ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಪಾಪಿಗಳ ಬೇಟೆ; 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನನ್ನು ಎನ್‌ಕೌಂಟರ್‌ ಮೂಲಕ ಹೊಡೆದುರುಳಿಸಿದ ಪೊಲೀಸರು

West Bengal Encounter: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ತಪ್ಪಿಸಿಕೊ‍ಳ್ಳುವ ಪ್ರಯತ್ನದ ವೇಳೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ್‌ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯ್ತು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನ ಎನ್‌ಕೌಂಟರ್‌

ದಿಲೀಪ್‌ ರಾಯ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 9, 2026 9:58 PM

ಕೋಲ್ಕತಾ, ನ. 9: ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಆರೋಪಿಗಳ ಎನ್‌ಕೌಂಟರ್‌ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೊಲೆ, ಅತ್ಯಾಚಾರದಂತಹ ಘೋರ ಕೃತ್ಯ ಎಸಗಿದವರು ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಯತ್ನದ ವೇಳೆ ಎನ್‌ಕೌಂಟರ್‌ಗೆ ಬಲಿಯಾಗುತ್ತಿದ್ದಾರೆ. ಉತ್ತರ ಪ್ರದೇಶ ಅಸ್ಸಾಂ, ಆಂಧ್ರ ಪ್ರದೇಶದ ಬಳಿಕ ಇದೀಗ ಪಶ್ಚಿಮ ಬಂಗಾಳ ಸರದಿ (West Bengal Encounter). 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪಾಪಿ ಇದೀಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಉತ್ತರ ದಿನಾಜ್ಪುರ್‌ ಜಿಲ್ಲೆಯಲ್ಲಿ ಸೋಮವಾರ (ನವೆಂಬರ್‌ 9) ಘಟನೆ ನಡೆದಿದ್ದು, ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯ್ತು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ತಿಳಿಸಿದ್ದಾರೆ.

ತನ್ನ ಸಬಂಧಿ, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆದು ಆಕೆಯನ್ನು ಹತೈಗೈದ ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿಯಾಗಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ರಕ್ಷಣೆಗಾಗಿ ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯ್ತು.

ಕ್ಲಾಸ್‌ ರೂಂನಲ್ಲೇ ಬಾಲಕಿ ಮೇಲೆ ಮರಕೊಯ್ಯುವ ಯಂತ್ರದಿಂದ ಹಲ್ಲೆ ಎಸಗಿದ ಪಾಗಲ್‌ ಪ್ರೇಮಿ ಕಾಲಿಗೆ ಗುಂಡೇಟು

ಮೃತ ಆರೋಪಿಯನ್ನು ದಿಲೀಪ್‌ ರಾಯ್‌ ಎಂದು ಗುರುತಿಸಲಾಗಿದೆ. ರಾಯ್‌ಗಂಜ್‌ ಗ್ರಾಮದಲ್ಲಿ ಅಡಗಿಕೊಂಡಿದ್ದ ಆತನನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಈ ವೇಳೆ ಎನ್‌ಕೌಂಟರ್‌ ನಡೆಯಿತು ಎಂದು ಮೂಲಗಳು ತಿಳಿಸಿವೆ.

ʼʼಪೊಲೀಸ್‌ ದಾಳಿಯಲ್ಲಿ ಗಾಯಗೊಂಡ ದಿಲೀಪ್‌ ರಾಯ್‌ನನ್ನು ಕೂಡಲೇ ರಾಯ್‌ಗಂಜ್‌ ವೈದ್ಯಕೀಯ ಕಾಲೇಜ್‌ ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕುಲಿಕ್‌ ನದಿ ದಡದ ಕಾಡಿನಲ್ಲಿ ಸಂತ್ರಸ್ತ ಬಾಲಕಿಯ ನಗ್ನ ಮತ್ತು ಕೊಳೆತ ಮೃತದೇಹ ಪತ್ತೆಯಾದ ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲೀಪ್‌ ರಾಯ್‌ ಪತ್ತೆಗಾಗಿ 4 ದಿನಗಳಿಂದ ಹುಡುಕಾಟ ನಡೆಸಿದ್ದರು.

ಆತ ಗೌರಿ ಗ್ರಾಮ ಪಂಚಾಯತ್‌ ಪರಿಸರದಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದರು. ತಪ್ಪಿಸಿಕೊಳ್ಳುವ ಯತ್ನದ ವೇಳೆ ಆತ ಪೊಲೀಸರತ್ತ ಫೈರಿಂಗ್‌ ನಡೆಸಿದ್ದ. ಜಾರ್ಖಂಡ್‌ ಮೂಲದ ಈತ ಪಶ್ಚಿಮ ಬಂಗಾಳದ ಮೂಲಕ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ ವೇಳೆ ಈ ಘಟನೆ ನಡೆದಿದೆ.

ಗುವಾಹಟಿ ಹತ್ಯಾಕಾಂಡ ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ

ಬಾಲಕಿಯ ಭೀಕರ ಹತ್ಯೆ

ನವೆಂಬರ್‌ 3ರಂದು ಸಂಜೆ ಮನೆಗೆ ಮರಳುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಅದಾಗಿ 2 ದಿನಗಳ ಬಳಿಕ ಆಕೆಯ ಮೃತದೇಹ ಕುಲಿಕ್‌ ನದಿ ದಡದಲ್ಲಿ ಪತ್ತೆಯಾಯ್ತು. ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಸಾಬೀತಾಗಿತ್ತು. ಆಕೆಯ ಸಂಬಂಧಿ ದಿಲೀಪ್‌ ರಾಯ್‌ ಕುಲಿಕ್‌ ನದಿ ತೋರಿಸುವುದಾಗಿ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎನ್ನುವುದು ತನುಖೆ ವೇಳೆ ತಿಳಿದು ಬಂತು. ಇದೀಗ ಆತನ ಹತ್ಯೆಯಾಗಿದ್ದು, ಬಾಲಕಿಗೆ ನ್ಯಾಯ ದೊರೆತಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವರ್ಷದ ಮೇಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ನಡೆಯುತ್ತಿರುವ 4ನೇ ಎನ್‌ಕೌಂಟರ್‌ ಇದು.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.