಬಂಧಿಸಿ ಸಾಹುಕಾರ್ ಶಿವಶಂಕರಪ್ಪ ಮತ್ತು ಗೀತಾ ಅವರ ವಿಚಾರಣೆ ನಡೆಸಲಾಗುತ್ತಿದ್ದು, ಜ್ಞಾನೇಂದ್ರ ಕುಮಾರ್ ಮತ್ತು ಬಿಜೆಪಿ ನಾಯಕ ಬಸವರಾಜ ಕನ್ನಾಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಜಾರಿ ನಿರ್ದೇಶನಾಲಯ, ಹಗರಣದ ತನಿಖೆ ಮತ್ತು ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಪ್ರಕಾರ ,ಕೆಪಿಎಸ್‌ಸಿ ಹಗರಣದಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ, ನಿರ್ದಿಷ್ಟ ಅಭ್ಯರ್ಥಿಗಳಿಗೆ ಉತ್ತರ ಕೀಲಿಗಳ ಹಂಚಿಕೆ ಮತ್ತು ಲಂಚಕ್ಕಾಗಿ 1:3 ಅರ್ಹತಾ ಪಟ್ಟಿಯ ದುರ್ಬಳಕೆ ಮಾಡಲಾಗಿದೆ ಎಂದು ತಿಳಿಸಿದೆ.
ಕೋಟ್ಯಾಂತರ ರೂಪಾಯಿಯ ಕೆಪಿಸಿಸಿ ನೇಮಕಾತಿ ಹಗರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳ ವಿರುದ್ಧ ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಆಧಾರದಲ್ಲಿ ವಿಚಾರಣೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯು, ಈ ಅಪರಾಧಗಳು ಬಿಎನ್ನೆಸ್ 2023 ರ ಸೆಕ್ಷನ್ 318 (3), 318 (4), 336 (3) ಮತ್ತು 340 (2) ರ ಅಡಿಯಲ್ಲಿ ಶಿಕ್ಷಾರ್ಹವಾಗಿವೆ ಎಂದು ಹೇಳಿದೆ.
ಕಳೆದ ಜನವರಿ 8ರಂದು ನಡೆದ ಪಶುವೈದ್ಯಾಧಿಕಾರಿ ಹುದ್ದೆಯ ಪರೀಕ್ಷೆಗೆ ಹಾಜರಾದ ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆಯ ಕೆಲವೇ ಕ್ಷಣಗಳ ಮೊದಲು ಸರಿಯಾದ ಉತ್ತರಗಳ ಪಟ್ಟಿಯನ್ನು ನೀಡಲಾಗಿತ್ತು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 20 ಲಕ್ಷ ರೂ. ನಿಂದ 40 ಲಕ್ಷ ರೂ. ವರೆಗೆ ಲಂಚವನ್ನು ಪಡೆಯಲಾಗಿತ್ತು. ಸೋರಿಕೆಯಾದ ಉತ್ತರಗಳ ಪಟ್ಟಿಯನ್ನು ಕೆಪಿಎಸ್ ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಗೀತಾ ಪಡೆದಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಶೇ. 70ರಷ್ಟು ಇಳಿಕೆ ಸಾಧ್ಯತೆ: ರೋಗಿಗಳಿಗೆ ವಾರ್ಷಿಕ 2,500 ಕೋಟಿ ರೂ. ಉಳಿತಾಯ!
ಪ್ರಶ್ನೆ ಪತ್ರಿಕೆ ಸೋರಿಕೆಗೆ ಗೀತಾ ಅವರು ಒಪ್ಪಂದದ ಒಟ್ಟು ಮೊತ್ತವಾದ 40 ಲಕ್ಷ ರೂ. ಗಳಲ್ಲಿ ಒಬ್ಬ ಅಭ್ಯರ್ಥಿಯಿಂದ ಮುಂಗಡವಾಗಿ 20 ಲಕ್ಷ ರೂ. ಪಡೆದಿದ್ದರು. ಶಿವಶಂಕರಪ್ಪ ಸಾಹುಕಾರ್ ಅವರು ಒಪ್ಪಂದದ ಒಟ್ಟು ಮೊತ್ತವಾದ 20 ಲಕ್ಷ ರೂ. ಗಳಲ್ಲಿ ಒಬ್ಬ ಅಭ್ಯರ್ಥಿಯಿಂದ ಮುಂಗಡವಾಗಿ 10 ಲಕ್ಷ ರೂ. ಪಡೆದಿದ್ದರು. ಒಟ್ಟು ಆರು ಅಭ್ಯರ್ಥಿಗಳು ಲಂಚ ನೀಡಿದ್ದರು. ಎನ್ನಲಾಗಿದ್ದು, ಅವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಹೇಳಿದೆ.