ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಕೊರಿಯಾದ ಪ್ರಿಯತಮನನ್ನು ಕೊಂದ ಮಣಿಪುರದ ಮಹಿಳೆ; ಲೀವ್‌ ಇನ್‌ ರಿಲೇಷನ್‌ಶಿಪ್‌ ದುರಂತ ಅಂತ್ಯ ಕಂಡಿದ್ದು ಹೇಗೆ?

ದಕ್ಷಿಣ ಕೊರಿಯಾ ಮೂಲದ ಸಂಗಾತಿಯನ್ನು ಮಣಿಪುರದ ಮಹಿಳೆ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಈ ಜೋಡಿ ಕೆಲವು ಸಮಯಗಳಿಂದ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿತ್ತು. ಮೃತನನ್ನು ದಕ್ಷಿಣ ಕೊರಿಯಾದ ಡಕ್‌ ಹೀ ಯುಹ್‌ ಎಂದು ಗುರುತಿಸಲಾಗಿದೆ.

ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಕೊಂದ ಮಣಿಪುರದ ಮಹಿಳೆ

ಲಂಜೀನಾ ಪಾಮೈ ಮತ್ತು ಡಕ್‌ ಹೀ ಯುಹ್‌ (ಸಂಗ್ರಹ ಚಿತ್ರ) -

Ramesh B
Ramesh B Jan 4, 2026 11:27 PM

ಲಖನೌ, ಜ. 4: ಕೆಲವು ಸಮಯಗಳಿಂದ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ಸಂಬಂಧ ದುರಂತ ಅಂತ್ಯ ಕಂಡಿದೆ. ದಕ್ಷಿಣ ಕೊರಿಯಾ ಮೂಲದ ಸಂಗಾತಿಯನ್ನು ಮಣಿಪುರದ ಮಹಿಳೆ ಕೊಲೆ ಮಾಡಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ಆ ಮೂಲಕ ಮತ್ತೊಂದು ಲೀವ್‌ ಇನ್‌ ರಿಲೇಷನ್‌ಶಿಪ್‌ ನೆಲ ಕಚ್ಚಿದೆ. ಮೃತನನ್ನು ದಕ್ಷಿಣ ಕೊರಿಯಾದ ಡಕ್‌ ಹೀ ಯುಹ್‌ (Duck Hee Yuh) ಎಂದು ಗುರುತಿಸಲಾಗಿದ್ದು, ಆರೋಪಿ ಆತನ ಪ್ರೇಯಸಿ ಮಣಿಪುರದ ಲಂಜೀನಾ ಪಾಮೈ (Lunjeana Pamai) ಎಂದು ಮೂಲಗಳು ತಿಳಿಸಿವೆ.

ಜಗಳ ನಡೆದ ಬಳಿಕ ಲಂಜೀನಾ ಪಾಮೈ ರೋಷದಿಂದ ಡಕ್‌ ಹೀ ಯುಹ್‌ಗೆ ಚೂರಿಯಿಂದ ಚುಚ್ಚಿದ್ದು, ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾನೆ. ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಸದ್ಯ ಲಂಜೀನಾ ಪಾಮೈಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ

ದಕ್ಷಿಣ ಕೊರಿಯಾದ ಡಕ್‌ ಹೀ ಯುಹ್‌ ಕೆಲವು ಸಮಯಗಳಿಂದ ಭಾರತದಲ್ಲಿದ್ದಾನೆ. ಮೊಬೈಲ್‌ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿರುವ ಆತನಿಗೆ ಕೆಲವು ತಿಂಗಳ ಹಿಂದೆ ಮಣಿಪುರ ಮೂಲದ ಲಂಜೀನಾ ಪಾಮೈಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಗ್ರೇಟರ್‌ ನೋಯ್ಡಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಜತೆಯಾಗಿ ವಾಸಿಸಲು ಆರಂಭಿಸಿದರು.

ದಕ್ಷಿಣ ಕೊರಿಯಾ ಮೂಲದ ವ್ಯಕ್ತಿಯ ಕೊಲೆಯ ಬಗ್ಗೆ ಮಾಹಿತಿ:



ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕ್ರಮೇಣ ಇಬ್ಬರ ಮಧ್ಯೆ ಅಸಮಾಧಾನ ಹೊಗೆಯಾಡತೊಡಗಿತು. ಆಗಾಗ ಜಗಳ ನಡೆಯುತ್ತಿತ್ತು. ಅದರಂತೆ ಭಾನುವಾರ (ಜನವರಿ 4) ಇಬ್ಬರು ಮದ್ಯ ಸೇವಿಸುತ್ತಿದ್ದಾಗ ಯಾವುದೋ ಕಾರಣಕ್ಕೆ ವಾಗ್ದಾದ ಆರಂಭವಾಯಿತು. ಜಗಳ ತಾರಕಕ್ಕೇರಿ ಪಾಮೈ ಕೋಪಗೊಂಡ ಚಾಕು ತೆಗೆದು ಡಕ್‌ನ ಎದೆಗೆ ಚುಚ್ಚಿದಳು ಎಂದು ಮೂಲಗಳು ತಿಳಿಸಿವೆ.

ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್‌ ಇನ್‌ ಜೋಡಿಯ ಕೊಲೆ

ಕುಸಿದು ಬಿದ್ದ ತನ್ನ ಪ್ರಿಯತಮನನ್ನು ಕಂಡು ಕಂಗಾಲಾದ ಆಕೆ ಕೂಡಲೇ ಆತನನ್ನು ಗಿಮ್ಸ್‌ ಆಸ್ಪತ್ರೆಗೆ (GIMS Hospital) ಕರೆದೊಯ್ದಳು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ವೈದ್ಯರು ಪೊಲೀಸರು ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಪಾಮೈ ತಾನೇ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಳು. ತನಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದೂ, ಆ ಕ್ಷಣಕ್ಕೆ ಕೋಪದಿಂದ ಚಾಕುವಿನಿಂದ ಚುಚ್ಚಿರುವುದಾಗಿ ತಿಳಿಸಿದಳು ಎಂದು ಪೊಲೀಸರು ಹೇಳಿದ್ದಾಗಿ ವರದಿಯೊಂದು ತಿಳಿಸಿದೆ.

ಕಾರಣವೇನು?

ಪೊಲೀಸ್‌ ತನಿಖೆ ವೇಳೆ ಕೊಲೆಯ ಕಾರಣ ಬಹಿರಂಗಗೊಂಡಿದೆ. ʼʼಮದ್ಯ ಸೇವಿಸಿ ಪ್ರತಿದಿನ ಡಕ್‌ ನನ್ನ ಮೇಲೆ ನಡೆಸುತ್ತಿದ್ದ. ಇದರಿಂದ ರೋಸಿ ಹೋಗಿ ನಾನು ಪ್ರತಿದಾಳಿ ನಡೆಸಿದೆ. ಆದರೆ ನನಗೆ ಆತನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲʼʼ ಎಂದು ಪಾಮೈ ಹೇಳಿದ್ದಾಳೆ. ಸದ್ಯ ಆಕೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ. ಸದ್ಯ ಪೊಲೀಸರು ಪೋಸ್ಟ್‌ ಮಾರ್ಟಂ ವರದಿಗಾಗಿ ಕಾಯುತ್ತಿದ್ದು, ಇದು ಬಂದ ಬಳಿಕವಷ್ಟೇ ಡಕ್‌ನ ದೇಹದಲ್ಲಿ ಎಷ್ಟು ಗಾಯಗಳಿವೆ, ಸಾವಿಗೆ ನಿಖರ ಕಾರಣವೇನು ಎನ್ನುವುದು ತಿಳಿಯಲಿದೆ.