ಯುವ ಜನರೇ ಎಚ್ಚರ: ಜಿಮ್‌ನಿಂದ ಫಿಟ್‌ನೆಸ್ ಮಾತ್ರವಲ್ಲ, ನಿಮ್ಮ ಅಂದವೂ ಹಾಳಾಗಬಹುದು!
Health Tips: ನೋಡಲು ಫಿಟ್ ಆಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಬಹುಬೇಗ ದೇಹದ ತೂಕ ಇಳಿಸುವುದು ಹಾಗೂ ತೂಕ ಏರಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಹೀಗಾದಾಗ ಅವರು ಹೇಗೆ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ? ಯಾಕೆ ವಯಸ್ಸಾದವರಂತೆ ಕಾಣುತ್ತಾರೆ? ಎನ್ನುವುದರ ಕುರಿತು ಸಾಕಷ್ಟು ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ತಿಳಿಸಿದ್ದಾರೆ.
ಪ್ರೊ. ಸುತ್ತೂರು ಮಾಲಿನಿ -
ಬೆಂಗಳೂರು, ಏ. 29: ದೇಹದ ತೂಕವನ್ನು (Fitness) ಸಮತೋಲನದಲ್ಲಿ ಇಡಬೇಕು. ನೋಡಲು ಫಿಟ್ ಆಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೀಗಾಗಿ ಕೆಲವರು ಬಹುಬೇಗ ದೇಹದ ತೂಕ ಇಳಿಸುವುದು ಹಾಗೂ ತೂಕ ಏರಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಹೀಗಾದಾಗ ಯಾವೆಲ್ಲ ಆರೋಗ್ಯ ಸಮಸ್ಯೆ ಎದುರಾಗುತ್ತದೆ? ಯಾಕೆ ಬೇಗನೇ ವಯಸ್ಸಾದವರಂತೆ ಕಾಣಿಸುತ್ತಾರೆ? ಎನ್ನುವುದರ ಕುರಿತು ʼವಿಶ್ವವಾಣಿ ಹೆಲ್ತ್ʼ ಯುಟ್ಯೂಬ್ ಚಾನೆಲ್ ಜತೆ ಮಾತನಾಡಿ ಪ್ರೊ. ಸುತ್ತೂರು ಮಾಲಿನಿ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಯುವ ಜನಾಂಗ ಜಿಮ್ ಹಾಗೂ ವರ್ಕೌಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜಿಮ್‌ಗೆ ಹೋಗುವುದು ಎನ್ನುವುದು ಆಧುನಿಕ ಯುಗದಲ್ಲಿ ಫ್ಯಾಷನ್ ಆಗಿ ಬಿಟ್ಟಿದೆ. ತೂಕ ಇಳಿಸಿಕೊಳ್ಳಬೇಕೆಂದು ಅನೇಕರು ಊಟ, ತಿಂಡಿ ಬಿಟ್ಟು ಹರಸಾಹಸ ಮಾಡುತ್ತಾರೆ. ಆದ್ರೆ ದೇಹದಲ್ಲಿ ಒಂದೇ ಸಮನೆ ಬದಲಾವಣೆ ಆದಾಗ ದೇಹದ ಒಳಗೆ ನಡೆಯುವ ಕ್ರಿಯೆಗಳಲ್ಲಿ ಏರುಪೇರು ಉಂಟಾಗಬಹುದು. ಹಾರ್ಮೊನು ಬದಲಾವಣೆ, ರಕ್ತದೊತ್ತದ ಹೀಗೆ ನಾನಾ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ವಿಡಿಯೊ ನೋಡಿ:
ಜಿಮ್‌ನಲ್ಲಿ ಕೆಲವರು ನಾಲ್ಕು- ಐದು ಗಂಟೆಗಿಂತಲೂ ಹೆಚ್ಚು ಹೊತ್ತು ವರ್ಕೌಟ್ ಮಾಡುತ್ತಾರೆ. ಇದು ಅವರ ದೇಹದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮವನ್ನು ಬೀರಬಹುದು. ಇದರಿಂದ ಫಿಟೆನೆಸ್ ಮಾತ್ರವಲ್ಲದೆ ದೇಹದ ಚಾರ್ಮ್, ಚೈತನ್ಯ ಹಾಳಾಗುತ್ತದೆ. ಅದರಲ್ಲಿ ಸಣ್ಣ ಅವಧಿಯಲ್ಲಿ ಹೆಚ್ಚು ಗಂಟೆಗಳ ಕಾಲ ವರ್ಕೌಟ್ ಮಾಡುವುದು ಬಹಳಷ್ಟು ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ
ಅತಿಯಾದ ವರ್ಕೌಟ್‌ನಿಂದ ನಮ್ಮ ಸ್ನಾಯುಗಳಲ್ಲಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಕಾರ್ಟಿಸೋಲ್ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇದು ಪುರುಷರ ಫಲವತ್ತತೆ ಮೇಲೆಯೂ ಪರಿಣಾಮ ಬೀರಬಹುದು. ಅತಿಯಾಗಿ ವರ್ಕೌಟ್ ಮಾಡಿದರೆ ದೇಹದಂಡನೆ ಉಂಟಾಗಿ ಹೃದಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.
ಅದರಲ್ಲೂ ಜಿಮ್ ಮಾಡಲು ದೇಹಕ್ಕೆ ಹೆಚ್ಚಿನ ಶಕ್ತಿ ಬೇಕೆಂದು ವಿವಿಧ ಪಾನೀಯಗಳನ್ನು ಸೇವಿಸುವವರು ಅನೇಕರಿದ್ದಾರೆ. ಪುರುಷರಲ್ಲಿ ಈ ಹವ್ಯಾಸ ಮುಂದೊಂದು ದಿನ ಬಂಜೆತನಕ್ಕೆ ಕಾರಣವಾಗಬಹುದು. ಪ್ರೊಟೀನ್ ಭರಿತ ಪಾನೀಯಗಳು, ಸ್ಟಿರಾಯ್ಡ್ ಸೇವಿಸಿದರೆ ಇವು ಹಾರ್ಮೋನ್ ವ್ಯತ್ಯಾಸವನ್ನು ಉಂಟು ಮಾಡಬಹುದು. ಇದರಿಂದ ವೀರ್ಯಾಣುಗಳ ಕೊರತೆಯೂ ಕಾಡಬಹುದು ಎಂದು ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.