Viral News: ಏರ್‌ಪೋರ್ಟ್ ಟಾಯ್ಲೆಟ್‌ನಲ್ಲಿ ಶ್ವಾನವನ್ನು ಮುಳುಗಿಸಿ ಕೊಂದ ಕ್ರೂರಿ!
ಸರಿಯಾದ ದಾಖಲೆಗಳಿಲ್ಲದಿದ್ದಕ್ಕೆ ಸಾಕುನಾಯಿಯನ್ನು ವಿಮಾನದಲ್ಲಿ ಕರೆತರಲು ಅನುಮತಿ ಸಿಗದ ಕಾರಣ ಅಲಿಸನ್ ಅಗಾಥಾ ಲಾರೆನ್ಸ್ ಎಂಬ 57 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಯನ್ನು ಒರ್ಲ್ಯಾಂಡೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರೆಸ್ಟ್ ರೂಂನಲ್ಲಿನ ಶೌಚಾಲಯದಲ್ಲಿ ನೀರಿನೊಳಗೆ ಮುಳುಗಿಸಿ ಕೊಂದಿದ್ದಾಳೆ. ಈ ಆರೋಪದ ಮೇಲೆ ಅಮೆರಿಕದ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್(Viral Video) ಆಗಿದೆ.


ತಲ್ಲಹಸ್ಸಿ: ಸಾಕುನಾಯಿಯನ್ನು ಈಗ ಜೀವಕ್ಕಿಂತ ಹೆಚ್ಚಾಗಿ ಸಾಕುತ್ತಾರೆ. ತಮ್ಮ ಸಾಕುನಾಯಿಯನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸಿದ ಹೃದಯಸ್ಪರ್ಶಿ ಘಟನೆ ಕೂಡ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇಲ್ಲೊಬ್ಬಳು ಮಹಿಳೆ ತಾನೇ ಸಾಕಿದ ನಾಯಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ದಾರುಣವಾದ ಘಟನೆಯೊಂದು ನಡೆದಿದೆ. ನಾಯಿಯನ್ನು ವಿಮಾನದಲ್ಲಿ ಕರೆತರಲು ಅನುಮತಿ ಸಿಗದ ಕಾರಣ 57 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಯನ್ನು ವಿಮಾನ ನಿಲ್ದಾಣದ ರೆಸ್ಟ್ ರೂಂನಲ್ಲಿನ ಶೌಚಾಲಯದಲ್ಲಿ ನೀರಿನೊಳಗೆ ಮುಳುಗಿಸಿ ಕೊಂದಿದ್ದಾಳೆ. ಈ ಆರೋಪದ ಮೇಲೆ ಅಮೆರಿಕದ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಒರ್ಲ್ಯಾಂಡೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ತಪಾಸಣೆಗೆ ಮೊದಲು ಸಿಬ್ಬಂದಿ ರೆಸ್ಟ್ ರೂಂನಲ್ಲಿ ಸತ್ತ ನಾಯಿಯನ್ನು ಪತ್ತೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಈದೀಗ ಸೋಶೀಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಶಂಕಿತಳನ್ನು ಅಲಿಸನ್ ಅಗಾಥಾ ಲಾರೆನ್ಸ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಲು ಅಗತ್ಯವಾದ ದಾಖಲೆಗಳನ್ನು ಹೊಂದಿರದ ಕಾರಣ ನಾಯಿಯ ಪ್ರಯಾಣಕ್ಕೆ ಅನುಮತಿ ಸಿಗಲಿಲ್ಲ. ಆದರೆ ಆಕೆ ನಾಯಿಗಾಗಿ ಪರ್ಯಾಯ ವ್ಯವಸ್ಥೆ ಮಾಡುವ ಬದಲು, ಅವಳು ನಾಯಿಯನ್ನು ರೆಸ್ಟ್ ರೂಂನ ಶೌಚಾಲಯದಲ್ಲಿ ನೀರಿನಲ್ಲಿ ಮುಳುಗಿಸಿ ಕೊಂದು ಅದರ ಶವವನ್ನು ಕಸದ ಬುಟ್ಟಿಯಲ್ಲಿ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ. ತನಿಖೆಯ ನಂತರ, ಘಟನಾ ಸ್ಥಳದಿಂದ ದೊರೆತ ಪುರಾವೆಗಳ ಆಧಾರದ ಮೇಲೆ ಅಧಿಕಾರಿಗಳು ಅರೆಸ್ಟ್ ವಾರಂಟ್ ಹೊರಡಿಸಿದ್ದಾರೆ.ಲಾರೆನ್ಸ್ ಅವಳನ್ನು ಥರ್ಡ್-ಡಿಗ್ರಿ ಅಪರಾಧ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯದ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳಲಾಯಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ ಆಕೆಯನ್ನು 5,000 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ.
ಫ್ಲೋರಿಡಾದ ಅನಿಮಲ್ ರೈಟ್ಸ್ ಫೌಂಡೇಶನ್‍ನ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಬ್ರಿಯಾನ್ ವಿಲ್ಸನ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ವಸ್ತುಗಳ ರೀತಿ ನಡೆಸಿಕೊಳ್ಳುವ ಜನರ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ ರಾಜ್ಯ ಸೆನೆಟರ್ ಟಾಮ್ ಲೀಕ್ ಅವರು ಸಂಸದರನ್ನುದ್ದೇಶಿಸಿ ಮಾತನಾಡುವಾಗ ಈ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಾಕು ಶ್ವಾನದ ಜೀವಂತ ಸಮಾಧಿ ಮಾಡಿದ ಕ್ರೂರಿ ಮಾಲೀಕ; ಹೃದಯವಿದ್ರಾವಕ ವಿಡಿಯೊ ವೈರಲ್!
ಸಾಕು ನಾಯಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ನೆಬ್ರಾಸ್ಕಾ ವಿಮಾನ ನಿಲ್ದಾಣದ ಶೌಚಾಲಯದಲ್ಲಿ 3 ವಾರಗಳ ನಾಯಿಮರಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಈ ಮಹಿಳೆಗೆ ಎರಡು ವರ್ಷಗಳ ಪ್ರೊಬೆಷನರಿ ಶಿಕ್ಷೆ ವಿಧಿಸಲಾಗಿತ್ತು. ನಾಯಿಮರಿ ತುಂಬಾ ಚಿಕ್ಕದಾಗಿದೆ ಎಂಬ ಕಾರಣಕ್ಕೆ ವಿಮಾನ ಹತ್ತದಂತೆ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಆಕೆ ಇಂತಹ ಘೋರ ಕೃತ್ಯ ಎಸಗಿದ್ದಾಳಂತೆ. ಕೊನೆಗೆ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾಳೆ.
9 ನಾಯಿಮರಿಗಳ ಸಜೀವ ದಹನ!
ಅದು ಅಲ್ಲದೇ, ಇತ್ತೀಚೆಗೆ ಇಸ್ಲಾಮಾಬಾದ್‌ನ ಗುಲ್ಬರ್ಗ್ ಗ್ರೀನ್ಸ್‌ನಲ್ಲಿ 9 ನಾಯಿಮರಿಗಳನ್ನು ನಿರ್ದಯವಾಗಿ ಸುಟ್ಟು ಕೊಲ್ಲಲಾಗಿದೆ. ಈಗಾಗಲೇ ಆ ಪ್ರದೇಶದ ಸಿಸಿಟಿವಿ ಫೂಟೇಜ್‌ಗಳನ್ನು ಕಲೆಹಾಕಿ ಈ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ದೃಶ್ಯ ನೋಡಿದ ಪ್ರಾಣಿಪ್ರಿಯರು ಈ ಘಟನೆಯನ್ನು ಪರಿಶೀಲಿಸಿ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ