Murder Case: ಬೆಂಗಳೂರಲ್ಲಿ ಮತ್ತೊಂದು ಬರ್ಬರ ಹತ್ಯೆ, ಸೆಕ್ಯೂರಿಟಿ ಗಾರ್ಡ್ ಕೊಲೆ
ಬ್ಯಾಟರಾಯನಪುರದ ಗಾರ್ಮೆಂಟ್‌ನಲ್ಲಿ ಗಣೇಶ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳಿಗಾಗಿ ಸದ್ಯ ಪೋಲಿಸಲು ಹುಡುಕಾಟ ನಡೆಸುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ (murder case) ನಡೆದಿದ್ದು, ಬೆಂಗಳೂರಿನ (Bengaluru crime news) ಬ್ಯಾಟರಾಯನಪುರದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಚಾಕುವಿನಿಂದ ಇರಿದು (Stabbing) ಬರ್ಬರವಾಗಿ ಹತ್ಯೆಗೈಯಲಾಗಿದೆ. ನೇಪಾಳ ಮೂಲದ ಗಣೇಶ್ (32) ಎನ್ನುವ ಸೆಕ್ಯೂರಿಟಿ ಗಾರ್ಡ್ (Security guard) ಕೊಲೆ ಆದವರು. ಬ್ಯಾಟರಾಯನಪುರದ ಟಿಂಬರ್ ಗಾರ್ಡನ್ ಬಳಿ ಈ ಭೀಕರ ಕೊಲೆ ನಡೆದಿದೆ.
ಬ್ಯಾಟರಾಯನಪುರದ ಗಾರ್ಮೆಂಟ್‌ನಲ್ಲಿ ಗಣೇಶ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳಿಗಾಗಿ ಸದ್ಯ ಪೋಲಿಸಲು ಹುಡುಕಾಟ ನಡೆಸುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ಎಟಿಎಂ ದರೋಡೆ, 30 ಲಕ್ಷ ರೂ. ಮಂಗಮಾಯ
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಆಕ್ಟಿವ್ ಆಗಿರುವ ʼಬೆಡ್ ಶೀಟ್ ಗ್ಯಾಂಗ್ʼ ಎಟಿಎಂ ಒಂದನ್ನು ದರೋಡೆ ನಡೆಸಿದೆ. ಸುಮಾರು 30 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ತಂಡ ಎಸ್‌ಬಿಐ ಎಟಿಎಂನಿಂದ ಕಳ್ಳತನ ನಡೆಸಿದೆ.
ಆಂಧ್ರಪ್ರದೇಶ ಮೂಲದ ಕಪ್ಪು ಬಣ್ಣದ ಕ್ರೇಟಾ ಕಾರಿನಲ್ಲಿ ಆಗಮಿಸಿದ ತಂಡ ಬೆಡ್ ಶೀಟ್ ಹೊದ್ದುಕೊಂಡೇ ಕಾರಿನಿಂದ ಇಳಿದಿದೆ. ಮೊದಲು ಎಟಿಎಂನ ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಹೊಡೆದಿದ್ದು, ನಂತರ ಕಾರಿನಲ್ಲಿದ್ದ ಇತರರು ಬಂದು ಎಟಿಎಂ ಒಳಗೆ ನುಗ್ಗಿ ಗ್ಯಾಸ್ ಕಟರ್ ಬಳಸಿ ಎಟಿಎಂ ಮಷೀನ್ ಒಡೆದು ಕಳ್ಳತನ ನಡೆಸಿದ್ದಾರೆ.
ರಸ್ತೆ ಬದಿ ಇರುವ SBI ಎಟಿಎಂನಲ್ಲಿ ರಾಜಾರೋಷವಾಗಿ ಕಳ್ಳತನ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಬೆಡ್ ಶೀಟ್ ಗ್ಯಾಂಗ್ ಈ ಒಂದು ದರೋಡೆ ನಡೆಸಿದೆ. ಕೇವಲ 6 ನಿಮಿಷದಲ್ಲಿ ಲಕ್ಷ ಹಣ ದೋಚಿ ಪರಾರಿ ಆಗಿದ್ದಾರೆ. ಪೋಲೀಸರ ಅಂದಾಜಿನ ಪ್ರಕಾರ ಎಟಿಎಂ ನಲ್ಲಿ ಇದ್ದ ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿ ಪರಾರಿಯಾಗಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Road Accident: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ; 5 ಸಾವು