ಸ್ಮಶಾನಕ್ಕೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ; ಲೊಕೇಶನ್ ಕಂಡು ಬೆಚ್ಚಿಬಿದ್ದ ಡೆಲಿವರಿ ಬಾಯ್!
Viral Video: ಇಲ್ಲೊಬ್ಬ ಮಹಿಳೆ ಬಿರಿಯಾನಿ ಆರ್ಡರ್ ಮಾಡಿದ್ದು ಆಕೆಯ ಲೊಕೇಶನ್ ಕಂಡು ಡೆಲಿವರಿ ಬಾಯ್ ದಂಗಾಗಿ ಹೋಗಿದ್ದಾನೆ. ಮಹಿಳೆಯೊಬ್ಬರು ಡೆಲಿವರಿ ಬಾಯ್ ಗೆ ಸ್ಮಶಾನದ ಒಳಗೆ ಬಂದು ಪಾರ್ಸೆಲ್ ನೀಡುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಮಶಾನಕ್ಕೆ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ -
ನವದೆಹಲಿ,ಫೆ.3: ಇತ್ತೀಚೆಗೆ ಪ್ರತಿಯೊಬ್ಬರು ಆನ್ ಲೈನ್ ಮೂಲಕವೇ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಸಮಯ ಉಳಿತಾಯದ ಜೊತೆಗೆ ಆರ್ಡರ್ ಮಾಡಿದ ತಕ್ಷಣ ವಸ್ತುಗಳನ್ನು ಡೆಲಿವರಿ ಬಾಯ್ ತಲುಪಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಬಿರಿಯಾನಿ ಆರ್ಡರ್ ಮಾಡಿದ್ದು ಆಕೆಯ ಲೊಕೇಶನ್ ಕಂಡು ಡೆಲಿವರಿ ಬಾಯ್ ದಂಗಾಗಿ ಹೋಗಿದ್ದಾನೆ. ಮಹಿಳೆಯೊಬ್ಬರು ಡೆಲಿವರಿ ಬಾಯ್ ಗೆ ಸ್ಮಶಾನದ ಒಳಗೆ ಬಂದು ಪಾರ್ಸೆಲ್ ನೀಡುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಆಹಾರ ವಿತರಣಾ ಏಜೆಂಟ್ ಸ್ಮಶಾನದೊಳಗೆ ಆರ್ಡರ್ ನೀಡಲು ನಿರಾಕರಿಸುವುದನ್ನು ತೋರಿಸುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬಳು ಬಿರಿಯಾನಿ ಆರ್ಡರ್ ಮಾಡಿದ್ದು ಡೆಲಿವರಿ ಏಜೆಂಟ್ ಗ್ರಾಹಕರು ನೀಡಿದ ಲೊಕೇಶನ್‌ಗೆ ತಲುಪುತ್ತಾನೆ. ಆದರೆ ತಾನು ನಿಂತಿರುವುದು ಸ್ಮಶಾನದ ಎದುರು ಎಂದು ತಿಳಿದುಕೊಂಡ ತಕ್ಷಣ ಆತಂಕಕ್ಕೊಳಗಾದ ಡೆಲಿವರಿ ಬಾಯ್, ಒಳಗೆ ಹೋಗಲು ನಿರಾಕರಿಸುತ್ತಾನೆ. ಮಹಿಳೆಯೂ ತಾನು ಸ್ಮಶಾನದ ಒಳಗಡೆ ಇದ್ದೇನೆ, ನೀವು ಗೇಟ್ ದಾಟಿ ಬನ್ನಿ ಎಂದು ಹೇಳುತ್ತಾಳೆ.
ವಿಡಿಯೋ ನೋಡಿ:
SHOCKER 🚨 Woman orders food at a Graveyard 🤯
— News Algebra (@NewsAlgebraIND) February 2, 2026
DELIVERY AGENT : Ma'am, I have arrived with the biryani. Where are you? I can't see you.
WOMAN : Enter through the gate.
The delivery agent refuses to enter. pic.twitter.com/XNZHLWDuKN
ಕ್ಲಿಪ್‌ನಲ್ಲಿ, ವಿತರಣಾ ಏಜೆಂಟ್ ಸ್ಥಳವನ್ನು ತಲುಪಿದ ನಂತರ ಗ್ರಾಹಕರಿಗೆ ಕರೆ ಮಾಡಿ ಬಿರಿಯಾನಿಯೊಂದಿಗೆ ಬಂದಿದ್ದೇನೆ ಎಂದು ಹೇಳುವುದನ್ನು ವಿಡಿಯೊ ತೋರಿಸುತ್ತದೆ. ಆದರೆ ಮಹಿಳೆ ಶಾಂತವಾಗಿ ಗೇಟ್ ಮೂಲಕ ಒಳಗೆ ಬರಲು ಸೂಚಿಸುತ್ತಾಳೆ. ಆದಾಗ್ಯೂ, ಸ್ಥಳವು ಸ್ಮಶಾನ ಎಂದು ಅರಿತುಕೊಂಡ ಏಜೆಂಟ್ ತಕ್ಷಣ ಭಯಭೀತರಾಗುತ್ತಾರೆ.
Viral Video: ಎತ್ತಿನ ಬಂಡಿ ಜತೆ ತೆರಳುತ್ತಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಸಾವು: ವಿಡಿಯೊ ವೈರಲ್
ಇಲ್ಲಿ ಕತ್ತಲಿದೆ, ನನಗೆ ದೆವ್ವಗಳ ಭಯ ಆಗುತ್ತಿದೆ. ನಾನು ಒಳಗೆ ಬರುವುದಿಲ್ಲ, ನೀವೇ ಬಂದು ಬಿರಿಯಾನಿ ಪಡೆದುಹೋಗಿ ಎಂದು ಆತ ಪದೇ ಪದೇ ವಿನಂತಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ಒಳಗಾದರೂ ಇದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅನೇಕ ಬಳಕೆದಾರರು ಈ ವಿಡಿಯೊವನ್ನು ತಮಾಷೆಯಾಗಿ ಕಂಡುಕೊಂಡರೆ, ಕೆಲವರು ಇದನ್ನು ಸ್ಕ್ರಿಪ್ಟೆಡ್ ಎಂದು ಕರೆದರು. ಕ್ಯಾಮೆರಾ ಆಂಗಲ್ ಹಾಗೂ ಸಂಭಾಷಣೆಯನ್ನು ಗಮನಿಸಿದ ನೆಟ್ಟಿಗರು ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ವಿಡಿಯೊ ಎಂದು ಕಿಡಿಕಾರಿದ್ದಾರೆ