Physical assault: ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಪಾಪಿ ತಂದೆ; ಹುಟ್ಟಿದ ಮಗು ಅನಾಥ
ರಕ್ಷಕನೇ ಭಕ್ಷಕನಾದ ಕಥೆ ಇದು. ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ರೈಲಿನಲ್ಲಿ ಚೀಲದೊಳಗೆ ತುಂಬಿಸಲಾಗಿದ್ದ ನವಜಾತ ಶಿಶುವೊಂದು ಪತ್ತೆಯಾದ ಬಳಿಕ ಬಿಹಾರದ ಬಾಲಕಿಯೊಬ್ಬಳು ತನ್ನ ತಂದೆಯ ಕೈಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ತಿಳಿದು ಬಂದಿದೆ.


ಪಾಟ್ನಾ: ರಕ್ಷಕನೇ ಭಕ್ಷಕನಾದ ಕಥೆ ಇದು. ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ (Physical assault) ಮೊರಾದಾಬಾದ್‌ನಲ್ಲಿ ರೈಲಿನಲ್ಲಿ ಚೀಲದೊಳಗೆ ತುಂಬಿಸಲಾಗಿದ್ದ ನವಜಾತ ಶಿಶುವೊಂದು ಪತ್ತೆಯಾದ ಬಳಿಕ ಬಿಹಾರದ ಬಾಲಕಿಯೊಬ್ಬಳು ತನ್ನ ತಂದೆಯ ಕೈಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಕುಟುಂಬದವರು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂಬ ಸತ್ಯ ಹೊರಬಿದ್ದಿದೆ.
ಜೂನ್ 22 ರಂದು ಮಗು ಜನಿಸಿದ್ದು, ತಂದೆಯೇ ಅತ್ಯಾಚಾರ ಎಸಗಿದ ನಂತರ ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಚಿಕಿತ್ಸೆಗಾಗಿ ರೈಲಿನಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ರೈಲು ವಾರಣಾಸಿ ಬಳಿ ಇದ್ದಾಗ ಬಾಲಕಿ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆ ಮಗುವನ್ನು ಚೀಲದಲ್ಲಿ ಹಾಕಿ ಮತ್ತೊಂದು ರೈಲಿನ ಶೌಚಾಲಯದೊಳಗೆ ಇಟ್ಟು ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ಪರಾರಿಯಾಗಿದ್ದರು.
ಪಾಟ್ನಾ-ಚಂಡೀಗಢ ಬೇಸಿಗೆ ವಿಶೇಷ ರೈಲಿನಲ್ಲಿದ್ದ ಕೆಲವು ಮಾರಾಟಗಾರರು ಬರೇಲಿಯ ಬಳಿ ಮಗುವಿನ ಅಳು ಕೇಳಿ ಅದನ್ನು ಕಂಡಿದ್ದರು. ಅವರು ಮಗುವನ್ನು ಟಿಕೆಟ್ ತಪಾಸಣಾ ಸಿಬ್ಬಂದಿಯ ಬಳಿಗೆ ಕರೆದೊಯ್ದರು, ಅವರು ಶಾಖ ಮತ್ತು ತೇವಾಂಶದಲ್ಲಿ ಉಸಿರುಗಟ್ಟುವ ಭಯವಿದ್ದ ಕಾರಣ ಮಗುವನ್ನು ಹವಾನಿಯಂತ್ರಿತ ಕೋಚ್‌ಗೆ ಕರೆದೊಯ್ದರು.
ಪ್ರಕರಣ ಭೇದಿಸಿದ್ದು ಹೇಗೆ?
ಮಗುವನ್ನು ಬ್ಯಾಗ್ನಲ್ಲಿ ಹಾಕಿ ಆರೋಪಿಗಳು ಪರಾರಿಯಾಗಿದ್ದರು. ಅದೇ ಬ್ಯಾಗ್‌ನಲ್ಲಿ ಒಂದು ಸಿಮ್ ಕಾರ್ಡ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. "ಪತ್ತೆಹಚ್ಚಿದಾಗ, ಸಿಮ್ ಕಾರ್ಡ್‌ನ ಮಾಲೀಕರು ಮಗು ತನ್ನ ಸಂಬಂಧಿ ಅಪ್ರಾಪ್ತ ಬಾಲಕಿಯದ್ದಾಗಿದ್ದು, ಅತ್ಯಾಚಾರದ ನಂತರ ಅವಳು ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Physical Assault: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ; ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಪೋಕ್ಸೋ ಕೇಸ್ ದಾಖಲು
ತನ್ನ ತಂದೆ ತುಂಬಾ ಮದ್ಯಪಾನ ಮಾಡುತ್ತಿದ್ದರು ಮತ್ತು ಗರ್ಭಿಣಿಯಾಗುವುದಕ್ಕೂ ಮೊದಲು ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾಳೆ ಎನ್ನಲಾಗಿದೆ. ರೈಲ್ವೆ ಪೊಲೀಸರು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಹಾಗೂ ಮಗುವನ್ನು ಸದ್ಯಕ್ಕೆ ಮಗು ಮೊರಾದಾಬಾದ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯಲ್ಲಿದೆ ಎಂದು ಅದರ ಮುಖ್ಯಸ್ಥ ಅಮಿತ್ ಕೌಶಲ್ ಹೇಳಿದ್ದಾರೆ.