ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Murder Case: ಆಸ್ತಿಗಾಗಿ ಕಲಹ, ತಮ್ಮನಿಗೆ ಬೀಸಿದ ಕತ್ತಿ ಮಗಳ ಪ್ರಾಣ ತೆಗೀತು!

ಉಮರ್ ಮತ್ತು ಜುಮೈಲ ಚಿಕ್ಕಪ್ಪ ಶೇಕುಂ ನಡುವೆ ಜಗಳ ಆಗುತ್ತಿದ್ದಾಗ ಜಗಳ ಬಿಡಿಸಲು ಉಮರ್ ಮಗಳು ಜುಮೈಲಾ ಬಂದಿದ್ದಳು. ಈ ವೇಳೆ ‌ಶೇಕುಂಗಾಗಿ ಬೀಸಿದ ಅಪ್ಪನ ಕತ್ತಿ ಏಟು ತಗುಲಿ ಜುಮೈಲ ಸಾವನ್ನಪ್ಪಿದ್ದಾಳೆ. ಆರೋಪಿ ಉಮರ್ ಫಾರೂಕ್‌ನನ್ನು ಮಂಜೇಶ್ವರ ಠಾಣೆ ಪೋಲೀಸರು ಆರೆಸ್ಟ್ ಮಾಡಿದ್ದಾರೆ.

ಆಸ್ತಿಗಾಗಿ ಕಲಹ, ತಮ್ಮನಿಗೆ ಬೀಸಿದ ಕತ್ತಿ ಮಗಳ ಪ್ರಾಣ ತೆಗೀತು!

ಹತ್ಯೆಯಾದ ಜುಮೈಲಾ, ಆರೋಪಿ ಉಮರ್ -

ಹರೀಶ್‌ ಕೇರ
ಹರೀಶ್‌ ಕೇರ Feb 3, 2026 11:57 AM

ಕಾಸರಗೋಡು, ಫೆ.03 : ಆಸ್ತಿಗಾಗಿ ಹುಟ್ಟಿಕೊಂಡ (Property dispute) ಕೌಟುಂಬಿಕ ಕಲಹದ ಪರಿಣಾಮ ತಂದೆಯಬ್ಬ ತನ್ನ ಮಗಳನ್ನೇ ಬಲಿ (Murder Case) ಕೊಟ್ಟಿದ್ದಾನೆ. ಕಾಸರಗೋಡಿನ (Kasaragod) ಮಂಜೇಶ್ವರದ ತುಮಿನಾಡಿನಲ್ಲಿ ಈ ಘಟನೆ ಸಂಭವಿಸಿದೆ. 18 ವರ್ಷದ ಮಗಳು ಜುಮೈಲ ಕೊಲೆಯಾದ ದುರ್ದೈವಿಯಾಗಿದ್ದು, ಜುಮೈಲಾ ತಂದೆ ಉಮ್ಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ.

ಆರೋಪಿ ಫಾರೂಕ್ ಪತ್ನಿಯ ಸಹೋದರಿ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಅದೇ ಮನೆಯಲ್ಲಿ ವಾಸವಿದ್ದ ಫಾರೂಕ್ ಪತ್ನಿ ಹಾಗೂ ಮಗಳು. ಫಾರೂಕ್ ಮತ್ತು ಪತ್ನಿ ತಾಹಿರ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಗಲಾಟೆ ತಾರಕಕ್ಕೆ ಏರಿ ವಿಚ್ಛೇದನದ ಮಾತುಕತೆ ನಡೆದಿತ್ತು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದಾನೆ.

ಉಮರ್ ಮತ್ತು ಜುಮೈಲ ಚಿಕ್ಕಪ್ಪ ಶೇಕುಂ ನಡುವೆ ಜಗಳ ಆಗುತ್ತಿದ್ದಾಗ ಜಗಳ ಬಿಡಿಸಲು ಜುಮೈಲಾ ಬಂದಿದ್ದಳು. ಈ ವೇಳೆ ಅಪ್ಪನಿಂದಲೇ ಕತ್ತಿ ಏಟು ತಗುಲಿ ಜುಮೈಲ ಸಾವನ್ನಪ್ಪಿದ್ದಾಳೆ. ಆರೋಪಿ ಉಮರ್ ಫಾರೂಕ್‌ನನ್ನು ಮಂಜೇಶ್ವರ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಜಮೀನು ಒತ್ತುವರಿ, ತಮ್ಮನ ಪ್ರಾಣ ತೆಗೆದ ಅಣ್ಣ

ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ (Property Dispute) ವ್ಯಕ್ತಿಯೊಬ್ಬ ತನ್ನ ತಮ್ಮನ ತಲೆ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ನಡೆದಿದೆ. ಕೊಲೆಯಾದವನನ್ನು ಸಿ.ಕೆ ನೀಲಪ್ಪ (62) ಎಂದು ಗುರುತಿಸಲಾಗಿದೆ. ಹತ್ಯೆಗೈದವನನ್ನು ಸಿ.ಕೆ ಚಂದ್ರಪ್ಪ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶ ಮರ್ಯಾದಾ ಹತ್ಯೆ: ಥೂ ಇವನೆಂಥಾ ಅಪ್ಪ?! ಕರೆಂಟ್ ಶಾಕ್ ನೀಡಿ ಮಗಳನೇ ಕೊಂದ ರಾಕ್ಷಸ

ಜಮೀನು ಒತ್ತುವರಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ, ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದು, ಚಂದ್ರಪ್ಪ ತಮ್ಮನ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ನೀಲಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾಯಕೊಂಡ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊಲೆಯಾದ ನೀಲಪ್ಪ ಕುಟುಂಬಸ್ಥರು, ಕೊಲೆಗೆ ಚಂದ್ರಪ್ಪನ ಕುಟುಂಬದ ಸದಸ್ಯರು ಸಹಕರಿಸಿದ್ದಾರೆ. ಅವರೆಲ್ಲರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ದೆಹಲಿ ಪೊಲೀಸ್‌ ಕಮಾಂಡೋ ಹತ್ಯೆ ಕೇಸ್‌; ಕೊಲೆಗೂ ಮುನ್ನ ವಿಡಿಯೋ ಮಾಡಿದ್ದ ಪಾಪಿ ಪತಿ